ಕ್ರಿಸ್ಮಸ್ ಹಬ್ಬ ಸಮಿಪಿಸುತ್ತಿರುವ ಹಿನ್ನೆಲೆ : ಕೇಕ್ ಮಿಕ್ಸಿಂಗ್ ಗೆ ತಾರಾ ರಂಗು
ಕ್ರಿಸ್ ಮಸ್ ಹಬ್ಬ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಡಸ್ ಹೊಟೇಲ್ ನಲ್ಲಿ ಖ್ಯಾತ ನಟಿ ರಾಗಿಣೆ ದ್ವಿವೇದಿ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಶುಭ ಕೋರಿದರು.
ಕ್ರಿಸ್ ಮಸ್ ಹಬ್ಬ ಒಂದು ತಿಂಗಳು ಬಾಕಿ ಇರುವಾಗಲೇ ಕೇಕ್ ತಯಾರಿಯಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಅವರೊಂದಿಗೆ ಮಿಸ್ಟರ್ ಇಂಡಿಯಾ ಕರ್ನಾಟಕ ಶುಭಾ ಶ್ರೀರಾಮ್, ತಮಿಳು ಕಲಾವಿದ ಡ್ಯಾನಿ, ಹೊಟೇಲ್ ನ ಶೇಫ್, ಸಿಬ್ಬಂದಿಗಳು ಮತ್ತು ಅತಿಥಿಗಳು ಒಟ್ಟಿಗೆ ಟೇಬಲ್ನ ಎದುರು ಸಾಲಾಗಿ ನಿಂತು ಬಣ್ಣ ಬಣ್ಣದ ಚೆರ್ರಿಗಳು, ಖರ್ಜೂರ, ಪ್ಲಮ್ ಹಣ್ಣು, ಅಂಜೂರದ ಹಣ್ಣುಗಳು, ವಿವಿಧ ಬಗೆಯ ಒಣಹಣ್ಣುಗಳ ಮೇಲೆ ಜೇನುತುಪ್ಪ, ರಮ್ ಸುರಿದು ಹದವಾಗಿ ಕೇಕ್ ಮಿಕ್ಸಿಂಗ್ ಮಾಡುತ್ತಾ ಕ್ರಿಸ್ ಮಸ್ ಹಬ್ಬದ ಸಡಗರವನ್ನು ಸಂಭ್ರಮಿಸಿದರು.
‘ಪ್ಲಮ್ ಕೇಕ್ ಕೇವಲ ಒಂದೆರೆಡು ದಿನದಲ್ಲಿ ತಯಾರಿಸಲು ಸಾಧ್ಯವಿಲ್ಲ. ಇದು ಒಂದು ತಿಂಗಳ ಪ್ರಕ್ರಿಯೆ. ಕ್ರಿಸ್ ಮಸ್ ಹಬ್ಬ ಬರುವವರೆಗೆ ಇದನ್ನು ಹಾಗೆಯೇ ಇಟ್ಟು ಆಮೇಲೆ ಸೇವಿಸಲಾಗುತ್ತದೆ. ಫ್ಲಮ್ ಕೇಕ್ ಗೆ ರಮ್ ಮಾತ್ರ ಮಿಶ್ರಣ ಮಾಡುತ್ತಿದ್ದು, ಯಾವುದೇ ವೈನ್ ಅಥವಾ ಮದ್ಯವನ್ನು ಬೆರೆಸದೇ ಕೇಕ್ ತಯಾರಿಸುವುದು ವಿಶೇಷ’ ಎಂದು ಶೇಫ್ ಅಖಿಲ್ ವಿವರಿಸಿದರು.
ನಗರದ ವಿವಿಡಸ್ ಹೊಟೇಲ್ ನಲ್ಲಿ ಏರ್ಪಡಿಸಿದ ಕೇಕ್ ಮಿಕ್ಸಿಂಗ್ ಕಾರ್ಯಕ್ರಮಕ್ಕೆ ಖ್ಯಾತ ನಟಿ ರಾಗಿಣೆ ದ್ವಿವೇದಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಿಸ್ಟರ್ ಇಂಡಿಯಾ ಕರ್ನಾಟಕ ಶುಭಾ ಶ್ರೀರಾಮ್, ತಮಿಳು ಕಲಾವಿದ ಡ್ಯಾನಿ, ಶೇಫ್ ಗಳಾದ ಅಖಿಲ್, ಅಮಿತ್ ಮತ್ತು ಇಜೋಜ್ ಜೊತೆಗೆ ಹೊಟೇಲ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ವರದಿಯನ್ನು ತಮ್ಮ ಗೌರವಾನ್ವಿತ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಕೋರುತ್ತೇವೆ.