ಕೊರೊನಾ ಲಕ್ಷಣಗಳಿದ್ದರೂ ಚಿಕಿತ್ಸೆ ನೀಡದ ವೈದ್ಯರು; ಫುಟ್‌ಪಾತ್‌ನಲ್ಲೇ ಮೂರು ದಿನಕಳೆದ ರೋಗಿ

ಕೊರೊನಾ ಸೋಂಕಿನ ರೋಗಲಕ್ಷಣಗಳನ್ನು ಹೊಂದಿದ್ದ 24 ವರ್ಷದ ವಲಸೆ ಕಾರ್ಮಿಕನಿಗೆ ಚಿಕಿತ್ಸೆ ನಿರಾಕರಿಸಲಾಗಿದ್ದು, ಆತ ಮೂರು ದಿನಗಳ ಕಾಲ ಥಾಣೆ ಜಿಲ್ಲೆಯಲ್ಲಿ ರಸ್ತೆಬದಿಯಲ್ಲಿಯೇ ಇರಬೇಕಾಗತ್ತು. ನಂತರ ಸಾಮಾಜಿಕ ಕಾರ್ಯಕರ್ತರ ಒತ್ತಡದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಇದು ಬಿಹಾರದ ಸರನ್ ಜಿಲ್ಲೆಯ ವಲಸೆ ಕಾರ್ಮಿಕ ಸುಗ್ರೀಮ್ ಮಹ್ತೋ ಅವರ ಕಥೆ.

ಸಧ್ಯ, ಸುಗ್ರೀಮ್ ಕೊರೊನಾ ರೋಗಿಗಳಿಗೆ ಮೀಸಲಾಗಿರುವ ಥಾಣೆ ಜಿಲ್ಲೆಯ ಆಸ್ಪತ್ರೆಯಲ್ಲಿ ಸುಗ್ರೀಮ್‌ನನ್ನು ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಅಬ್‌ಸರ್ವೇಷನ್ ಮಾಡಲಾಗುತ್ತಿದೆ. ಆದರೆ, ಆತನಿಗೆ ಕೊರೊನಾ ವೈರಸ್‌ ಸಕಾರಾತ್ಮಕವಾಗಿದೆಯೆ ಎಂದು ವೈದ್ಯರು ಇನ್ನೂ ದೃಢಪಡಿಸಿಲ್ಲ.

ವಿಡಿಯೋ ನೋಡಿ: ಆತ ಫುಟ್‌ಪಾತ್‌ಗೆ ಬರುವು ಮುಂಚೆ ಕಲ್ವಾ ಆಸ್ಪತ್ರೆಯಿಂದ ಆತನನ್ನು ಹೋರಗಿಟ್ಟಿದ್ದು ಹೇಗೆ ಎಂದು ಸುಗ್ರೀಮ್ ವಿವಿರಿಸಿದ್ದಾನೆ:   

ಕೊರೊನಾ ರೋಗಲಕ್ಷಣಗಳಿದ್ದರೂ ಚಿಕಿತ್ಸೆ ಸಿಗದೆ ಫುಟ್‌ಪಾತ್‌ನಲ್ಲೇ ಮೂರು ದಿನ ಕಳೆದ ರೋಗಿ

ಕೊರೊನಾ ರೋಗಲಕ್ಷಣಗಳಿದ್ದರೂ ಚಿಕಿತ್ಸೆ ಸಿಗದೆ ಫುಟ್‌ಪಾತ್‌ನಲ್ಲೇ ಮೂರು ದಿನ ಕಳೆದ ರೋಗಿ

Posted by EnSuddi on Wednesday, May 20, 2020

ಕಳೆದ ವಾರ, ಮುಂಬೈನಿಂದ 1,700 ಕಿಲೋಮೀಟರ್ ದೂರದಲ್ಲಿರುವ ಬಿಹಾರದ ತನ್ನ ಸ್ಥಳೀಯ ಸ್ಥಳಕ್ಕೆ ಕರೆದೊಯ್ಯಲು ಟ್ರಕ್ ಚಾಲಕನಿಗೆ ಸುಗ್ರೀಮ್ ಹಣ ನೀಡಿದ್ದ. ಆದರೆ, ಈತನಲ್ಲಿ ಕೊರೊನಾ ರೋಗಲಕ್ಷಣಗಳನ್ನು ಕಂಡುಬಂದಿದ್ದರಿಂದ ಆತನನ್ನು ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿಯೇ ಇಳಿಸಿ ಹೋದರು.

ಮನೆಗೆ ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ನೀರಿನ ಬಾಟಲಿಗಳನ್ನು ವಿತರಿಸುತ್ತಿದ್ದ ಕಾರ್ಯಕರ್ತರ ಗುಂಪೊಂದು ಸುಗ್ರೀಮ್‌ನನ್ನು ಕಂಡಾಗ ಆತ ಜ್ವರದಿಂದ ಬಳಲುತಿದ್ದರು.

“ನಾನು ಆತನನ್ನು ನೋಡಿದಾಗ ಜ್ವರದಿಂದ ಬಳಲುತ್ತಿದ್ದ, ಏನನ್ನಾದರೂ ತಿನ್ನುತ್ತಿದ್ದೀರಾ ಎಂದು ಕೇಳಿದೆವು, ಆದರೆ ಅವರು ನುಂಗಲು ತೊಂದರೆಯಾಗುತ್ತಿದೆ ಎಂದು ಹೇಳಿದರು. ಈ ಸಮಯದಲ್ಲಿ ಬಿಟ್ಟು ಹೋಗುವುದು ಸರಿಯಲ್ಲ ಎನಿಸಿ ಔಷಧಿಗಳನ್ನು ತರಲು ಪ್ರಯತ್ನಿಸಿದೆವು ಮೆಡಿಕಲ್ ಸ್ಟೋರ್‌ಗಳು ಮುಚ್ಚಿದ್ದವುಂತರ ಸ್ಥಳೀಯ ಆಸ್ಪತ್ರೆಯ ಆಂಬುಲೆನ್ಸ್‌ಗೆ ಕರೆ ಮಾಡಿದೆ” ಎಂದು ಕಳ್ಳಸಾಗಾಣಿಕ ವಿರೋಧಿ ಕಾರ್ಯಕರ್ತ ದೀಪೇಶ್ ಟ್ಯಾಂಕ್‌  ತಿಳಿಸಿದ್ದಾರೆ.

ಆಂಬ್ಯುಲೆನ್ಸ್‌ ಚಾಲಕನಿಗೆ ಸುಗ್ರೀಮ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ದೀಪೇಶ್‌ ಹೇಳಿದ್ದರು. ಅಂದಿನಿಂದ ಎರಡು ದಿನಗಳ ಕಾಲ ಸುಗ್ರೀಮ್ ಕಾಣಿಸಲಿಲ್ಲ. ಆತನನ್ನು ಹುಡುಕುವ ಪ್ರಯತ್ನವನ್ನು ದೀಪೇಶ್ ಮತ್ತವರ ಸ್ನೇಹಿತರು ಪ್ರಯತ್ನಿಸಿದರು. ಆಂಬುಲೆನ್ಸ್‌ನಲ್ಲಿ ಸುಗ್ರೀಮ್‌ನಲ್ಲಿ ಕಳಿಸಿದ ಛತ್ರಪತಿ ಶಿವಾಜಿ ಆಸ್ಪತ್ರೆಯಲ್ಲಿ ವಿಚಾರಿಸಿದ್ದಾರೆ. ಆದರೆ, ಆಸ್ಪತ್ರೆಯವರು ಆ ಹೆಸರಿನ ರೋಗಿಯನ್ನು ದಾಖಲಿಸಲಿಲ್ಲ ಎಂದು ಹೇಳಿದರು. ಘಟನೆಯ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಕಲ್ವಾ ಪೊಲೀಸ್ ಠಾಣೆ ತಿಳಿಸಿದೆ.

ಅಧಿಕಾರಿಗಳು ಯಾವುದೇ ಸಹಾಯ ಮಾಡದ ಕಾರಣ ದೀಪೇಶ್‌ ಮತ್ತವರ ಸ್ನೇಹಿತರು ಸುಗ್ರೀಮ್‌ ಅವರನ್ನು ಹುಡುಕಲು ಹೊರಟರು. ಸೋಮವಾರ, ಆತನನ್ನು ಕಲ್ವಾ ಆಸ್ಪತ್ರೆಯ ಹೊರಗೆ ಫುಟ್‌ಪಾತ್‌ನಲ್ಲಿ ಇರುವುದನ್ನು ಗುರುತ್ತಿದ್ದಾರೆ. ಚಿಕಿತ್ಸೆ ಇಲ್ಲದೆ ಆಸ್ಪತ್ರೆಯಿಂದ ಹೊರಗಿದ್ದೇನೆ ಎಂದು ಸುಗ್ರೀಮ್ ದೀಪೇಶ್‌ಗೆ ತಿಳಿಸಿದ್ದಾರೆ.

“ಅಧಿಕಾರಿಗಳು ಅತನಿಗೆ ಏನು ಮಾಡಿದರು ಎಂದು ತಿಳಿದುಕೊಳ್ಳಲು ಕಾಯಲಾಗಲಿಲ್ಲ. ಆತನ ಗುರುತಿನ ಚೀಟಿಗಳನ್ನು ಪೂರೈಸಲು ಆತನ ಜೊತೆಗೆ ಯಾರೂ ಇಲ್ಲದ ಕಾರಣ ಆತನನ್ನು ಹೊರಗೆ ದೂಡಲಾಗಿತ್ತು. ಆತನಿಗೆ ಕೊರೊನಾ ಸೋಂಕಿನ ಎಲ್ಲಾ ಲಕ್ಷಣಗಳೂ ಇದ್ದವು ಎಂದು ದೀಪೇಶ್ ವಿವಿರಸಿದ್ದಾರೆ.

“ನಿನ್ನ ಪೋಷಕರು ಅಥವಾ ಸಂಬಂಧಿಕರನ್ನು ಕರೆದುಕೊಂಡು ಬಾ ಎಂದು ಅಧಿಕಾರಿಗಳು ನನ್ನನ್ನು ಹೊರಗೆ ಕಳಿಸಿದರು. ನನಗಾಗಲೇ ಕೆಮ್ಮು ಜ್ವರ ಜಸ್ತಿಯಾಗಿದ್ದು, ಕಾಲು ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು” ಎಂದು ಸುಗ್ರೀಮ್ ವಿಡಿಯೋದಲ್ಲಿ ವಿವರಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರು ಗುರುತಿಸಿದ್ದ ಹಲವಾರು ವಲಸಿಗರಲ್ಲಿ ಸುಗ್ರೀಂ ಕೂಡ ಒಬ್ಬರು. ಸುಗ್ರೀಮ್‌ ಬಗ್ಗೆ ದೀಪೇಶ್‌ ಮಾಡಿದ್ದರ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಹಾರಾಷ್ಟ್ರ ಶಿಕ್ಷಣ ಸಚಿವ ಆದಿತ್ಯ ಠಾಕ್ರೆ ಮತ್ತು ಬಿಹಾರ ಪ್ರತಿಪಕ್ಷದ ನಾಯಕ ತೇಜಶ್ವಿ ಯಾದವ್ ಈ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ.

ಅದರ ಹೊರತಾಗಿಯೂ, ಸುಗ್ರೀಮ್‌ರನ್ನು ಎರಡು ಬಾರಿ ರಕ್ಷಿಸಬೇಕಾಯಿತು ಮತ್ತು ಆತ ಮೂರು ದಿನಗಳವರೆಗೆ ಚಿಕಿತ್ಸೆಯಿಲ್ಲದೆ ಬೀದಿಗಳಲ್ಲಿ ನರಳಬೇಕಾಯಿತು. ಅದ್ಯ ಅವರು ಥಾನೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಹಾರದಲ್ಲಿರುವ ಆತನ ಸಂಬಂಧಿಕರಿಗೆ ಆತನ ಬಗ್ಗೆ ವಿಷಯ ತಿಳಿಸುವಂತೆ ಸುಗ್ರೀಮ್‌ ವಾಸಿಸುವ ಪ್ರದೇಶದ ಪೊಲೀಸರಿಗೆ ತಿಳಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights