ಕ್ವಾರಂಟೈನ್‌ ಗೊಂದಲಕ್ಕೆ ಪರದಾಡುತ್ತಿರುವ ಜನ; ಬಂದವರನ್ನು ವಾಪಸ್ ಕಳಿಸಿದ ಸರ್ಕಾರ

ದೆಹಲಿಯಿಂದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೇ 14ರಂದು ಬೆಂಗಳೂರಿಗೆ ಬಂದ ಪ್ರಯಾಣಿಕರಲ್ಲಿ 19 ಪ್ರಯಾಣಿಕರು ಅದೇ ರೈಲಿನಲ್ಲಿ ಹಿಂದಿರುಗಿ ಹೋಗಿದ್ದಾರೆ. ದೆಹಲಿಯಿಂದ ಬಂದ ಪ್ರಯಾಣಿಕರಿಗೆ ಕರ್ನಾಟಕದಲ್ಲಿ ಸರ್ಕಾರ ಒದಗಿಸುವ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡುವುದು ಕಡ್ಡಾಯವೆಂದು ತಿಳಿದಿರಲಿಲ್ಲ. ಬೆಂಗಳೂರಿಗೆ ಬಂದಿಳಿದ ನಂತರ ರೈಲ್ವೇ ನಿಲ್ದಾಣದಲ್ಲಿದ್ದ ಅಧಿಕಾರಗಳು ಕಡ್ಡಾಯ ಕ್ವಾರಂಟೈನ್‌ ಬಗ್ಗೆ ತಿಳಿಸಿದ್ದು, ಕೋಪಗೊಂಡ 19  ಪ್ರಯಾಣಿಕರು ಅದೇ ರೈಲಿನಲ್ಲಿ ದೆಹಲಿಗೆ ಮರಳಿದ್ದಾರೆ. ಅವರಿಗೆ ಹೆಚ್ಚುವರಿ ಬೋಗಿಯ ವ್ಯವಸ್ಥೆ ಮಾಡಿ ಕಳಿಸಲಾಗಿದೆ.

ವಿದೇಶದಿಂದ ಮತ್ತು ದೇಶದ ಇತರ ರಾಜ್ಯಗಳಿಗೆ ಕರ್ನಾಟಕಕ್ಕೆ ಮರಳುತ್ತಿರುವ ರಾಜ್ಯದ ಜನರಿಗೆ ಸರ್ಕಾರ ಗೊತ್ತು ಪಡಿಸುರುವ ಹೊಟೆಲ್, ಸಮುದಾಯ ಭವನ, ಶಾಲೆಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ನೀಡಲಾಗುತ್ತಿದೆ. ಕ್ವಾರಂಟೈನ್‌ಗೆ ನಿರಾಕರಿಸುವವರನ್ನು ಹಿಂದಿರುಗಿ ವಾಪಸ್‌ ಕಳಿಸಲಾಗುತ್ತಿದೆ.

ರಾಜ್ಯಕ್ಕೆ ಬರುತ್ತಿರುವವಲ್ಲಿ ಹಲವಾರು ಮಂದಿಗೆ ಸಾಂಸ್ಥಿಕ ಕ್ವಾರಂಟೈನ್‌ ಬಗ್ಗೆ ಮಾಹಿತಿಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಅವರಿಗೆ ಉಚಿತ ಕ್ವಾರಂಟೈನ್‌ ಬಗೆಗೆ ವಿಶ್ವಾಸವಿಲ್ಲದೆ ನಿರಾಕರಿಸುತ್ತಿದ್ದಾರೆ ಹಾಗೂ ಪಾವತಿ ಕ್ವಾರಂಟೈನ್‌ ಪಡೆಯುವಷ್ಟು ಹಣವೂ ಇಲ್ಲವೆಂದು ಪರದಾಡುತ್ತಿದ್ದಾರೆ.

‘ಸಾಂಸ್ಥಿಕ ಕ್ವಾರಂಟೈನ್ ಬಗ್ಗೆ ತಿಳಿದಿರಲಿಲ್ಲ’ 

ತೆಲಂಗಾಣದಿಂದ ರೈಲಿನಲ್ಲಿ ಮೇ 14ರಂದು ಬೆಂಗಳೂರಿಗೆ ಬಂದಿಳಿದ ಪದ್ಮಿನಿ (ಹೆಸರು ಬದಲಿಸಿದೆ) ಮತ್ತು ಸುವಾರು 70ರ ವಯಸ್ಸಿನ ಅವರ ಪೋಷಕರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

“ನಮ್ಮ ಬಳಿ ಅಂತರರಾಜ್ಯ ಇ-ಪಾಸ್‌ ಇದ್ದರೂ ಸಹ ಮನೆಗೆ ಹೋಗುವಂತಿಲ್ಲ. ಕರ್ನಾಟಕದಲ್ಲಿ ಕಡ್ಡಾಯ ಕ್ವಾರಂಟೈನ್‌ ಬಗ್ಗೆ ನಮೆಗೆ ಮಾಹಿತಿಯೂ ಇರಲಿಲ್ಲ. ನಾವು ಐಆರ್‌ಸಿಟಿಸಿಯಲ್ಲಿ ಟಿಕೆಟ್‌ ಬುಕ್ ಮಾಡಿದಾಗಲೇ ಈ ಬಗ್ಗೆ ಅದರಲ್ಲಿ ಮಾಹಿತಿ ನೀಡಬಹುದಿತ್ತು,. ಅದನ್ನೂ ಮಾಡಿಲ್ಲ. ಇಲ್ಲಿ ಬಂದ ನಂತರ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಹೇಳುತ್ತಿದ್ದಾರೆ. ಪಾವತಿ ಮಾಡುವ ಕ್ವಾರಂಟೈನ್‌ಗೆ ಒಂದು ಕೊಠಡಿಗೆ 3,600 ರೂ ನಮಗೆ ಎರಡು ರೂಮುಗಳಲ್ಲಿ ಇರಲು ಹೇಳುತ್ತಿದ್ದಾರೆ. ಅಷ್ಟು ದುಬಾರಿ ಮೊತ್ತವನ್ನು ನಮವೆ ಭರಸಲಾಗುವುದಿಲ್ಲ. ಉಚಿತ ಕ್ವಾರಂಟೈನ್‌ ಬಗ್ಗೆ ನಮಗೆ ವಿಶ್ವಾಸವಿಲ್ಲ. ಅಲ್ಲಿಯ ವ್ಯವಸ್ಥೆ ಹೇಗಿರುತ್ತದೆ ಎಂದು ಯಾರಿಗೆ ಗೊತ್ತು. ವಯಸ್ಸಾವರನ್ನು ಅಲ್ಲಿ ಇರಿಸಲು ಸಾಧ್ಯವಿಲ್ಲ. ಹಾಗಾಗಿ ವಾಪಸ್‌ ಹೋಗಬೇಕಾಗಿದೆ:”  ಎಂದು ಪದ್ಮಿನಿ ತಿಳಿಸಿದ್ದಾರೆ.

‘ಉಚಿತ ಸೌಲಭ್ಯಗಳು ಲಭ್ಯವಿಲ್ಲ ಎಂದು ಹೇಳುತ್ತಿದ್ದಾರೆ’ 

ಮೇ 12 ರಂದು ದುಬೈನಿಂದ ಮಂಗಳೂರಿಗೆ ಬಂದಿಳಿದ ಗರ್ಭಿಣಿಯರು, ಮಕ್ಕಳನ್ನು ಒಳಗೊಂಡ ಹಲವಾರು ಪ್ರಯಾಣಿಕರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ನರಕ ಯಾತನೆಯನ್ನು ಅನುಭವಿಸಿದ್ದಾರೆ. ಅಧಿಕಾರಿಗಳು ಅವರನ್ನು ಗಂಟೆ ಗಟ್ಟಲೆ ಆಹಾರವಿಲ್ಲದೆ ವಿಮಾನ ನಿಲ್ದಾಣದಲ್ಲೇ ಕಾಯಿಸಿದ್ದಾರೆ. ನಂತರ, ಪಾವತಿ ಮಾಡಬೇಕಾದ ಸಾಂಸ್ಥಿಕ ಕ್ವಾರಂಟೈನ್‌ಗೆ ಹೋಗಲು ಒತ್ತಾಯಿಸಿದ್ದಾರೆ. ಪ್ರಯಾಣಿಕರು ಎಷ್ಟೇ ಪ್ರತಿಭಟಿಸಿದರೂ ಅವರಿಗೆ ಕ್ವಾರಂಟೈನ್ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ.

Tariffs offered in Bengaluru

“ಅಧಿಕಾರಿಗಳು ರಾತ್ರಿ ಇಡೀ ನಮ್ಮನ್ನು ವಿಮಾನ ನಿಲ್ದಾಣದಲ್ಲೇ ಕಾಯಿಸಿದರು. ನೀರು, ಆಹಾರವನ್ನೂ ಕೊಡಲಿಲ್ಲ. ನಾವು ದುಬೈನಿಂದ ಹೊರಡುವಾಗಲೇ ಕ್ವಾರಂಟೈನ್‌ ಆಯ್ಕೆಯ ಪಟ್ಟಿ ಸ್ವೀಕರಿಸಿದ್ದೆವು. ಅದರಂತೆ ಉಚಿತ ಕ್ವಾರಂಟೈನ್‌ ಸೌಲಭ್ಯಕ್ಕಾಗಿ ಅಧಿಕಾರಿಗಳಿಗೆ ತಿಳಿಸಿದ್ದೆವು” ಎಂದು ಉದ್ಯೋಗಕ್ಕಾಗಿ ದುಬೈಗೆ ತೆರಳಿದ್ದ ಮಂಗಳೂರಿನ ಮನ್ಸೂರ್ ಹೇಳಿದ್ದಾರೆ.

“ನಾವು ದಣಿದಿದ್ದೇವೆ, ನಮ್ಮೊಂದಿಗೆ ಗರ್ಭಿಣಿಯರಿದ್ದಾರೆ, ಅವರಿಗೆ ಉಪಹಾರ ಕೊಡಿ ಎಂದರೂ ಅವರ ಮನಸ್ಸು ಕರಗಲಿಲ್ಲ. ನಮ್ಮನ್ನು ಉಚಿತ ಕ್ವಾರಂಟೈನ್‌ ಸೌಲಭ್ಯಕ್ಕೆ ಕಳುಹಿಸಿ ಎಂದಾಗ, ನಿಮಗೆ ನೀಡಿರುವ ಪಟ್ಟಿ ನಕಲಿ. ನಿಮಗೆ ಉಚಿತ ಸೌಲಭ್ಯವಿಲ್ಲ. ಪಾವತಿಸಿದ ಕ್ವಾರಂಟೈನ್‌ಗೆ ಹೋಗಬೇಕು ಎಂದರುಈಗ ನಾವು ದಿನಕ್ಕೆ 1,250 ರೂ ಪಾವತಿಸುತ್ತಿದ್ದೇವೆ.” ಎಂದು ಅವರು ತಿಳಿಸಿದರು.

ದುಬೈನಿಂದ ಬಂದಿರುವ ಅವರೆಲ್ಲರೂ, ಪ್ರಯಾಣ ಟಿಕೆಟ್‌ಗಾಗಿ 17,000 ರೂ ಭರಿಸಿದ್ದಾರೆ. ಉದ್ಯೋಗ ಹರಸಿ ಹೋಗಿದ್ದ ಜನರು, ಅಲ್ಲಿ ದುಬಾರಿ ಬದುಕಿನಲ್ಲಿ ಇರಲಾರದೆ ಮರಳಿ ಬಂದಿದ್ದಾರೆ. ಉಚಿತ ಕ್ವಾರಂಟೈನ್‌ ವ್ಯವಸ್ಥೆ ಇದ್ದರೂ ಸಹ, ಅವರಿಗೆ ಅವಕಾಶ ನೀಡದಿರುವುದು ಅನ್ಯಾಯ.

ಹಸಿವಿನಿಂದ, ಬಳಲಿಕೆಯಿಂದ ಇಡೀ ದೇಶದ ಬಹುಸಂಖ್ಯಾತ ಜನರು ಪರದಾಡುತ್ತಿರುವಾಗ. ಒಬ್ಬ ವ್ಯಕ್ತಿಯ 14 ದಿನಗಳ ಕ್ವಾರಂಟೈನ್‌ಗೆ 17,000 ರೂ ವಸೂಲಿ ಮಾಡಲಾಗುತ್ತಿದೆ. ಈ ಹಣದಿಂದ ಅವರ ಕುಟುಂಬಗಳು ಮೂರು ತಿಂಗಳಾದರೂ ಆಹಾರ ಧಾನ್ಯ ಖರೀದಿಸಬಹುದಿತ್ತು. ಆದರೆ, ಜನರಿಗೆ ನೆರವಾಗಬೇಕಾದ ಆಡಳಿತ ಕ್ವಾರಂಟೈನ್‌ ಹೆಸರಿನಲ್ಲಿ ಮತ್ತಷ್ಟು ವಸೂಲಿಗಿಳಿದಿದೆ.

ಇದನ್ನೂ ಓದಿ: ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಏನು ನಿಯಮ? ಏನು ವ್ಯವಸ್ಥೆ? ಸಾಕ್ಷಾತ್ ವರದಿ

ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯಗೊಳಿಸಿರುವ ಸರ್ಕಾರ ಹೊಟೆಲ್‌ಗಳಿಗೆ ಸರಾಸರಿ 1,250 ರೂಗಳನ್ನು. 5-ಸ್ಟಾರ್ ಹೋಟೆಲ್‌ಗಳಲ್ಲಿ 4,100 ರೂ ನಿಗದಿ ಮಾಡಿದೆ. ಅಲ್ಲದೆ, ಸರ್ಕಾರಿ ಶಾಲೆಗಳು, ಹಾಸ್ಟೆಲ್‌ಗಳು ಕಲ್ಯಾಣ ಮಂಟಪಗಳಲ್ಲಿ ಉಚಿತ ಕ್ವಾರಂಟೈನ್‌ಗೂ ವ್ಯವಸ್ಥೆ ಮಾಡಲಾಗಿದೆ.

ರಾಜ್ಯ ಸರ್ಕಾರ ಹೊರಡಿಸಿದ ಮೇ 11ರ ಆದೇಶದ ಪ್ರಕಾರ; ಗೋವಾವನ್ನು ಹೊರತುಪಡಿಸಿ ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಎಲ್ಲರೂ 14 ದಿನಗಳವರೆಗೆ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು. ಅವರು ಸೋಂಕು ರಹಿತರಾಗಿದ್ದರೂ ಸಹ ಮನೆಗೆ ಮರಳಲು ಅನುಮತಿಸುವುದಿಲ್ಲ ಎಂದು ಹೇಳಲಾಗಿದೆ. ಅಂತಾರಾಷ್ಟ್ರೀಯ  ಪ್ರಯಾಣಿಕರಿಗೂ ಇದೇ ರೀತಿಯ ನಿಯಮಗಳು ಜಾರಿಯಲ್ಲಿವೆ.

ಆದರೆ, ಈ ಬಗ್ಗೆ ರಾಜ್ಯಕ್ಕೆ ಬರುತ್ತಿರುವ ಪ್ರಯಾಣಿಕರಿಗೆ ಮಾಹಿತಿ ರವಾನೆಯಾಗದೇ ಇರುವುದರಿಂದಾಗಿ ಗೊಂದಲು ಉಂಟಾಗಿದೆ. ಪ್ರಯಾಣಿಕರಿಗೆ ಮಾಹಿತಿಯ ಕೊರತೆಯಾಗುತ್ತಿದೆ ಎಂದು ವರದಿಗಳು ತಿಳಿಸಿದರೂ, ಯಾರು ಈ ಬಗ್ಗೆ ಗಮನಹರಿಸಿಲ್ಲ. ಅಲ್ಲದೆ, ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಉಚಿತ ಕ್ವಾರಂಟೈನ್ ಸೌಲಭ್ಯವನ್ನು ನಿರಾಕರಿಸಲಾಗಿದ್ದು, ಕೊಠಡಿಗಳಿಗೆ ಹಣ ಪಾವತಿಸಲು ಒತ್ತಾಯಿಸಲಾಗುತ್ತಿದೆ. ಇದೆಲ್ಲವೂ ಸರ್ಕಾರದ ಗೊಂದಲುಗಳು ಹಾಗೂ ನಿರ್ಲಕ್ಷತನಕ್ಕೆ ಉದಾಹರಣೆಗಳಾಗಿವೆ.

ಇದನ್ನೂ ಓದಿ: ಶ್ರಮಿಕ್ ರೈಲು ಓಡುತ್ತಿಲ್ಲ; ಕಾರ್ಮಿಕರ ನಡಿಗೆ ನಿಲ್ಲುತ್ತಿಲ್ಲ; ಸರದಿ ಸಾಲು ಮುಗಿಯುತ್ತಿಲ್ಲ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights