ಕೊರೊನಾದಿಂದ ಮುಕ್ತಿಯ ಹಾದಿಯಲ್ಲಿದೆ ಮೈಸೂರು! 77 ಸೋಂಕಿತರು ಗುಣಮುಖ

ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಭಾವಕ್ಕೆ ನಲುಗಿರುವ ಜಿಲ್ಲೆಗಳಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. ಬರೋಬ್ಬರಿ 90 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸರ್ಕಾರ ಮೈಸೂರು ಜಿಲ್ಲೆಯನ್ನು ರೆಡ್‌ ಜೋನ್‌ ಪಟ್ಟಿಯಲ್ಲಿರಿಸಿದೆ.

ಕಳೆದ ಸುಮಾರು ದಿನಗಳಿಂದ ಮೈಸೂರಿನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಹಲವಾರು ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. ಇಂದು ಒಂದೇ ದಿನ 8 ಮಂದಿ ಆಸ್ಪತ್ರೆಯಿಂದ ಮುಕ್ತಿ ಪಡೆದು ಮನೆಗೆ ತೆರಳಿದ್ದಾರೆ.

ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿಯ ಪ್ರಕಾರ  P265, P344,P375, P388, P416, P417, P426, P427 ಸಂಖ್ಯೆಗಳಲ್ಲಿ ಗುರುತಿಸಲಾಗಿದ್ದ ಸೋಂಕಿತರಲ್ಲಿ ಕೊರೊನಾ ಸಂಪೂರ್ಣ ವಾಸಿಯಾಗಿದ್ದು ಡಿಸ್ವಾರ್ಜ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೊರೊನಾ ಸೋಂಕು ವಾಸಿಯಾಗಿರುವವರ ಸಂಖ್ಯೆ 77ಕ್ಕೆ ಏರಿಕೆಯಾಗಿದ್ದು, ಆಕ್ವಿವ್‌ ಸೋಂಕಿತರ ಸಂಖ್ಯೆ 13ಕ್ಕೆ ಇಳಿದಿದ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.

ಮತ್ತೊಂದು ಸಂತೋಷದ ವಿಚಾರವೆಂದರೆ, ಮೈಸೂರಿನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ 90 ಸೋಂಕಿತರಲ್ಲಿ ಯಾರೊಬ್ಬರು ಸಾವಿಗೀಡಾಗಿಲ್ಲ. ಎಲ್ಲರಲ್ಲೂ ಸೋಂಕು ಗುಣಮುಖವಾಗುತ್ತಿದ್ದು, ಮೈಸೂರು ಕೊರೊನಾ ಹಾವಳಿಯಿಂದ ಬಿಡುಗಡೆ ಪಡೆಯುತ್ತಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 4762 ಕೊರೋನಾ ನಿಗಾ ಪ್ರಕರಣಗಳಿದ್ದವು. ಅವುಗಳಲ್ಲಿ 4435 ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 4345 ಪ್ರಕರಣಗಳು ನೆಗೆಟಿವ್‌ ಬಂದಿದ್ದವು. ಉಳಿದ 90 ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದ್ದು, 77 ಸೋಂಕಿತರು ಗುಣಮುಖರಾಗಿದ್ದಾರೆ. ಹಾಲಿ 13 ಪ್ರಕರಣಗಳು ಚಾಲ್ತಿಯಲ್ಲಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights