ಕೆ.ಆರ್.ಎಸ್‌. ನ ಡಿಸ್ನಿಲ್ಯಾಂಡ್ ಯೋಜನೆಗೆ ಎಳ್ಳುನೀರು? ಬಿಜೆಪಿ ಸರ್ಕಾರದ ನಡೆಗೆ‌ ದಳಪತಿಗಳ ಖಂಡನೆ‌

ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದ ವೇಳೆ ಕೆ.ಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಯೋಜನೆ ಅನುಷ್ಠಾನ ಗೊಳಿಸಲು ಮುಂದಾಗಿತ್ತು. ಇದಕ್ಕಾಗಿ ಸರ್ಕಾರ ಸಾಕಷ್ಟು ಸಿದ್ದತೆ ಮಾಡಿಕೊಂಡಿತ್ತು. ಅಲ್ದೆ ಹಣಕಾಸು‌ ಸಂಬಂಧ ಕ್ರಿಯಾಯೋಜನೆ , ಈ ಪ್ರಾಜೆಕ್ಟ್ ಗೆ ಬೇಕಾದ  ಅಗತ್ಯ ಜಾಗಕ್ಕೆ ಸರ್ವೆ ಕಾರ್ಯ ಕೂಡ ಮುಗಿಸಿತ್ತು.ಈ ಯೋಜನೆ ಮೈತ್ರಿ ಸರ್ಕಾರದಲ್ಲಿ ಅದ್ರಲ್ಲೂ ಮಾಜಿ ಸಿ.ಎಂ. Hdk ಹಾಗು ಮಾಜಿ ಇಂಧನ ಸಚಿವ ಡಿ.ಕೆ.ಶಿಯ ಕನಸಿನ‌ ಕೂಸಾಗಿತ್ತು.‌ಆದ್ರೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಆಗಿನ ಮೈತ್ರಿ ಸರ್ಕಾರದ ಯೋಜನೆಗೆ ಬಹುತೇಕ ಎಳ್ಳು ನೀರು ಬಿಟ್ಟಿದೆ.

ಹೌದು! ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದ ವೇಳೆ ಮಂಡ್ಯದ ಕೆ‌.ಆರ್.ಎಸ್ ನಲ್ಲಿ ಡಿಸ್ನಿಲ್ಯಾಂಡ್ ಸ್ಥಾಪಿಸಲು ಮೈತ್ರಿ ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಯೋಜನೆ ಕೂಡ ಸಿದ್ದವಾಗಿತ್ತು. ಪ್ರವಾಸೋದ್ಯದ ಹೆಸರಲ್ಲಿ ಕೆ‌ಆರ್‌ಎಸ್ ನಲ್ಲಿ ಡಿಸ್ನಿಲ್ಯಾಂಡ್ ಸೇರಿದಂತೆ ಬೃಹತ್ ಕಾವೇರಿ ಪ್ರತಿಮೆ ನಿರ್ಮಿಸಲು ಯೋಜನೆ ಸಿದ್ದಪಡಿಸಲಾಗಿತ್ತು. ಇದಕ್ಕಾಗಿ ಅಗತ್ಯ ಸಿದ್ದತೆಗಳು ಕೂಡ ನಡೆದು ಇನ್ನೇನು ಈ ಯೋಜನೆ ಅನುಷ್ಟಾನಕ್ಕೆ ಬರುವ ವೇಳೆ ಮೈತ್ರಿ ಸರ್ಕಾರ ಪತನವಾಗಿತ್ತು. ಡಿಸ್ನಿಲ್ಯಾಂಡ್ ಯೋಜನೆಯಲ್ಲಿ ಮೈತ್ರಿ ನಾಯಕರಾದ ಡಿಕೆಶಿ ಮತ್ತು hdk ಬಹಳ ಆಸಕ್ತಿ ಹೊಂದಿದ್ದು,ಇದನ್ನು‌ ಜನ್ರ ವಿರೋಧದ ನಡುವೆ ಸಾಕಾರ ಮಾಡಲು ಮುಂದಾಗಿದ್ರು‌. ಆದ್ರೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಜೆ ಬಂದಿದ್ದು,ಮೈತ್ರಿ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆಗೆ ಎಳ್ಳುನೀರು ಬಿಡುವ ಲಕ್ಷಣ ಗೋಚರಿಸ್ತಿದೆ. ಇಂದು ಕೆ.ಆರ್.ಎಸ್. ಗೆ ಭೇಟಿ ನೀಡಿದ ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ ಕೆ.ಆರ್.ಎಸ್. ವೀಕ್ಷಣೆ ನಡೆಸಿ ಡಿಸ್ನಿಲ್ಯಾಂಡ್ ಕುರಿತಾಗಿ ಪ್ರತಿಕ್ರಿಯಿಸಿದ್ದು ಅ ತರಹದ ಲ್ಯಾಂಡು ಪಾಂಡು ನಮಗೆ ಗೊತ್ತಿಲ್ಲ,ನಾವು ಬೆಂಗಳೂರಿನವರು ಕರ್ನಾಟಕದವರು.ಕರ್ನಾಟಕದಲ್ಲಿ ನಾವು ಹೆಂಗೇ ಬೇಕೋ ಹಂಗೇ ಮಾಡ್ತೀವಿ,ನಾವೇ ಬುದ್ದಿವಂತರಿದ್ದೀವಿ. ಸದ್ಯಕ್ಕೆ ಅದೆಲ್ಲಾ ನಮ್ಮ ತಲೇಲಿ‌ ಇಲ್ಲ, ಇದನ್ನು ತರಲು ಹೊಂಟವರಿಗೇ ನನ್ನ ಕೋಟಿ ನಮಸ್ಕಾರ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಮೈತ್ರಿ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆಗೆ ಬಿಜೆಪಿ ಸರ್ಕಾರ ಎಳ್ಳು ನೀರು ಬಿಡ್ತಿರೋ ವಿಚಾರಕ್ಕೆ ಜೆಡಿಎಸ್ ದಳಪತಿಗಳು‌ ಅಸಮಧಾನ ಗೊಂಡಿದ್ದಾರೆ‌. ಅಲ್ದೆ ಬಿಜೆಪಿಯ ಈ ನಡೆಗೆ ಜಿಲ್ಲೆಯ ಮಾಜಿ ಉಸ್ತುವಾರಿ‌ ಸಚಿವ ಪುಟ್ಟರಾಜು ಕಿಡಿಕಾರಿದ್ದಾರೆ. ನಾವು ಆ ಯೋಜನೆಯನ್ನು ಸುಮ್ಮನೆ ಹುಡುಗಾಟಿಕೆ ಮಾಡಿದ್ದಲ್ಲ ಜಿಲ್ಲೆಯ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಿಗಳಿಗೆ ಉದ್ಯೋಗ ಕೊಡಿಸಲು ಮಾಡಿದ್ದು,  ನಾವು ಈ ಯೋಜನೆ ಮುಂದುವರೆಸಲು ಸರ್ಕಾರಕ್ಕೆ ಮನವಿ ಮಾಡ್ತೀವಿ. ಅವ್ರು ಮಾಡ್ಲಿಲ್ಲ ಅಂದ್ರೆ ಏನು‌ ಮಾಡೋಕೆ ಆಗುತ್ತೆ. ಈಗಾ್ಲೇ ಎಲ್ಲಾ ಇಲಾಖೆಗಳಿಂದ ಅನೋದನೆಯಾಗಿರೋ ಇದನ್ನು ತಡೆದ ರಾಜ್ಯ ಸರ್ಕಾರದ ವಿರುದ್ದ ಸದನದಲ್ಲಿ ಪ್ರಶ್ನೆ ಮಾಡ್ತಿವಿ. ಸದನದ ಹೊರೆಗೂ ಒಳಗೂ ಕೊನೆವರೆಗೂ ಹೋರಾಟ ಮಾಡ್ತಿವಿ ಅಂತಾ ಶಾಸಕ ಪುಟ್ಟರಟಜು ಅಸಮಧಾನ ಹೊರ ಹಾಕಿದ್ದಾರೆ.

ಒಟ್ಟಾರೆ ಕೆ.ಆರ್‌.ಎಸ್. ನ ಡಿಸ್ನಿಲ್ಯಾಂಡ್ ಯೋಜನೆ ವಿಚಾರದಲ್ಲಿ ಆಗ್ಲೆ ಸಾಕಷ್ಟು ಪರ ವಿರೋಧಗಳು ಇತ್ತು. ಆದ್ರೆ ಬದಲಾದ ರಾಜಕೀಯ ಚಿತ್ರಣದಿಂದ ಈ ಯೋಜನೆ ಬಹುತೇಕ ಕೈಬಿಡುವ ಲಕ್ಷಣ ಗೋಚರಿಸ್ತಿದ್ದು ಅಧಿಕೃತ ವಾಗಿ ಏನಾಗಲಿದೆ ಅನ್ನೋದ್ನ ಕಾದುನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights