ನಾನು ಸ್ವಾಮೀಜಿಗೆ ಕರೆದು ಟಿಕೆಟ್ ಕೊಟ್ಟಿರಲಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ

ಬಿಜೆಪಿ ಒತ್ತಡ ತಂತ್ರ ಅನುಸರಿಸಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹಿರೆಕೆರೂರಿನಲ್ಲಿ ನಮ್ಮ ಅಭ್ಯರ್ಥಿ ಸ್ವಾಮೀಜಿಯವರನ್ನ ಚುನಾವಣ ಕಣದಿಂದ ಹಿಂದೆ ಸರಿಸಲು ಸಿಎಂ ಪುತ್ರನೆ ಸಭೆ ನಡೆಸಿದ್ದಾರೆ. ಅದೇ ರೀತಿ ರಂಭಾಪುರಿ ಸ್ವಾಮೀಜಿಯು ಮನವೊಲಿಸುತ್ತಿದ್ದಾರಂತೆ‌. ಇಷ್ಟು ಒತ್ತಡಗಳನ್ನಾಕಿ ಚುನಾವಣೆ ಗೆಲ್ಲುವ ಅಗತ್ಯ ಇದಿಯಾ. ನಾನು ಸ್ವಾಮೀಜಿಗೆ ಕರೆದು ಟಿಕೆಟ್ ಕೊಟ್ಟಿರಲಿಲ್ಲ. ಅವರೆ ನಿಮ್ಮ ಪಕ್ಷದಿಂದ ಟಿಕೆಟ್ ಕೊಡಿ ಅಂದ್ರು‌. ಅದೇ ರೀತಿ ಅವರ ಅಭಿಮಾನಿಗಳು ಒತ್ತಡ ಹಾಕಿದ್ರು‌ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ತನ್ವೀರ್ ಸೇಠ್ ಅರೋಗ್ಯ ವಿಚಾರ :-

ತನ್ವೀರ್ ಸೇಠ್ ಅರೋಗ್ಯ ವಾಗಿ ಇದ್ದಾರೆ.‌ ತನ್ವೀರ್ ಸೇಠ್ ಅರೋಗ್ಯ ವಿಚಾರಿಸಿದ ಬಳಿಕ ಕುಮಾರಸ್ವಾಮಿ ಹೇಳಿದ್ದಾರೆ. ಈ ಘಟನೆ ಯಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ. ವೈದ್ಯರ ಸಹಾಯದಿಂದ ಪುನರ್ಜನ್ಮ ಪಡೆದಿದ್ದಾರೆ. ಇಂದು ವಾರ್ಡ್ ಗೆ ಶಿಫ್ಟ್ ಅಗ್ತಾರೆ. ಅವರ ಒಳ್ಳೆಯ ತನ ಕಾಪಾಡಿದೆ. ಸರ್ಕಾರ ಸೂಕ್ತ ತನಿಖೆ ಮಾಡುತ್ತಿದ್ದಾರೆ. ತನಿಖೆ ಹಂತದಲ್ಲಿ ಯಾವುದೇ ಪ್ರತಿಕ್ರಿಯೆ ಕೊಡುವ ಆಗತ್ಯ. ಮೂಲ ಯಾರಿದ್ದಾರೆ ಅಂತ ಕಂಡುಹಿಡಿಯಬೇಕಿದೆ ಎಂದಿದ್ದಾರೆ.

ಜಿ.ಟಿ.ಡಿ ಜೊತೆ ನೋ ಟಾಕಿಂಗ್ :-
ಮಾಜಿ ಸಿಎಂ ಸಿದ್ದರಾಮಯ್ಯ, ಜಿ.ಟಿ.ದೇವೆಗೌಡರ ಬೆಂಬಲ ಪಡೆಯುವ ವಿಚಾರಕ್ಕೆ ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ಎಂದ ಮೇಲೆ ಎಲ್ಲರು ಒಂದೊಂದು ತಂತ್ರ ಮಾಡ್ತಾರೆ. ಒಬ್ಬೊಬ್ಬರ ಬೆಂಬಲ ಕೋರುತ್ತಾರೆ. ಅದೇ ರೀತಿ ಸಿದ್ದರಾಮಯ್ಯ ಜಿ.ಟಿ.ದೇವೆಗೌಡರ ಬೆಂಬಲ ಕೇಳಿರಬಹುದು. ಆದರೆ ನಾನು ಜಿ.ಟಿ.ದೇವೆಗೌಡರ ಜೊತೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಅವರೇ ನಮ್ಮ ಪಕ್ಷದ ಅಭ್ಯರ್ಥಿ ನಿಂತಿದ್ದಾನೆ ಅಂತ ಬೆಂಬಲ ಕೊಟ್ಟರೆ ಸ್ವಾಗತ ಎಂದರು.

ಹುಣಸೂರಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಕುಮಾರಸ್ವಾಮಿ :-

ಪಕ್ಷಕ್ಕೆ ಮೋಸ ಮಾಡಿ ನಿಮ್ಮೆಲ್ಲರ ಪ್ರೀತಿಗೆ ಮೋಸ ಮಾಡಿದ್ದಕ್ಕೆ ಉಪಚುನಾವಣೆ . ಈ ಗ್ರಾಮ ಜೆಡಿಎಸ್‌ನ ತವರು ಮನೆ. ನಿಮ್ಮ ಅಭಿಮಾನದಿಂದಲೇ ಪಕ್ಷ ಉಳಿದಿದೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಲು ಕಾರಣ ರೈತರ ಕಷ್ಟ ಬಗೆಹರಿಸುವುದು.
ಸಾಲ‌ಮನ್ನಾ ಮಾಡಲು ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ‌. ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ. ನೆರೆ ಹಾವಳಿಯಿಂದ ಜನರ ತೊಂದರೆಯಲ್ಲಿದ್ದಾರೆ. ಬೆಳೆ ನಾಶವಾದರೂ ಪರಿಹಾರ ಕೊಟ್ಟಿಲ್ಲ ನಾನು ವಿಶ್ವನಾಥ್ ಬಗ್ಗೆಯೂ ಮಾತನಾಡುವುದಿಲ್ಲ. ಸಿದ್ದರಾಮಯ್ಯ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಭಾಷಣದಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ತಂಬಾಕು ಬೆಳೆಗೆ ಸೂಕ್ತ ಬೆಲೆ ಕೊಡುತ್ತಿಲ್ಲ. ಇದರ ಬಗ್ಗೆ ಧ್ವನಿ ಎತ್ತುತ್ತಿದ್ದ ದೇವೇಗೌಡರನ್ನು ಮನೆಯಲ್ಲಿ ಕೂರಿಸಿದ್ದಾರೆ. ಬಿಜೆಪಿ ಹಣ ಲೂಟಿ ಮಾಡಿ ಪಾಪದ ಹಣದಲ್ಲಿ ಚುನಾವಣೆಗೆ ಬರುತ್ತಿದ್ದಾರೆ. ಎಲ್ಲರೂ ಎಚ್ಚರದಿಂದಿರಿ. ನಾನು ಅಂದುಕೊಂಡಿರುವ ಕೆಲಸ ಮಾಡಲು ಏಕಾಂಗಿಯಾಗಿ ಸರ್ಕಾರ ಬರಬೇಕು ಎಂದರು.

ತನ್ನ ರಾಜಕೀಯಕ್ಕೆ ಬಿಜೆಪಿಯಿಂದ ಧರ್ಮ‌ಗುರುಗಳ ಬಳಕೆ :-

ಬಿಜೆಪಿ ತನ್ನ ರಾಜಕೀಯಕ್ಕೆ ಧರ್ಮ‌ಗುರುಗಳನ್ನ ಬಳಕೆ ಮಾಡಿಕೊಳ್ಳುತ್ತಿದೆ. ಧರ್ಮಗುರುಗಳನ್ನ ಬಳಸಿ ನಮ್ಮ ಕೆಲ ಅಭ್ಯರ್ಥಿಗಳ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ. ಹೀಗೂ ರಾಜಕಾರಣ ಮಾಡಬೇಕಾ? ಧರ್ಮಗುರುಗಳ ಒತ್ತಡ ಹಲವು ಆಮಿಷಗಳನ್ನ ಕೂಡ‌‌ ಬಿಜೆಪಿ ಒಡ್ಡಿದೆ. ಆದ್ರೂ ನಾಮಪತ್ರ ವಾಪಸ್ ಪಡೆಯದಂತೆ ನಾನು ಅಭ್ಯರ್ಥಿಗಳಿಗೆ ಹೇಳಿದ್ದೇನೆ. ಇನ್ನು ಎರಡ ಗಂಟೆ ಬಾಕಿ ಇದೆ ಏನಾಗುತ್ತೆ ನೋಡೋಣ.

ಅನರ್ಹ ಶಾಸಕರ ವಿರುದ್ದ ದೊಡ್ಡ ಆಕ್ರೋಶ ಎದ್ದಿದೆ. 15 ಅನರ್ಹರನ್ನ ಸೋಲಿಸಲು ಹೋರಾಟ ಆರಂಭಿಸಿದ್ದೇವೆ ಎಂದು ಹುಣಸೂರು ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಹೆಚ್‌ಡಿಕೆ ಹೇಳಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights