ನಾಯಿಗೂ ಬಂತು ಬರ್ತಡೆ ಆಚರಣೆ : ಊರಿಗೆ ಊಟ – ಐದು ತೊಲೆ ಚಿನ್ನದ ಸರ ಗಿಫ್ಟ್

ಎಲ್ಲರಿಗೂ ತಿಳಿದ ಪ್ರಕಾರ ಮನುಷ್ಯರು ಮಾತ್ರ ಹುಟ್ಟುಹಬ್ಬದ ದಿನಾಚರಣೆ ಆಚರಣೆ ಮಾಡಿಕೊಳ್ತಾರೆ. ಆದ್ರೀಗ ನಾಯಿಗಳಿಗೂ ಹುಟ್ಟುಹಬ್ಬದ ಆಚರಣೆ ಮಾಡಲಾಗುತ್ತೆ ಅಂದ್ರೆ ನೀವು ನಂಬಲೇಬೇಕು.

ಹೌದು…  ನಾಯಿಗೂ ಬಂದಿದೆ ಬರ್ತಡೆ ಆಚರಣೆ. ವಿಜಯಪುರ ಜಿಲ್ಲೆ‌ಯ ನಿಡಗುಂದಿ‌ ಪಟ್ಟಣದಲ್ಲಿ ಮಾಲೀಕನೊಬ್ಬ ಡಿ. 28 ರಂದು ಶ್ವಾನ ಬರ್ತಡೆ ಆಚರಿಸಿದ್ದಾನೆ. ನಿಡಗುಂದಿಯ ಬಿಎಂಟಿಸಿ ನೌಕರ ಶರಣು ಪತ್ರಿ ಹಾಗೂ ಮಾವ ಸಂಗಯ್ಯ ಅವರಿಂದ ಎಂಬುವರಿಂದ ನಾಯಿ ಬರ್ತಡೆ ಆಚರಣೆ ಮಾಡಲಾಗಿದೆ. ತಮ್ಮ ಮುದ್ದಿನ ನಾಯಿ ಟೈಗರ್ ಗೆ 2ನೇ ವರ್ಷದ ಬರ್ತಡೆ ಸಂಭ್ರಮ.

ಶ್ವಾನಪ್ರಿಯ ಶರಣ್ ಊರಿಗೆ ಊಟ ಹಾಕಿ ನಾಯಿಯ ಬರ್ತಡೆ ಮಾಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಪ್ರಿತಿಯ ಟೈಗರ್ ಗೆ ಬರ್ತಡೆ ಗಿಫ್ಟ್ ಆಗಿ ಐದು ತೊಲೆಯ ಚಿನ್ನದ ಸರ ಹಾಕಿದ್ದಾರೆ.ನಾಯಿಗೆ ಆರತಿ ಬೆಳಗಿ, ಐದು ಕೇಜಿ ಕೇಕ್ ಕತ್ತರಿಸಿ ಬರ್ತಡೆ ಮಾಡಲಾಗಿದೆ. ಟೈಗರ್(ನಾಯಿ) ಹುಟ್ಟುಹಬ್ಬದ ಅಂಗವಾಗಿ 500 ಜನಕ್ಕೆ ಬಾರಿ ಭೋಜನ ಕೂಡ ಹಾಕಿಸಲಾಗಿದೆ.

ಟೈಗರ್ ಬರ್ತಡೆಗೆ ಬಂದ ಜನರಿಗೆ ಊಟಕ್ಕೆಂದು ಪಾಯಸ(ಸಿಹಿತಿಂಡಿ) ಪೂರಿ, ಬಾಜಿ, ರೈಸ್, ಪಾಪಡ್ ಸೇರಿದಂತೆ ನಾನಾ ಖಾದ್ಯ ಬಡಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ.ಯುವಕರು ಬಾನೆತ್ತರಕ್ಕೆ ಪಟಾಕಿ‌ ಸಿಡಿಸಿ ಸಂಭ್ರಮಿಸಿದರೆ, ನಾಯಿ ಹುಟ್ಟುಹಬ್ಬಕ್ಕೆ ಬಂದವರೆಲ್ಲ ಶ್ವಾನಕ್ಕೆ ಹರಸಿ, ಹಾರೈಸಿ ಭೋಜನ ಸವಿದು ಸಂಭ್ರಮಿಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights