ಜಾರ್ಖಂಡ್ ವಿಧಾನಸಭೆ ಚುನಾವಣೆ ರಿಸಲ್ಟ್ : ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಜಯ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಈ ವರೆಗಿನ ವರದಿಗಳ ಅನ್ವಯ ಬಿಜೆಪಿ ಮತ್ತು ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಎದುರಾಗಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಹಾವು-ಏಣಿ ಆಟದ ನಂತರ ಕಾಂಗ್ರೆಸ್-ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)-ರಾಷ್ಟ್ರೀಯ ಜನತಾ ದಳ(ಆರ್‍ಜೆಡಿ) ಮೈತ್ರಿ ಕೂಟ ಗೆಲುವು ಸಾಧಿಸಿ ಸರ್ಕಾರ ರಚನೆಯತ್ತ ದಾಪುಗಾಲು ಹಾಕಿದೆ.

ಎರಡನೇ ಬಾರಿ ಅಧಿಕಾರ ಗದ್ದುಗೆಗೇರುವ ಮುಖ್ಯಮಂತ್ರಿ ರಘುವರದಾಸ್ ನೇತೃತ್ವದ ಬಿಜೆಪಿ ಪಕ್ಷಕ್ಕೆ ಈ ಫಲಿತಾಂಶದಿಂದ ಭಾರೀ ಮುಖಭಂಗವಾಗಿದೆ. ಇಂದು ಮುಂಜಾನೆ 7 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಆರಂಭದಿಂದಲೂ ಬಿಜೆಪಿ ಮತ್ತು ಮಿತ್ರಕೂಟಗಳ ನಡುವೆ ತೀವ್ರ ಹಣಾಹಣಿ ಕಾರಣವಾಗಿದ್ದ ಈ ಫಲಿತಾಂಶದಲ್ಲಿ ಬೆಳಗ್ಗೆ 11 ಗಂಟೆ ಹೊತ್ತಿಗೆ ಕಾಂಗ್ರೆಸ್-ಜೆಎಂಎಂ ಮತ್ತು ಆರ್‍ಜೆಡಿ ಮೈತ್ರಿಕೂಟ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಮೂರು ಪಕ್ಷಗಳ ಮೈತ್ರಿಕೂಟ ಒಟ್ಟು 42 ಸ್ಥಾನಗಳನ್ನು ಗಳಿಸಿದೆ. ಇದು ಸರ್ಕಾರ ರಚನೆಗೆ ಬೇಕಾಗುವಷ್ಟು ಸರಳ (42 ಮ್ಯಾಜಿಕ್ ನಂಬರ್) ಬಹುಮತವಾಗಿದೆ. ಗೆಲುವಿನ ಭಾರೀ ನಿರೀಕ್ಷೆ ಹೊಂದಿದ್ದ ಬಿಜೆಪಿ 28 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.ಜಾರ್ಖಂಡ್ ವಿಕಾಸ ಮೋರ್ಚಾ 4 ಸ್ಥಾನ, ಎಜೆಎಸ್‍ಯು-3 ಮತ್ತು ಪಕ್ಷೇತರರು 4 ಸ್ಥಾನಗಳಲ್ಲಿ ವಿಜಯಿಯಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights