ಕೊರೊನಾ: ಗೃಹ ಬಂಧನಕ್ಕೆ ‘ಕೈ ಮುದ್ರೆ’ ಒತ್ತುತ್ತಿದೆ ರಾಜ್ಯ ಸರ್ಕಾರ

ಕರ್ನಾಟಕ ಸರ್ಕಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು “ಗೃಹ ಬಂಧನ …” ಎಂದು ಅಳಿಸಲಾಗದ ಶಾಯಿ ಬಳಸಿ “ಮುದ್ರೆ” ಮಾಡುತ್ತಿದೆ ಎಂದು ತಿಳಿದುಬಂದಿದೆ. ಈ ಮುದ್ರೆಯನ್ನು ಎಡಗೈಯ ಹಿಂಭಾಗಕ್ಕೆ ಒತ್ತಲಾಗುತ್ತದೆ. ಈಗಾಗಲೇ ಮಹಾರಾಷ್ಟ್ರ ಸರಕಾರವೂ ಈ ನಿಯಮವನ್ನು ತಂದಿದೆ.

“ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅಳಿಸಲಾಗದ ಶಾಯಿಯೊಂದಿಗೆ ‘ಗೃಹ ಬಂಧನ’ ಮುದ್ರೆ ಪ್ರಾರಂಭವಾಗಿದೆ. ಈ ಮುದ್ರೆಯೂ ಕ್ಯಾರೆಂಟೈನ್‌ನ ಕೊನೆಯ ದಿನಾಂಕವನ್ನು ಒಳಗೊಂಡಿದೆ” ಎಂದು ಎಎನ್‌ಐ ಟ್ವೀಟ್ ಮಾಡಿದೆ.

ರಕ್ಷಣಾತ್ಮಕವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಬೆಂಗಳೂರು, ಹೋಮ್‌ ಕ್ವಾರಂಟೈನ್ಡ್‌ ಏಪ್ರಿಲ್‌ 03, 2020ರವರೆಗೂ ಎಂದು ಮುದ್ರೆಯಲ್ಲಿ ಬರೆಯಲಾಗಿದೆ.

ಈಗಾಗಲೇ ದೇಶದಲ್ಲಿ ಸುಮಾರು 170 ದೃಡೀಕೃತ ಕೊರೊನ ವೈರಸ್ ಪ್ರಕರಣಗಳಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕೇರಳ ಮತ್ತು ಮಹಾರಾಷ್ಟ್ರ ಅತೀ ಪೀಡಿತ ರಾಜ್ಯಗಳಾಗಿದ್ದು, ಕ್ರಮವಾಗಿ 42 ಮತ್ತು 25 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 14 ಪ್ರಕರಣಗಳು ದಾಖಲಾಗಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ರಾಜ್ಯದಲ್ಲಿ ಕೊರೊನ ವೈರಸನ್ನು ನಿಭಾಯಿಸಲು ಎಲ್ಲಾ ಸಭೆ ಸಮಾರಂಭಗಳನ್ನು ಮಾರ್ಚ್ 31 ರ ವರೆಗೆ ಮುಂದೂಡುವಂತೆ ಆದೇಶಿಸಿದ್ದಾರೆ.

ಕೊರೊನ ವೈರಸ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ಜಿಲ್ಲೆಯ ಆಹಾರ ಮಾರುಕಟ್ಟೆಯಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಡಬ್ಲ್ಯುಎಚ್‌ಒ ಮಾಹಿತಿಯ ಪ್ರಕಾರ, ವಿಶ್ವಾದ್ಯಂತ 8,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 2 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights