ಚೆಸ್‌ನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಕನ್ನಡತಿ ಇಶಾ…

ಚೆಸ್‌ನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಕನ್ನಡತಿ ಇಶಾ

ಭಾರ​ತೀಯ ಚೆಸ್‌ನಲ್ಲಿ ಹಲವು ಹೊಸ ಪ್ರತಿಭೆಗಳ ಅನಾ​ವ​ರಣಗೊಳ್ಳು​ತ್ತಿದೆ. ಆ ಸಾಲಿಗೆ ಕರ್ನಾ​ಟ​ಕದ ಇಶಾ ಶರ್ಮಾ ಸಹ ಸೇರ್ಪಡೆಗೊಂಡಿ​ದ್ದಾರೆ. ಹಂಗೇ​ರಿಯ ಬ್ಯಾಲ​ಟೊ​ನ್ಲೆಲೆಯಲ್ಲಿ ನಡೆದ ಚೆಸ್‌ಟೂರ್ನಿಯಲ್ಲಿ ಅತ್ಯು​ತ್ತಮ ಪ್ರದ​ರ್ಶನ ತೋರಿದ ಇಶಾ, ರಾಜ್ಯದ ಮೊದಲ ಮಹಿಳಾ ಅಂತಾ​ರಾ​ಷ್ಟ್ರೀಯ ಮಾಸ್ಟರ್‌ (ಡ​ಬ್ಯು​ಐ​ಎಂ) ಆದ ಸಾಧ​ನೆ ಮಾಡಿ​ದ್ದಾರೆ.

♦ಕಾಶ್ಮೀರ ಆಟಗಾರ್ತಿ ಹುಡುಕಿಕೊಟ್ಟ ಭಾರತೀಯ ಸೇನೆ!

2017ರ ಶಾರ್ಜಾ ಮಾಸ್ಟ​ರ್ಸ್’ನಲ್ಲಿ ಮೊದಲ ನಾರ್ಮ್ ಸಾಧಿ​ಸಿದ್ದ ಇಶಾ, 2018ರ ವಿಶ್ವ ಕಿರಿ​ಯರ ಚಾಂಪಿ​ಯನ್‌ಶಿಪ್‌ನಲ್ಲಿ 2ನೇ ನಾರ್ಮ್ ಗಳಿ​ಸಿ​ದ್ದರು. ಇದೀ​ಗ ಹಂಗೇ​ರಿ​ಯಲ್ಲಿ ಮಹಿಳಾ ಅಂತಾ​ರಾ​ಷ್ಟ್ರೀಯ ಮಾಸ್ಟರ್‌ ಪಟ್ಟಕ್ಕೇರಲು ಅಗ​ತ್ಯ​ವಿ​ರುವ 3ನೇ ನಾರ್ಮ್ ಗಳಿಸಿ, ರಾಜ್ಯಕ್ಕೆ ಕೀರ್ತಿ ತಂದಿ​ದ್ದಾರೆ.

2 ವರ್ಷ ಶಾಲೆಗೇ ಹೋಗದವ ಗ್ರ್ಯಾಂಡ್‌ಮಾಸ್ಟರ್‌!

♦ಚೆಸ್‌ಗಾಗಿ ಶಾಲೆ ಬಿಟ್ಟಿದ್ದ ಇಶಾ

11ನೇ ವಯ​ಸ್ಸಿ​ನಲ್ಲಿ ಚೆಸ್‌ ಕ್ರೀಡೆಗೆ ಕಾಲಿಟ್ಟ ಇಶಾ, ಶಾಲೆ ತೊರೆ​ಯ​ಬೇ​ಕಾ​ಯಿತು. ಚೆಸ್‌ನಲ್ಲಿ ಏನಾ​ದರೂ ಸಾಧಿ​ಸ​ಬೇಕು ಎನ್ನುವ ಛಲದಿಂದ ಕ್ರೀಡೆಯಲ್ಲಿ ಮುಂದು​ವ​ರಿದ ಇಶಾಗೆ ಪೋಷ​ಕರ ಬೆಂಬಲ ಬಲ ನೀಡಿತು. ‘ಚೆಸ್‌ ಬಗ್ಗೆ ನನ​ಗಿ​ರುವ ಒಲವೇ ಈ ಸಾಧನೆಯ ಹಿಂದಿ​ರುವ ಗುಟ್ಟು’ ಎಂದು ಇಶಾ ಸುವರ್ಣ ನ್ಯೂಸ್.ಕಾಂ ಸಹೋದರ ಸಂಸ್ಥೆಯಾದ ‘ಕ​ನ್ನಡಪ್ರಭ’ದೊಂದಿಗೆ ಸಂಭ್ರಮ ಹಂಚಿ​ಕೊಂಡರು. ‘ಚೆಸ್‌ ಹಾಗೂ ಶಾಲೆ ಎರ​ಡನ್ನು ಒಟ್ಟಿಗೆ ನಿಭಾ​ಯಿ​ಸಲು ಸಾಧ್ಯ​ವಿಲ್ಲ. ಪ್ರತಿ ದಿನ 10 ಗಂಟೆಗಳ ಕಾಲ ಅಭ್ಯಾಸ ನಡೆ​ಸ​ಬೇ​ಕಿದೆ. ಬಹು​ತೇಕರು ಇದೇ ರೀತಿ ಮಾಡು​ತ್ತಾರೆ’ ಎಂದು ಇಶಾ ಹೇಳಿ​ದರು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌.ಡಿ.ಎಂ ಕಾಲೇ​ಜಿ​ನಲ್ಲಿ ಮೊದಲ ವರ್ಷ ಪದವಿ ಶಿಕ್ಷಣ ವ್ಯಾಸಂಗ ಮಾಡು​ತ್ತಿ​ದ್ದಾರೆ. ಚೆಸ್‌ಗಾಗಿ ವಿಜ್ಞಾನ ಕೋರ್ಸ್‌ ಬಿಟ್ಟು ಕಲಾ ಕೋರ್ಸ್‌ ಆಯ್ಕೆ ಮಾಡಿ​ಕೊಂಡಿ​ದ್ದಾಗಿ 18 ವರ್ಷದ ಇಶಾ ತಿಳಿ​ಸಿದರು.

ತಂದೆ ಚಿಕಿತ್ಸೆಗೆ ಸಹಾಯ ಮಾಡಿ; ಯುವತಿ ಮನವಿಗೆ ಗಂಭೀರ್ ಸ್ಪಂದನೆ!

ಮಗ​ಳಿಗಾಗಿ ವೃತ್ತಿ ತೊರೆದ ತಾಯಿ!

ಇಶಾ ತಾಯಿ ಡಾ.ವಿದ್ಯಾ, ಮಗಳ ಚೆಸ್‌ ಸಾಧನೆಗಾಗಿ ತಮ್ಮ ವೃತ್ತಿ​ಬ​ದು​ಕನ್ನು ತೊರೆ​ದರು. ‘ನನ್ನ ಸಾಧನೆ ಹಿಂದೆ ತಾಯಿಯ ಶ್ರಮ​ವಿದೆ. ನನ​ಗಾಗಿ ಅವರು ವೃತ್ತಿ​ಯನ್ನೇ ತೊರೆ​ಯ​ಬೇ​ಕಾ​ಯಿ​ತು. ಕೋಚ್‌ಗಳು, ಶಾಲಾ, ಕಾಲೇ​ಜು​ಗ​ಳ ಶಿಕ್ಷಕರ ನಿರಂತರ ಬೆಂಬಲ ಸಾಧನೆಗೆ ನೆರ​ವಾ​ಯಿ​ತು ‘ ಎಂದು ಇಶಾ ಹೇಳಿ​ದರು. ರಾಷ್ಟ್ರೀಯ, ಅಂತಾ​ರಾ​ಷ್ಟ್ರೀಯ ಟೂರ್ನಿ​ಗ​ಳಿಗೆ ತೆರ​ಳು​ವಾಗ ಇಶಾ ಜತೆ ತಾಯಿ ವಿದ್ಯಾ ಸಹ ಪ್ರಯಾ​ಣಿ​ಸಲಿ​ದ್ದಾರೆ. ಪ್ರತಿ ದಿನ 8ರಿಂದ 10 ಗಂಟೆ ಅಭ್ಯಾಸ ನಡೆ​ಸುವ ಇಶಾಗೆ ಸಹೋ​ದರಿ ಸಹ ನೆರ​ವಾಗುತ್ತಾರೆ. ಚೆಸ್‌ನಲ್ಲಿ ಏಕಾ​ಗ್ರತೆ ಬಹಳ ಮುಖ್ಯ​ವಾ​ಗಿ​ರುವ ಕಾರಣ, ಇಶಾ ಧ್ಯಾನದ ಮೊರೆ ಹೋಗಿ​ರು​ವು​ದಾಗಿ ಹೇಳಿ​ದರು.

♦ಪ್ರಜ್ಞಾನಂದ ವಿಶ್ವದ 2ನೇ ಕಿರಿಯ ಗ್ರ್ಯಾಂಡ್ ಮಾಸ್ಟರ್

ಹತ್ತಾರು ಪ್ರಶ​ಸ್ತಿ: ದಕ್ಷಿಣ ಕನ್ನಡದ ಬೆಳ್ತಂಗ​ಡಿ​ಯ​ವ​ರಾದ ಇಶಾ ರಾಷ್ಟ್ರೀಯ, ಅಂತಾ​ರಾ​ಷ್ಟ್ರೀಯ ಟೂರ್ನಿ​ಗ​ಳಲ್ಲಿ ಅನೇಕ ಪ್ರಶ​ಸ್ತಿ​ಗ​ಳನ್ನು ಗೆದ್ದಿ​ದ್ದಾರೆ. 2015ರಲ್ಲಿ ಅವರು ಮಹಿಳಾ ಕೆಡೆಟ್‌ ಮಾಸ್ಟರ್‌ ಪಟ್ಟ​ಕ್ಕೇ​ರಿ​ದ್ದರು. ಏಷ್ಯನ್‌ ಕಿರಿ​ಯರ ರ‍್ಯಾಪಿಡ್‌ ಟೂರ್ನಿ​ಯಲ್ಲಿ ಚಿನ್ನ ಗೆದ್ದಿದ್ದ ಅವ​ರಿಗೆ ಶ್ರೇಷ್ಠ ಮಹಿಳಾ ಆಟ​ಗಾರ್ತಿ ಪ್ರಶ​ಸ್ತಿಯೂ ಸಿಕ್ಕಿತ್ತು. 2014ರ ರಾಷ್ಟ್ರೀಯ ಶಾಲಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿ​ಸಿದ್ದ ಇಶಾ, ರಾಷ್ಟ್ರೀಯ ಅಂಡರ್‌-19 ಚಾಂಪಿ​ಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿ​ದ್ದರು.

♦ಡಬ್ಯು​ಐಎಂ ಗಳಿ​ಸು​ವುದು ಹೇಗೆ?

ಅಂತಾ​ರಾ​ಷ್ಟ್ರೀಯ ಚೆಸ್‌ ಫೆಡ​ರೇಷನ್‌ (ಫಿಡೆ) ಪ್ರಶ​ಸ್ತಿ​ಗಳು ಲಿಂಗ ಪ್ರತ್ಯೇ​ಕತೆ ಹೊಂದಿ​ರ​ದಿ​ದ್ದ​ರೂ, ಮಹಿಳಾ ಚೆಸ್‌ ಪಟು​ಗ​ಳಿ​ಗೆಂದೇ ನಾಲ್ಕು ಪ್ರಶ​ಸ್ತಿ​ಗ​ಳನ್ನು ನೀಡ​ಲಾ​ಗು​ತ್ತದೆ. ಓಪನ್‌ ಟೈಟಲ್‌ಗಳ ಜತೆ ಆಟ​ಗಾ​ರ್ತಿ​ಯರು ಈ ಪಟ್ಟಗಳನ್ನೂ ಹೊಂದ​ಬ​ಹು​ದಾ​ಗಿದೆ. ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಅತ್ಯು​ತ್ತಮ ಪಟ್ಟವಾದರೆ, 2ನೇ ಅತ್ಯು​ತ್ತಮ ಪಟ್ಟವೇ ಮಹಿಳಾ ಅಂತಾ​ರಾ​ಷ್ಟ್ರೀಯ ಮಾಸ್ಟರ್‌. ಇದಕ್ಕೆ ಮೂರು ನಾರ್ಮ್(ಟೂ​ರ್ನಿ​ಯಲ್ಲಿ ಶ್ರೇಷ್ಠ ಪ್ರದ​ರ್ಶ​ನ) ಗಳನ್ನು ಸಾಧಿ​ಸ​ಬೇ​ಕಿದೆ. ಜತೆಗೆ 2100 ರೇಟಿಂಗ್‌ ಅಂಕ​ಗ​ಳನ್ನು ಹೊಂದಿ​ರ​ಬೇ​ಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights