ಜನತಾ ಕರ್ಫ್ಯು : ಭಾನುವಾರ ಕರ್ನಾಟಕ ಸಂಪೂರ್ಣ ಸ್ಥಗಿತಮಾಡಲು ಹೊರಟ ಸರಕಾರ..

ಕೊರೋನಾ ವಿರುದ್ಧ ಕದನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರೆ ನೀಡಿರುವ ಜನತಾ ಕರ್ಫ್ಯೂವನ್ನು ಯಶಸ್ವಿಗೊಳಿಸಲು ಕರ್ನಾಟಕ ಸಜ್ಜಾಗಿದೆ.  ಅದಕ್ಕಾಗಿ ಕ್ಯಾಬ್, ಆಟೊ, ಮದ್ಯ, ಹಣ್ಣು-ತರಕಾರಿ, ಹೋಟೆಲ್ ಬಂದ್, ಬಸ್ಸು, ಮೆಟ್ರೊ  ಬಂದ ಮಾಡಲು BSY  ಸರಕಾರ ಸನ್ನದ್ದವಾಗಿದೆ.. ಈ ಮಧ್ಯ ಜನರನ್ನು ಮನೆಯಲ್ಲಿಯೇ ಕಟ್ಟಿಹಾಕುವ ಮೂಲಕ ಜಾಗೃತಿ ಮೂಡಿಸುವ ಪ್ರಧಾನಿ ಮೋದಿ ಅವರ ಐಡಿಯಾಗೆ ರಾಜ್ಯದ ಬಹುತೇಕ ಸಂಗಟನೆಗಳೂ ಬೆಂಬಲ ಸೂಚಿಸಿವೆ.

ಜನತಾ ಕರ್ಫ್ಯೂ ಅಂಗವಾಗಿ ಕ್ಯಾಬ್, ಆಟೊ ಸೇವೆ, ಮದ್ಯ ಮಾರಾಟ, ಹಾಪ್‌ಕಾಮ್ಸ್, ಹಣ್ಣು-ತರಕಾರಿ ವ್ಯಾಪಾರ, ಹೋಟೆಲ್, ರೆಸ್ಟೊರಾಂಟ್‌ಗಳನ್ನು ಮುಚ್ಚಲು ಆಯಾ ಸಂಘಟನೆಗಳ ಒಕ್ಕೂಟಗಳು ನಿರ್ಧರಿಸಿವೆ.

ಇನ್ನು ಪೆಟ್ರೋಲ್ ಮಾರಾಟದ ವಿಚಾರವಾಗಿ ಮೈಸೂರು, ಶಿವಮೊಗ್ಗದಲ್ಲಿ ಮಾರಾಟ ಬಂದ್ ಮಾಡಲು ನಿರ್ಧರಿಸಲಾಗಿದೆ. ಆದರೆ ರಾಜ್ಯಾದ್ಯಂತ ಈ ನಿರ್ಧಾರ ಅನ್ವಯಾಗುತ್ತಿಲ್ಲ. ಬೆಂಗಳೂರು ಮೆಟ್ರೋ ರೈಲಿನ ಸೇವೆ ಸಹ ರದ್ದಾಗಿದೆ.

ಸಾರ್ವಜನಿಕ ಸಂಚಾರದ ಪ್ರಮುಖ ಸಾಧನವಾಗಿ ಸರಕಾರಿ ಬಸ್‌ಗಳ ಸಂಚಾರವನ್ನು ಸಹ ರದ್ದು ಪಡಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿವೆ. ಔಷಧದ ಅಂಗಡಿ, ಆಸ್ಪತ್ರೆ, ಹಾಲು, ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಭಾನುವಾರ ಜನರೇ ಕರ್ಫ್ಯೂ ಹೇರಲು ಮುಂದಾಗಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಅವರ ಜನತಾ ಕರ್ಫ್ಯೂ ಕರೆಯನ್ನು ಬೆಂಬಲಿಸಿ ಲೋಕಸಭೆಯಲ್ಲಿ ಶುಕ್ರವಾರ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಯಿತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights