ಜನ ಗುಂಪಾಗಿ ಸೇರಿದ್ದು ಮೋದಿಯ ‘ತಾಲಿ ಬಜಾವೊ’ ಹೇಳಿಕೆಯಿಂದ -ಶಿವಸೇನೆ

ಕೊರೊನಾ ತಡೆಗೆ ಮೋದಿ ಕರೆ ಕೊಟ್ಟ ‘ತಾಲಿ ಬಜಾವೊ’ ಸಾಕಷ್ಟು ವಿರೋಧ ಸೃಷ್ಟಿ ಮಾಡಿದೆ. ಮನೆಯಲ್ಲಿ ಜನ ಗುಂಪಾಗಿ ಹೊರಬಂದಿದ್ದು ಮೋದಿ ತಾಲಿ ಬಜಾವೋ ಹೇಳಿಕೆ ಕಾರಣ ಎಂದು ಶಿವಸೇನೆ ಆರೋಪಿಸಿದೆ.

ಮೊನ್ನೆಯಷ್ಟೇ (ಭಾನುವಾರ) ಬೆಳಿಗ್ಗೆ 7 ರಿಂದ 9ರ ವರಗೆ ಮನೆಬಿಟ್ಟು ಹೊರಬಾರದಂತೆ ಕೊರೊನಾ ತಡೆಗೆ ದೇಶದ ಪ್ರಧಾನಿಯವರು ಕರೆ ನೀಡಿದ್ದರು. ಅದೇ ಸಂಜೆ 5 ಗಂಟೆಗೆ ಸರಿಯಾಗಿ ಜನಸಾಮಾನ್ಯರು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಪೊಲೀಸರಿಗೆ, ಮಾಧ್ಯಮದವರಿಗೆ ಗೌರವಿಸಬೇಕು ಎನ್ನುವ ಮನವಿ ಮಾಡಿದ್ರು. ಈ ಕರೆಯಂತೆ ಬೆಳಿಗ್ಗೆಯಿಂದ ಸಂಜೆವರೆಗೂ ಮನೆಯಲ್ಲಿದ್ದ ಜನ ಸಂಜೆ 5 ಗಂಟೆಗೆ ಮನೆಯಿಂದ ಹೊರಬಂದು ಗುಂಪು ಗುಂಪಾಗಿ ಸೇರಿ ಗೌರವ ಸಲ್ಲಿಸಿದ್ದಾರೆ. ಇದರಿಂದ ಲಾಕ್ ಡೌನ್ ಗಾಂಭೀರತೆ ಕಳೆದುಕೊಂಡಿದೆ ದೇಶ ಎಂದು ಶಿವಸೇನೆ ಆರೋಪಿಸಿದೆ.

ಮೋದಿಯವರ ಈ ಹೇಳಿಕೆಯಿಂದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಜಾರಿಗೊಳಿಸಲಾಗುತ್ತಿರುವ ಲಾಕ್​ಡೌನ್​ನ ಗಂಭೀರತೆಯನ್ನು ಜನರು ಅರಿತುಕೊಳ್ಳುತ್ತಿಲ್ಲ ಎಂದು ಮಂಗಳವಾರ ಶಿವಸೇನೆ ಹೇಳಿದೆ.ಸೇನಾ ಮುಖವಾಣಿ ಸಾಮ್ನಾದಲ್ಲಿ ವಿಷಯದ ಬಗ್ಗೆ ಭಯ ಇದ್ದಲ್ಲಿ ನಾಗರಿಕರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಸಂಪಾದಕೀಯ ಹೇಳಿದೆ. “ಭಾನುವಾರ ಸಂಜೆ ನಡೆದ ಘಟನೆಯ ನಂತರ ಜನರು ಕೊರೋನಾ ವೈರಸ್​ಗೆ ಹೆದರುವುದಿಲ್ಲ” ಎಂದು ಪತ್ರಿಕೆ ಆರೋಪಿಸಿದೆ.ರಾಜಕೀಯ ಪರಿಸ್ಥಿತಿಯ ಬಗ್ಗೆ ಜನರು ಗಂಭೀರವಾಗಿ ಯೋಚಿಸದಿದ್ದರೆ ಪ್ರಧಾನಿ ಅಥವಾ ಮುಖ್ಯಮಂತ್ರಿಗಳ ಕಾಳಜಿಯ ಉಪಯೋಗವೇನು? ಎಂದು ಸೇನೆ ಪ್ರಶ್ನಿಸಿದೆ.

ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಾಕಷ್ಟು ವೈದ್ಯಕೀಯ ಉಪಕರಣಗಳ ಕೊರತೆಯಿದೆ ಎಂದು ಹೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಏಕೆಂದರೆ ಪ್ರಧಾನ ಆರೋಗ್ಯ ಸಂಸ್ಥೆ ಕೇಂದ್ರದ ವ್ಯಾಪ್ತಿಗೆ ಬರುತ್ತದೆ ಎಂದು ಶಿವಸೇನೆ ಸಲಹೆ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights