ಕೇಂದ್ರದಿಂದ 8 ವಲಯಗಳ ಸುಧಾರಣೆಗೆ 50 ಸಾವಿರ ಕೋಟಿ ಹೂಡಿಕೆ!

ಕೊರೊನಾ ಹೊಡೆತಕ್ಕೆ ದೇಶ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಪ್ಯಾಕೇಜ್ ನ ವಿವರಣೆಯನ್ನು ಕಳೆದ ಮೂರು ದಿನಗಳಿಂದ ವಿತ್ತ ಸಚಿವೆ ವಿವರಣೆ ನೀಡಿದ್ದು ನಾನಾ ಕ್ಷೇತ್ರಗಳಿಗೆ ನೆರವು ಘೋಷಿಸಿದ್ದಾರೆ. ಇನ್ನುಳಿದಂತೆ ಇಂದು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ್ದು ಕೇಂದ್ರ ಸರ್ಕಾರ ಬಾಹ್ಯಕಾಶ, ವಿದ್ಯತ್, ಇಂಧನ, ಕಲ್ಲಿದ್ದಲು, ರಕ್ಷಣಾ ವಲಯ, ಗಣಿ, ವಿಮಾನಯಾನ, ಅಣುಶಕ್ತಿ ಹೀಗೆ 8 ವಲಯಗಳ ಸುಧಾರಣೆಗೆ 50 ಸಾವಿರ ಕೋಟಿ ಹೂಡಿಕೆ ಮಾಡಿದೆ.

ಹೌದು…. ಭಾರತದಲ್ಲಿಯೇ ರಕ್ಷಣಾ ಸಾಮಾಗ್ರಿಗಳನ್ನು ಉತ್ಪಾದಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮೇಕ್ ಇನ್ ಇಂಡಿಯಾ ಮೂಲಕ ಸ್ವಾವಲಂಭಿ ಭಾರತ ನಿರ್ಮಾಣ ಮಾಡಲಾಗುವುದು. ರಕ್ಷಣಾ ವಲಯದ ಉತ್ಪನ್ನ ಆಮದು ಕಡಿಮೆ ಮಾಡಲಾಗುವುದು. ಮಂಡಳಿಯ ಮೂಲಕ ಶಸ್ತ್ರಸ್ತ್ರ ಪೂರೈಕೆ ಹೆಚ್ಚಿಸಲಾಗುವುದು. ಭಾರತದಲ್ಲಿಯೇ ರಕ್ಷಣಾ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಬಜೆಟ್ ನಲ್ಲಿ ಅವಕಾಶ ನೀಡಲಾಗುವುದು. ರಕ್ಷಣಾ ವಲಯದಲ್ಲಿ ಶೇ 49 ರಿಂದ ಶೇ 74 ರಷ್ಟು ಎಫ್ ಡಿ ಐ ಹೆಚ್ಚಳ ಮಾಡಲಾಗುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.

ಇನ್ನೂ ರಕ್ಷಣಾ ವಲಯದ ಕಂಪನಿಗಳು ಷೇರು ಮಾರುಕಟ್ಟೆಗಳನ್ನು ಪ್ರವೇಶಿಸಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಬಾಹ್ಯಕಾಶ, ವಿದ್ಯತ್, ಇಂಧನ, ಕಲ್ಲಿದ್ದಲು, ರಕ್ಷಣಾ ವಲಯ, ಗಣಿ, ವಿಮಾನಯಾನ, ಅಣುಶಕ್ತಿ ಹೀಗೆ 8 ವಲಯಗಳ ಸುಧಾರಣೆಗೆ 50 ಸಾವಿರ ಕೋಟಿ ಹೂಡಿಕೆ ಮಾಡಿದೆ.

ವಾಯುವಲಯದ ಲಭ್ಯತೆ ಮತ್ತಷ್ಟು ಹೆಚ್ಚಳ ಮಾಡಲಾಗಿದೆ.  ಪಿಪಿಪಿ ಮೂಲಕ ಮತ್ತಷ್ಟು ವಿಮಾನ ನಿಲ್ದಾಣಗಳ ಸ್ಥಾಪನೆ ಮಾಡಲಾಗುವುದು. ವಿಮಾನ ನಿಲ್ದಾಣಗಳಲ್ಲಿ ಸಾರ್ವಜನಿಕ ಖಾಸಗೀ ಸಹಭಾಗಿತ್ವ ಇರಲಿದೆ. 12 ವಿಮಾನ ನಿಲ್ದಾಣಗಳಲ್ಲಿ ಖಾಸಗೀ ಹೂಡಿಕೆಯಿಂದ 13 ಸಾವಿರ ಕೋಟಿ ನಿರೀಕ್ಷೆ ಇದೆ.  3ನೇ ಹಂತದಲ್ಲಿ 6 ವಿಮಾನ ನಿಲ್ದಾಣಗಳ ಬಿಡ್ಡಿಂಗ್ ಮಾಡಲು ನಿರ್ಧಾರ ಮಾಡಲಾಗುವದು. ಏರ್ ಕ್ರಾಫ್ಟ್ ಗಳ ಖರೀದಿಗೆ ಭಾರತ ಹಬ್ ಆಗಿಲಿದೆ.  ಭಾರತದಲ್ಲಿಯೇ ವಿಮಾನ ದುರಸ್ಥಿ ಕಂಪನಿಗಳನ್ನು ತೆರೆಯಲಾಗುವುದು.

ಜೊತೆಗೆ ಕೇಂದ್ರಾಡಳಿತ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣಕ್ಕೆ ಕ್ರಮ ಕೈಗೊಳ್ಳಾಗಿದೆ. ಡಿಸ್ಕಾಂಗಳಿಂದ ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ತೊಂದರೆ ಯಾದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights