‘ಗಂಡ ಬೇಡ ಗಂಡನ ಸಹೋದರ ಬೇಕು’ : ಪತ್ನಿ ಹೇಳಿಕೆಯಿಂದ ನೇಣಿಗೆ ಶರಣಾದ ಪತಿ!
ನಿಜವಾದ ಪ್ರೀತಿ ಎಂದೂ ಸಾಯುವುದಿಲ್ಲ. ಸಾವಿನ ಬಳಿಕವೂ ಜೀವಂತವಾಗಿರುತ್ತೇ ಅನ್ನೋದಕ್ಕೆ ಅದೆಷ್ಟೋ ಪ್ರೇಮಿಗಳು ಸಾಕ್ಷಿಯಾಗಿದ್ದಾರೆ. ಆದರೆ ಇಲ್ಲೋಬ್ಬ ನಕಲಿ ಪ್ರೇಯಸಿ ನಾಲ್ಕು ವರ್ಷ ಪ್ರೀತಿ ಮಾಡಿ 2 ವರ್ಷದ ಹಿಂದೆ ಮದುವೆಯಾಗಿ ಪತಿ ಬೇಡ ಪತಿಯ ಸಹೋದರ ಬೇಕು ಎಂದಿದ್ದಾಳೆ. ಈ ಮಾತು ಕೇಳಿದ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೌದು… ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬೊಮ್ಮನ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವೆಂಕಟೇಶ್ ಎಂಬಾತ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನ ಸಂಬಂಧಿಯಾದ ಹುಡುಗಿಯನ್ನು ನಾಲ್ಕು ವರ್ಷದ ಹಿಂದೆ ಪ್ರೀತಿಸುತ್ತಿದ್ದನು. ಕಳೆದ ಎರಡು ವರ್ಷದ ಹಿಂದೆ ಮದುವೆ ಕೂಡ ಆಗಿದ್ದನು. ಮದುವೆ ಬಳಿಕ ಕುಟುಂಬಸ್ಥರೊಂದಿಗೆ ದಂಪತಿಗಳಿಬ್ಬರೂ ಅನ್ಯೋನ್ಯವಾಗಿದ್ದರು. ಆದರೆ ಸಂತೋಷವಾಗಿದ್ದ ವೆಂಕಟೇಶ್ ಕುಟುಂಬದ ಮೇಲೆ ಪಕ್ಕದ ಮನೆಯ ಸಹೋದರ ಸಂಬಂಧಿಯ ಕಣ್ಣು ಬಿದ್ದಿದೆ.
ಸಹೋದರನಾಗಿದ್ದ ಶ್ರೀಶೈಲ ಎಂಬಾತ ವೆಂಕಟೇಶ್ ಪತ್ನಿ ಮೇಲೆ ಕಣ್ಣು ಹಾಕಿ ಆತನ ಕುಟುಂಬವನ್ನೇ ನರಕ ಮಾಡಿಬಿಟ್ಟಿದ್ದಾನೆ ಎಂದು ಫೇಸ್ ಬುಕ್ ನಲ್ಲಿ ವೆಂಕಟೇಶ್ ಹೇಳಿಕೊಂಡಿದ್ದಾರೆ. 1 ವರ್ಷದ ಹಿಂದೆ ಸಹೋದರನೊಂದಿಗೆ ಪತ್ನಿ ಸಂಬಂಧವಿತ್ತು. ಇದರಿಂದ ವೆಂಕಟೇಸ್ ಪತ್ನಿಯೊಂದಿಗೆ ಹಲವಾರು ಬಾರಿ ಜಗಳವಾಡಿದ್ದನು. ಇವರ ಜಗಳ ತಾಳಿಕೋಟೆ ಪೊಲೀಸ್ ಠಾಣೆವರೆಗೂ ಹೋಗಿತ್ತು. ಠಾಣೆಯಲ್ಲಿ ಪತ್ನಿ ತನಗೆ ಪತಿ ಬೇಡ ಪತಿಯ ಸಹೋದರ ಬೇಕು ಅಂದಿದ್ದಳು. ಅಷ್ಟೇ ವೆಂಕಟೇಶ್ ಗೆ ಈ ಮಾತು ನುಂಗಲಾರದ ತುತ್ತಾಗಿತ್ತು. ಮಾತ್ರವಲ್ಲದೇ ಸಹೋದರ ಶ್ರೀಶೈಲನಿಂದ ಜೀವ ಬೆದರಿಕೆ ಕೂಡ ಇತ್ತಂತೆ. ಪತ್ನಿ ಹೇಳಿಕೆಗೆ ವೆಂಕಟೇಶ್ ಮನನೊಂದು ಫೇಸ್ ಬುಕ್ ವಿಡಿಯೋ ಕಾಲ್ ಮಾಡಿ ತನ್ನ ಆತ್ಮಹತ್ಯೆಗೆ ಶ್ರೀಶೈಲನೇ ಕಾರಣ ಎಂದು ಹೇಳಿ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರೀತಿಯಲ್ಲಿ ಬಿದ್ದು ಮದ್ವೆ ಆಗಿದ್ದ ವೆಂಕಟೇಶ್ ಪತ್ನಿ ಪ್ರೀತಿ ಸಿಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೆಂಕಟೇಶ್ ನನ್ನು ಕಳೆದುಕೊಂಡ ಕುಟುಂಬಸ್ಥರಲ್ಲಿ ದುಖ: ಮುಗಿಲು ಮುಟ್ಟಿದೆ.