ಕೊರೊನಾ ರಹಿತ ದಿನಗಳು ಮರುಕಳಿಸಲು ಸಾಧ್ಯವಿಲ್ಲ – ಯುಎಸ್ ವಿಜ್ಞಾನಿ ಶಾಕಿಂಗ್ ಹೇಳಿಕೆ

ಪೆಡಂಭೂತದಂತೆ ಕಾಡುತ್ತಿರುವ ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಜನ ಹರಸಾಹಸವೇ ಪಡುತ್ತಿದ್ದಾರೆ. ಆದರೆ ಯಾರು ಕೊರೊನಾ ಸೋಂಕಿಗೆ ಒಳಗಾಗುವುದು ಬೇಡಪ್ಪ ಅಂತ ಆ ದೇವರಲ್ಲಿ ಕೈ ಮುಗಿದು ಮನೆಯಲ್ಲಿ ಕುಳಿತುಕೊಂಡಿದ್ದೀರೋ ಅವರಿಗೆಲ್ಲಾ ಒಂದು ಶಾಕಿಂಗ್ ಸುದ್ದಿ ಇದೆ.

ಅದೇನೆಂದರೆ ಕೊರೊನಾ ರಹಿತ ದಿನಗಳು ಮತ್ತೆ ಮರುಕಳಿಸಲು ಸಾಧ್ಯವೇ ಇಲ್ಲವಂತೆ. ಹೀಗಂತ ನಾವು ಹೇಳ್ತಾಯಿಲ್ಲ ಅಮೆರಿಕಾದ ವಿಜ್ಞಾನಿಯೊಬ್ಬರು ಈ ಆತಂಕಕಾರಿ ಮಾಹಿತಿಯೊಂದನ್ನ ನೀಡಿದ್ದಾರೆ.  ಇಲ್ಲಿಯವರೆಗೂ 14,31,973 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಷ್ಟುಮಾತ್ರವಲ್ಲಿ ಜಗತ್ತಿನಲ್ಲಿ ಈ ಮಹಾಮಾರಿಗೆ 82,096 ಜನ ಸಾವನ್ನಪ್ಪಿದ್ದಾರೆ. 47,895 ಜನ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದಾರೆ.

“ಪ್ರಪಂಚದಾದ್ಯಂತ ಜನ ಜೀವನ ಮತ್ತೆ ಮೊದಲಿನಂತಾಗವುದಿಲ್ಲ. ಕೊರೊನಾ ಹರಡುವುದಕ್ಕೂ ಮೊದಲಿದ್ದ ದಿನಗಳು ಬಹುಶ: ಮರುಕಳಿಸುವುದಿಲ್ಲ” ಎಂದು ಅಮೇರಿಕಾದ ಪ್ರಖ್ಯಾತ ವಿಜ್ಞಾನಿ ಡಾ. ಆಂಥೋನಿ ಫೌಸಿ ಹೇಳಿದ್ದಾರೆ. ದೇಶಗಳು ಮೊದಲಿನಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದು ಆದರೆ ಕೊರೊನಾ ಬರುವುದಕ್ಕು ಮುಂಚೆ ಇದ್ದ ದಿನಗಳು ಬರಲು ಸಾಧ್ಯವಿಲ್ಲ ಎಂದು ವೈಟ್ ಹೌಸ್ ನಲ್ಲಿ ಯು.ಎಸ್ ವಿಜ್ಞಾನಿ ಡಾ. ಆಂಥೋನಿ ಹೇಳಿದ್ದಾರೆ.

ಹೀಗಾಗಿ ಲಸಿಕೆ ಕಂಡು ಹಿಡಿಯುವವರೆಗೆ ಜನರನ್ನು ರಕ್ಷಿಸಿಸುವುದು ಸುಲಭವಲ್ಲ. ಕೊರೊನಾ ರಹಿತ ದಿನಗಳನ್ನು ನಾವು ನೋಡಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಮತ್ತಷ್ಟು ಆತಂಕ ಶುರುವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights