ಕೊರೊನಾ ಭೀತಿಗೆ ಫೈರ್ ಅಲ್ಯೂಮಿನಿಯಂ ಸೇಫ್ಟಿ ಡ್ರೆಸ್ ತೊಟ್ಟ ಆಂಬ್ಯುಲೆನ್ಸ್ ಡ್ರೈವರ್….!
ಕೊರೊನಾ ಸೋಂಕು ಭೀತಿಯಿಂದ ಆಂಬ್ಯುಲೆನ್ಸ್ ಡ್ರೈವರ್, ಸಿಬ್ಬಂದಿಗಳು ಫೈರ್ ಅಲ್ಯೂಮಿನಿಯಂ ಸೇಫ್ಟಿ ಡ್ರೆಸ್ ತೊಟ್ಟಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಪ್ ವಿಭಾಗದ ೧೦೮ ಆಂಬ್ಯುಲೆನ್ಸ್ ಸಿಬ್ಬಂದಿ ಅರುಣ್, ಸಾಗರ್ ಎನ್ನುವವರು ಸಿಲ್ವರ್ ಬಣ್ಣದ ಪೈರಗ ಸೇಪ್ಟಿ ಡ್ರೆಸ್ ತೊಟ್ಟಿದ್ದಾರೆ. ಇದು ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಕ್ಕೆ ಬಳಸಲು ಆರೋಗ್ಯ ಇಲಾಖೆ ನೀಡಿರುವ ಸುರಕ್ಷತಾ ಉಡುಗೆ. ಕರೋನಾ ಸೋಂಕಿನಿಂದ ಪಾರಾಗಲು ಪ್ರತ್ಯೇಕ ಉಡುಗೆ ಇಲ್ಲದ ಹಿನ್ನೆಲೆ ಸಿಬ್ಬಂದಿ ಪೈರ್ ಸೇಪ್ಟಿ ಬಟ್ಟೆ ತೊಟ್ಟಿದ್ದಾರೆ.
ಬಟ್ಟೆ ತೊಟ್ಟು ಟಿಕ್ ಟಾಕ್ ವಿಡಿಯೋ ಮಾಡಿ ಆಂಬ್ಯುಲೆನ್ಸ್ ಸಿಬ್ಬಂದಿ ಹರಿಬಿಟ್ಟಿದ್ದು, ಆಂಬ್ಯುಲೆನ್ಸ್ ಸಿಬ್ಬಂದಿ ಬಟ್ಟೆ ತೊಟ್ಟಿರುವ ವಿಡಿಯೋ, ಪೋಟೋಗಳು ಪುಲ್ ವೈರಲ್ ಆಗಿವೆ. ಕೊರೊನಾ ಭೀತಿ ವಿಶ್ವದಲ್ಲಿ ಎಷ್ಟಿದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ.