ಕಾವೇರಿ ಎಂಬ ವಿದ್ಯಾರ್ಥಿನಿಗೆ ಕಾವೇರಿ ಪದದ ಅರ್ಥ ಕೇಳಿದ ಶಿಕ್ಷಣ ಸಚಿವರು…
ಇಂದು ಬಾಗಲಕೋಟೆಯ ಒಂಟಗೋಡಿ ಗ್ರಾಮದ ಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದರು.
ಶಾಲಾ ಭೇಟಿ ವೇಳೆ ಮಕ್ಕಳ ಕಲಿಕಾಗುಣಮಟ್ಟ ಪರೀಕ್ಷಿಸಿದರು. ಪ್ರವಾಹ ಹಿನ್ನೆಲೆಯಲ್ಲಿ ಶೆಡ್ ನಲ್ಲಿ ಶಾಲಾ ಮಕ್ಕಳು ಕಲಿಕೆ ಅರಿಯದ ಸಚಿವರು ಶೆಡ್ ನಲ್ಲಿ ಬ್ಲಾಕ್ ಬೋರ್ಡ್ ಇಲ್ಲದೆ ಹೇಗೆ ಕಲಿಸ್ತೀರಿ? ಪಠ್ಯ ಪುಸ್ತಕ ನಿಮಗೆ ಬಂದಿದ್ದಾವೇನು ಅಂತ ಪ್ರಶ್ನಿಸಿದರು. ಈ ಪ್ರಶ್ನೆಗೆ ವಿದ್ಯಾರ್ಥಿಗಳ ಬಳಿ ಉತ್ತರವೇ ಇರಲಿಲ್ಲ.
ಇನ್ನೂ ೭ನೇ ವರ್ಗದ ಕಾವೇರಿ ಎಂಬ ವಿದ್ಯಾರ್ಥಿನಿಗೆ ಕಾವೇರಿ ಪದದ ಅರ್ಥ ಕೇಳಿದರು. ಕಾವೇರಿ ಅನ್ನೋದು ನದಿಯೆಂದು ವಿದ್ಯಾರ್ಥಿನಿ ಉತ್ತರ ನೀಡಿದಳು. ಕಾವೇರಿ ನದಿ ಎಲ್ಲಿ ಬರುತ್ತೆ ಎಂದಾಗ ಉತ್ತರಿಸದ ವಿದ್ಯಾರ್ಥಿ, ಕಾವೇರಿ ಇಲ್ಲಿಯೇ ಇದ್ದೇನೆ ಮತ್ಯಾಕೆ ಉತ್ತರವೆಂದು ಹಾಸ್ಯ ಚಟಾಕಿ ಹಾರಿಸಿದರು.
ಬಳಿಕ ೭ ರ ಮಗ್ಗಿ ಕೇಳುವ ಮೂಲ ಶಾಲೆಯ ಗುಣಮಟ್ಟ ಪರೀಕ್ಷಿಸಿದರು. ಶೆಡ್ ನಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಕಲಿಕೆ ಹಿನ್ನೆಲೆಯಲ್ಲಿ ಬ್ಲಾಕ್ ಬೋರ್ಡ್ ವ್ಯವಸ್ಥೆ ಕಲ್ಪಿಸೋವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

