ಕೊರೊನಾ ಚಿಕಿತ್ಸೆಗೆಂದು ಹೋಟೆಲ್, ಕಚೇರಿ, ಕಲ್ಯಾಣ ಮಂಟಪ ಬಿಟ್ಟುಕೊಟ್ಟ ಸ್ಟಾರ್ ನಟರು!

ಕೊರೊನಾ ನಿರಾಶ್ರಿತರಿಗೆ ಈಗಾಗಲೇ ಬಹುತೇಕ ಸ್ಟಾರ್ ಹಾಗೂ ಕಿರುತೆರೆ ನಟ ನಟಿಯರು ಸಹಾಯ ಹಸ್ತ ಚಾಚಿದ್ದಾರೆ. ಪಿಎಂ ಹಾಗೂ ಸಿಎಂ ಕೊರೊನಾ ಪರಿಹಾರ ನಿಧಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದರ ಜೊತೆಗೆ ಕೊರೊನಾ ಚಿಕಿತ್ಸೆಗೆಂದು ತಮ್ಮ ಒಡೆತನದ ಹೋಟೆಲ್, ಕಚೇರಿ, ಕಲ್ಯಾಣ ಮಂಟಪ ಬಿಟ್ಟುಕೊಟ್ಟು ಬೇಶ್ ಎನ್ನಿಸಿಕೊಂಡಿದ್ದಾರೆ.

ಹೌದು.. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದಕ್ಕೆ ತಮಿಳುನಾಡು ಕೂಡ ಹೊರತಾಗಿಲ್ಲ. ಸೂಪರ್ ಸ್ಟಾರ್ ರಜಿನಿಕಾಂತ್ ತಮ್ಮ ಒಡೆತನದ ಕಲ್ಯಾಣ ಮಂಟಪವನ್ನು ಕೊರೊನಾ ಚಿಕಿತ್ಸೆಗಾಗಿ ಬಿಟ್ಟುಕೊಟ್ಟಿದ್ದಾರೆ.ಚೆನೈನ ಕೋದಂಬಕಂನಲ್ಲಿರುವ ಶ್ರೂ ರಾಘವೇಂದ್ರ ಕಲ್ಯಾಣ ಮಂಟಪವನ್ನು ಕೊರೊನಾ ಐಸೋಲೇಶನ್ ಚಿಕಿತ್ಸೆಗೆ ರಜನಿಕಾಂತ ಮುಂದಾಗಿದ್ದು ಈ ಬಗ್ಗೆ ಪ್ರಸ್ತಾಪಿಸಿ ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದಾರೆ.

ಇನ್ನೂ ಕಮಲ್ ಹಾಸನ್ ಕೂಡ ಸೋಂಕಿತರ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ್ದು ತಮ್ಮ ಪಕ್ಷದ ಕಚೇರಿಯನ್ನು ಚಿಕಿತ್ಸೆಗೆ ಬಿಟ್ಟುಕೊಡಲು ಮುಂದಾಗಿದ್ದಾರೆ.ಚೆನ್ನೈನ ಎಲ್ಡಾಮ್ ರಸ್ತೆಯಲ್ಲಿರುವ ಕಮಲ್ ಹಾಸನ್ ಹಳೆಯ ಮನೆಯನ್ನು ತಮ್ಮ ಕಚೇರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಸದ್ಯ ಇದೇ ಕಚೇರಿಯನ್ನು ಚಿಕಿತ್ಸೆಗೆ ಬಿಟ್ಟುಕೊಟ್ಟಿದ್ದಾರೆ.

ಇವರೊಂದಿಗೆ ಬಾಲಿವುಡ್ ನಟ ಸೋನು ಸೂದ್ ಅವರು ಕೂಡ ಕೈ ಜೋಡಿಸಿದ್ದು, ಹಲವಾರು ನಟರಿಗೆ ಮಾದರಿಯಾಗುವಂತಹ ಕೆಲ ಮಾಡಿದ್ದಾರೆ. ಎಸ್… ಸೋನು ಸೂದ್ ಅವರು ತಮ್ಮ ಒಡೆತನದ ಐಶಾರಾಮಿ ಹೋಟೆಲ್ ನ್ನು ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.

ಇನ್ನೂ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಕೂಡ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ತಮ್ಮ ನಾಲ್ಕು ಅಂತಸ್ತಿನ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆಗೆ ಬಿಟ್ಟುಕೊಟ್ಟಿದ್ದಾರೆ. ಈ ಹಿಂದೆ ಶಾರುಖ್ ದಂಪತಿ ಕೊರೊನಾ ಪೀಡಿತರ ನೆರವಿಗೆ ಆಹಾರ, ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹಣಕಾಸಿನ ನೆರವು ಕೂಡ ನೀಡಿದ್ದರು. ಸದ್ಯ ತಮ್ಮ ಕಚೇರಿ ನೀಡುವ ಮೂಲಕ ಅಭಿಮಾಣಿಗಳ ಮನ ಗೆದ್ದಿದ್ದಾರೆ.

ಒಟ್ಟಿನಲ್ಲಿ ಎಲ್ಲಾ ವುಡ್ ಕೆಲ ಸ್ಟಾರ್ ನಟರು ಕೊರೊನಾ ಪೀಡಿತರ ಸಹಾಯಕ್ಕೆ ನಿಂತಿದ್ದು, ಕೊರೊನಾ ಓಡಿಸುವಲ್ಲಿ ಪಣ ತೊಟ್ಟಿದ್ದಾರೆ. ಹೀಗಾಗಿ ಸರ್ವಾಜನಿಕರೂ ಕೂಡ ಮನೆ ಬಿಟ್ಟು ಹೊರಬಾರದೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ವಿರುದ್ಧ ಹೋರಾಡಬೇಕು. ಹಾಗಾದಾಗ ಮಾತ್ರ ಕೊರೊನಾ ಹರಡುವುದನ್ನು ತಡೆಗಟ್ಟುವುದು ಸಾಧ್ಯವಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights