ಕೊರೊನಾ ನಿರ್ಬಂಧ : ನಿಯಮ ಉಲ್ಲಂಘಿಸಿದರೆ ದಂಡ – ಕರ್ಫ್ಯೂನಿಂದ ಯಾರಿಗೆಲ್ಲಾ ಸಂಕಷ್ಟ..?

ಕೊರೊನಾವೈರಸ್ ಲಾಕ್‌ಡೌನ್ ಜೊತೆಗೆ ನಗರಾದ್ಯಂತ ಕರ್ಫ್ಯೂ ನಿರ್ಬಂಧಗಳನ್ನ ಜಾರಿಗೊಳಿಸಲಾಗಿದೆ.

ಕೋವಿಡ್-19 ಹರಡುವುದನ್ನು ಪರಿಶೀಲಿಸಲು ವಾರದ ಕೊನೆಯ ದಿನದಂದು ( ಭಾನುವಾರ) ಜನರ ಓಡಾಟವನ್ನು ಸಂಫೂರ್ಣವಾಗಿ ತಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ಭಾನುವಾರ ಬೆಂಗಳೂರಿನಲ್ಲಿ ಕರ್ಫ್ಯೂ ತರಹದ ನಿರ್ಬಂಧಗಳನ್ನು ವಿಧಿಸಲಾಗುವುದು.

ನಗರದಾದ್ಯಂತ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಆದೇಶಗಳನ್ನು ಹೊರಡಿಸಲಾಗಿದೆ. ಮಾರುಕಟ್ಟೆಗಳು ಸ್ಥಗಿತಗೊಳಿಸಿ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿಸಲಾಗುತ್ತದೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದವರು ದಂಡ ವಿಧಿಸುವ ಕ್ರಮವನ್ನು ಎದುರಿಸಬೇಕಾಗುತ್ತದೆ.

ಕರ್ನಾಟಕವು ಇತರ ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಮೊಹರು ಮಾಡಿದೆ. ಯಾವುದೇ ವಾಹನವನ್ನು ರಾಜ್ಯಕ್ಕೆ ಪ್ರವೇಶಿಸಲು ಅಥವಾ ಬಿಡಲು ಅನುಮತಿಸಿಲ್ಲ. ಆದಾಗ್ಯೂ, ಕೆಲವು ಷರತ್ತುಗಳೊಂದಿಗೆ ವಿವಾಹಗಳನ್ನು ಅನುಮತಿಸಲಾಗುತ್ತದೆ.ಅಗತ್ಯ ಸೇವೆಗಳನ್ನು ಮಾತ್ರ ಅನುಮತಿಸಿ ಜನರು ಹೊರಹೋಗದಂತೆ ತಡೆಯಲು ಪೊಲೀಸರು ಹೆಚ್ಚಿನ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಆದರೆ ಕೆಲವೆಡೆ ಜನ ಕರ್ಫ್ಯೂ ಇರುವುದನ್ನ ಮರೆತು ರಸ್ತೆಗಿಳಿದು ಎಂ ದಿನಂತೆ ಸಂಚಾರಿಸುತ್ತಿರುವುದು ಕಂಡುಬಂದಿದೆ. ರಾಯಚೂರಿನಲ್ಲಿ ರಸ್ತೆಗಿಳಿದ ವಾಹನ ಸವಾರರ ಮೇಲೆ ಲಘ ಲಾಠಿ ಚಾರ್ಜ್ ಕೂಡ ಮಾಡಲಾಗಿದೆ.

ಇನ್ನೂ ಕೆಲವೆಡೆ ಭೀಕ್ಷುಕರು, ನರ್ಗತಿಕರು, ತಮ್ಮ ಊರುಗಳಿಗೆ ತೆರಳಲಾಗದೇ ಲಾಕ್ ಆದ ಜನರಿಗೆ ಕರ್ಫ್ಯೂನ ಬಿಸಿ ಭಾರಿ ಪ್ರಮಾಣದಲ್ಲಿ ತಟ್ಟಿದೆ. ಹೌದು… ಕರ್ಪ್ಐಊ ಇರುವುದರಿಂದ ಎಲ್ಲೆಡೆ ಬಂದ್ ಮಾಡಲಾಗಿದೆ. ಅಂಗಡಿ, ಹೋಟೆಲ್ ಎಲ್ಲವೂ ಬಂದ್ ಮಾಡಲಾಗಿದೆ. ಇನ್ನೂ ಜನರಿಂದ ಸಹಾಯ ಬಯಸುವುದಾದರೆ ಅದಕ್ಕೂ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕೆಲ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನರ ಸ್ಥಿತಿ ಹೀಗಾದರೆ ಕೆಲ ರಸ್ತೆ ಬದಿ ಇರುವ ಪ್ರಾಣಿಗಳ ಕಥೆಯೂ ಇದೇ ಹಂತಕ್ಕೆ ಬಂದು ತಲುಪಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಕೊರೊನಾ ನಿರ್ಬಂಧ : ನಿಯಮ ಉಲ್ಲಂಘಿಸಿದರೆ ದಂಡ – ಕರ್ಫ್ಯೂನಿಂದ ಯಾರಿಗೆಲ್ಲಾ ಸಂಕಷ್ಟ..?

  • September 14, 2020 at 1:25 pm
    Permalink

    Currently it sounds like BlogEngine is the preferred blogging platform out there right now.
    (from what I’ve read) Is that what you are using on your
    blog?

    Reply

Leave a Reply

Your email address will not be published.

Verified by MonsterInsights