ಲಸಿಕಾ ಪ್ರಮಾಣಪತ್ರದಲ್ಲಿ ಮೋದಿ ಫೋಟೋ; ವಿದೇಶಿ ಪ್ರಯಾಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಭಾರತೀಯರು!

ಕೊರೊನಾ ಸೋಂಕು ವ್ಯಾಪಿಸಿದ ಬಳಿಕ ವಿದೇಶಿ ಪ್ರಯಾಣ ಭಾರೀ ಕಷ್ಟಕರವಾಗಿದೆ. ಹೀಗಾಗಿರುವ ಭಾರತದಲ್ಲಿ ಕೊರೊನಾ ಲಸಿಕೆಯ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಫೋಟೋ ಇರುವುದು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಹಲವು ವಿದೇಶಿ ಪ್ರಯಾಣಿಕರು ಹೇಳಿಕೊಂಡಿದ್ದಾರೆ.

ವಿದೇಶಿ ಪ್ರಯಾಣಕ್ಕೆ ಕೋವಿಡ್‌ ನೆಗೆಟಿವ್ ಮತ್ತು ಕೋವಿಡ್‌ ವ್ಯಾಕ್ಸಿನೇಷನ್‌ ಪ್ರಮಾಣಪತ್ರಗಳು ಅಗತ್ಯವಾಗಿವೆ. ಎಮಿಗ್ರೇಶನ್‌ ಸಂದರ್ಭದಲ್ಲಿ ಈ ದಾಖಲೆಗಳನ್ನು ಏರ್‌ಪೋರ್ಟ್‌ಗಳ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ. ಈ ವೇಳೆ, ಲಸಿಕಾ ಪ್ರಮಾಣ ಪತ್ರದಲ್ಲಿ ಮೋದಿ ಫೋಟೋ ಇರುವುದರಿಂದ ಹಲವು ಭಾರತೀಯರು ಸಮಸ್ಯೆಯನ್ನು ಎದುಸಿದ್ದಾರೆ.

ದೀಪ್ತಿ ತಮಾನೆ ಎನ್ನುವ ಭಾರತೀಯ ಮಹಿಳೆಯು ಫ್ರಾಂಕ್‌ಫರ್ಟ್‌ಗೆ ತೆರಳಿದ್ದಾರೆ. ಈ ವೇಳೆ, ಅವರು ಏರ್‌ಪೋರ್ಟ್‌ನಿಂದ ಹೊರಹೋಗಲು ವ್ಯಾಕ್ಸಿನೇಷನ್‌ ಪ್ರಮಾಣಪತ್ರವನ್ನು ಒದಗಿಸಿದ್ದರೂ, ಅವರು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಆ ಪ್ರಮಾಣಪತ್ರವನ್ನು ನೋಡಿದ ಅಧಿಕಾರಿಗಳು ಇದು ನಕಲಿ ಇರಬಹುದು ಎಂದು ಅನುಮಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿಯನ್ನು ನಡೆಸಲೇಬೇಕು: ಬಿಹಾರ ಸಿಎಂ ನಿತೀಶ್ ಕುಮಾರ್

ಈ ಬಗ್ಗೆ ಹೇಳಿಕೊಂಡಿರುವ ಅವರು, ಪ್ರಮಾಣ ಪತ್ರದಲ್ಲಿ ಮೋದಿ ಫೋಟೋ ಇರುವುದನ್ನು ನೋಡಿದ ಅಧಿಕಾರಿಗಳು, ಇದು ನಕಲಿ ಸರ್ಟಿಫಿಕೇಟ್‌ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಅವರು ನನ್ನ ಲಸಿಕೆ ಸರ್ಟಿಫಿಕೇಟ್‌ ಅನ್ನು ಹಲವು ಬಾರಿ ನೋಡಿದರು. ನಾನು ಹಲವಾರು ಸರ್ಟಿಫಿಕೇಟ್‌ ಗಳನ್ನು ನೋಡಿದ್ದೇನೆ. ದಿನವೂ ಇಲ್ಲಿ ಹಲವು ಮಂದಿ ಪ್ರಯಾಣಿಕರು ಬರುತ್ತಾರೆ. ಆದರೆ ಇದೂವರೆಗೂ ಯಾವುದೇ ಸರ್ಟಿಫಿಕೇಟ್‌ನಲ್ಲಿಯೂ ಪ್ರಧಾನಿಯ ಫೊಟೊ ನೋಡಿಲ್ಲ. ಇದೇ ಮೊದಲ ಬಾರಿಗೆ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿ ಫೋಟೋ ನೋಡುತ್ತಿರುವುದು ಎಂದು ಅವರು ಹೇಳಿದ್ದಾಗಿ, ದೀಪ್ತಿ ತಮಾನೆ ಹೇಳಿದ್ದಾರೆ.

ಅಂತೆಯೇ, ರೆಡ್ಡಿಟ್‌ ಬಳಕೆದಾರ ಜುಜಾರ್‌ ಸಿಂಗ್‌ ಎಂಬವರು ಕೂಡ ಇಂತದ್ದೇ ಪರಿಸ್ಥಿತಿಯನ್ನು ಎದುರಿಸಿದ ಬಗ್ಗೆ ಬರೆದುಕೊಂಡಿದ್ದು, “ಸೈಬೀರಿಯನ್‌ ಎಮಿಗ್ರೇಶನ್‌ ನಲ್ಲಿ ಅಧಿಕಾರಿಗಳು ನನ್ನ ಸ್ನೇಹಿತನನ್ನು ತಡೆದು ನಿಲ್ಲಿಸಿದರು. ಯಾಕೆಂದರೆ ಸರ್ಟಿಫಿಕೇಟ್‌ ನಲ್ಲಿರುವ ವ್ಯಕ್ತಿ ಮತ್ತು ಈ ವ್ಯಕ್ತಿಯ ಚಹರೆ ಹೋಲುತ್ತಿರಲಿಲ್ಲ ಎಂದು ಅವರು ಅನುಮಾನಿಸಿದ್ದರು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Fact Check: ಆಫ್ಘಾನ್‌ ಮಹಿಳೆಯರನ್ನು ಮಾರಾಟ ಮಾಡುತ್ತಿದೆಯೇ ತಾಲಿಬಾನ್‌?

Spread the love

Leave a Reply

Your email address will not be published. Required fields are marked *