ನಾಳೆ ಅಖಿಲ ಭಾರತ್ ಮುಷ್ಕರಕ್ಕೆ ಕರೆ ಹಿನ್ನೆಲೆ : ರಾಜ್ಯದ ಹಲವೆಡೆ ಮುಷ್ಕರಕ್ಕೆ ಬೆಂಬಲ
ನಾಳೆ ಅಖಿಲ ಭಾರತ್ ಮುಷ್ಕರಕ್ಕೆ ಕರೆ ಹಿನ್ನೆಲೆ ರಾಜ್ಯದ ಹಲವೆಡೆ ಮುಷ್ಕರಕ್ಕೆ ಬೆಂಬಲ ಕೇಳಿ ಬಂದಿದೆ.
ದಾವಣಗೆರೆಯಲ್ಲಿ ಎಐಟಿಯುಸಿ, ಐಎನ್ ಟಿಯುಸಿ, ಯುಟಿಯುಸಿ, ಎಲ್.ಐ.ಸಿ ಬ್ಯಾಂಕ್ ಹೀಗೆ ವಿವಿಧ ಸಂಘಟನೆಗಳಿಂದ ಮುಷ್ಕರಕ್ಕೆ ಬೆಂಬಲ ಸೂಚಿಸಲಾಗಿದೆ. ನಾಳೆ ಸಾರಿಗೆ ಸಂಪರ್ಕದ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಆರ್ಥಿಕ ನೀತಿ ಮತ್ತು ಕಾರ್ಮಿಕ ಪರ ಕಾನೂನುಗಳ ತಿದ್ದುಪಡಿ, ಬೆಲೆ ಏರಿಕೆ, ಕೈಗಾರಿಕಾ ಸಂಕಷ್ಟ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ಕೊಡಲಾಗಿದೆ.
ಬೆಳಿಗ್ಗೆ ೧೦ ಗಂಟೆಗೆ ಜಯದೇವ ವೃತ್ತದಿಂದ ಗಡಿಯಾರ ಕಂಬದ ವೃತ್ತದವರೆಗೂ ಪ್ರತಿಭಟನೆ ನಡೆಸಲಾಗುತ್ತದೆ. ಹೋಟೆಲ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಈವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿಲ್ಲ. ಸಾರಿಗೆ ಬಂದ್ ಬಗ್ಗೆ ಸಂಜೆ ತೀರ್ಮಾನವಾಗಲಿದೆ.
ನಾಳೆ ಬ್ಯಾಂಕ್, ಬಿ ಎಸ್ ಎನ್ ಎಲ್ ಹಾಗೂ ಎಲ್ ಐ ಸಿ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗುತ್ತಿದ್ದು, ಮುಷ್ಕರದಲ್ಲಿ ಅಶಾ ಕಾರ್ಯಕರ್ತೆಯರು ಭಾಗಿ ಹಿನ್ನೆಲೆ ಜಿಲ್ಲೆಯಲ್ಲಿ ಅಂಗನವಾಡಿಗಳು ಕೂಡ ಬಂದ್ ಮಾಡಲಾಗುವುದು.
ಚಿಕ್ಕಮಗಳೂರು :
ನಾಳೆ ಅಖಿಲ ಭಾರತ್ ಮುಷ್ಕರ (ಭಾರತ್ ಬಂದ್) ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಎಐಟಿಯುಸಿ, ಐಎನ್ ಟಿಯುಸಿ, ಯುಟಿಯುಸಿ, ಎಲ್.ಐ.ಸಿ ಬ್ಯಾಂಕ್ ಸಂಘಟನೆಗಳು, ರೈತ ಸಂಘ ಸೇರಿ ಹತ್ತಕ್ಕೂ ಹೆಚ್ಚು ವಿವಿಧ ಸಂಘಟನೆಗಳಿಂದ ಮುಷ್ಕರಕ್ಕೆ ಬೆಂಬಲ ನೀಡಿವೆ.ಆರ್ಥಿಕ ನೀತಿ ಮತ್ತು ಕಾರ್ಮಿಕ ಪರ ಕಾನೂನುಗಳ ತಿದ್ದುಪಡಿ, ಬೆಲೆ ಏರಿಕೆ, ಕೈಗಾರಿಕಾ ಸಂಕಷ್ಟ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ.
ನಾಳೆ ಸಾರಿಗೆ ಸಂಪರ್ಕ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದ್ದು, ಜಿಎಸ್ ಟಿ ವಿರುದ್ದವೂ ಧ್ವನಿ ಎತ್ತಲಿರುವ ವಿವಿಧ ಸಂಘಟನೆಗಳು, ಕನಿಷ್ಠ ವೇತನ ನೀಡುವಂತೆ ಕಾರ್ಮಿಕರು ಒತ್ತಾಯಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಮೆಸ್ಕಾಂ ಕಚೇರಿಯಿಂದ ಅಜಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನೆ ನಡೆಸಲಾಗುತ್ತದೆ. ಹೋಟೆಲ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಈವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿಲ್ಲ.
ಸಾರಿಗೆ ಬಂದ್ ಬಗ್ಗೆ ಸಂಜೆ ತೀರ್ಮಾನವಾಗಲಿದೆ. ನಾಳೆ ಬಿಎಸ್ ಎನ್ ಎಲ್ ಕಚೇರಿ ,ಬ್ಯಾಂಕ್, ಎಲ್ ಐಸಿ ಕಚೇರಿಗಳು ಸಂಪೂರ್ಣ ಬಂದ್ ಮಾಡಲಾಗುತ್ತದೆ. ಪ್ರತಿಭಟನೆಯಲ್ಲಿ ಅಶಾ ಕಾರ್ಯಕರ್ತೆಯರು ಭಾಗಿ ಹಿನ್ನೆಲೆ ಜಿಲ್ಲೆಯಲ್ಲಿ ಅಂಗನವಾಡಿಗಳು ಕೂಡ ಬಂದ್ ಮಾಡಲಾಗುವುದು.
ಹಾಸನ :
ಹಾಸನದಲ್ಲಿ ಸಿಐಟಿಯು, ಡಿವೈಎಫ್ ಐ, ಕಾರ್ಮಿಕ ಸಂಘಟನೆಗಳು, ರೈತ ಸಂಘ, ದಲಿತ ಸಂಘಟನೆ ಸೇರಿ ಹತ್ತಕ್ಕೂ ಹೆಚ್ಚು ವಿವಿಧ ಸಂಘಟನೆಗಳಿಂದ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ನಾಳೆ ಸಾರಿಗೆ ಸಂಪರ್ಕ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದ್ದು, ಪೌರತ್ವದ ಜೊತೆಗೆ ಕೇಂದ್ರದ ಆರ್ಥಿಕ ನೀತಿ ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಬಂದ್ ಗೆ ಕಾರ್ಮಿಕ ಸಂಘಟನೆಗಳ ಬೆಂಬಲ ಸೂಚಿಸಿವೆ.
ರಾಯಚೂರು :
ಕೇಂದ್ರದ ಕಾರ್ಮಿಕ ನೀತಿ ವಿರೋಧಿ ನೀತಿ ವಿರೋದಿಸಿ ನಾಳೆ ಭಾರತ್ ಹಿನ್ನೆಲೆ ರಾಯಚೂರಿಗೂ ಭಾರತ್ ಬಂದ್ ಬಿಸಿ ತಟ್ಟಲಿದೆ. ಬೆಳಗ್ಗೆಯಿಂದಲೇ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಲಾಗುತ್ತದೆ. ಮದ್ಯಾಹ್ನದವರೆಗೂ ಬಸ್ ಸಂಚಾರ ಬಹುತೇಕ ಸ್ಥಗಿತ ಸಾದ್ಯತೆ ಇದೆ.
ಕೆಲಸದಿಂದ ದೂರ ಉಳಿದು ಮುಷ್ಕರ ನಡೆಸಲಿರುವ ಕಾರ್ಮಿಕ ಸಂಘಟನೆಗಳು, ಕೇಂದ್ರ ಸರ್ಕಾರ ಕಾರ್ಮಿಕ ವರ್ಗವನ್ನು ಕಡೆಗಣಿಸಲಾಗ್ತಿದೆ ಎಂಬ ಆರೋಪ ಮಾಡಿವೆ.AITUC, CITU, ಪೌರ ಕಾರ್ಮಿಕರು, ಹಮಾಲರು, ಬ್ಯಾಂಕ್ ಸಿಬ್ಬಂದಿ, ಎಲ್.ಐ.ಸಿ ಪ್ರತಿನಿಧಿಗಳು, ಕಟ್ಟಡ, ಕೂಲಿ ಕಾರರು ಹಾಗೂ ಕೆಎಸ್ ಆರ್ ಟಿಸಿ ಚಾಲಕ ಮತ್ತು ನಿರ್ವಾಹಕರ ಸಂಘಟನೆಗಳು ಸೇರಿದಂತೆ ಪ್ರಗತಿಪರ ಹಾಗೂ ಎಡಪಂಥೀಯ ಸಂಘಟನೆಗಳ ಬೆಂಬಲ ಸೂಚಿಸಿವೆ.
ಬೆಳಗ್ಗೆ 6ರಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಲಿರುವ ವಿವಿಧ ಕಾರ್ಮಿಕ ಸಂಘಟನೆ ಸದಸ್ಯರು, ಬೆಳಗ್ಗೆ 10-30ರ ನಂತರ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಬಂದ್ ಹಿನ್ನೆಲೆ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಸಾದ್ಯತೆ ಇದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದ ಪ್ರಮುಖ ಸರ್ಕಲ್ ಗಳಲ್ಲಿ ಪೋಲಿಸ್ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.
ಮಂಡ್ಯ :
ನಾಳೆ ಭಾರತ್ ಬಂದ್ ಹಿನ್ನೆಲೆ ಮಂಡ್ಯ ಜಿಲ್ಲೆಯ ಹಲವು ಕಾರ್ಮಿಕ ಸಂಘಟನೆಗಳಿಂದ ಮುಷ್ಕರಕ್ಕೆ ಬೆಂಬಲ ಸೂಚಿಸಲಾಗಿದೆ. ಕಾರ್ಮಿಕ ಸಂಘಟನೆ ಗಳ ಹಲವು ಬೇಡಿಕೆಗಳ ಒತ್ತಾಯಕ್ಕೆ ನಡೆಸ್ತಿರೋ ಮುಷ್ಕರಕ್ಕೆ, ಕಾರ್ಮಿಕ ಸಂಘಟನೆಗಳ ಜೊತೆ ವಿವಿಧ ಪ್ರಗತಿಪರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಪರಿಸ್ಥಿತಿ ನೋಡಿಕೊಂಡು ಶಾಲೆ ಕಾಲ ಕಾಲೇಜಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ. ರಸ್ತೆಯಲ್ಲಿ ವಾಹನ ಸಂಚಾರ,ಹೋಟೇಲ್ ಉದ್ಯಮ, ಸಿನಿಮಾ ಮಂದಿರ ಎಂದಿನಂತೆ ಇರಲಿದೆ.
ಮೈಸೂರು :
8ರಂದು ಭಾರತ್ ಬಂದ್ ಹಿನ್ನೆಲೆ ಮೈಸೂರಿನಲ್ಲಿ ಬಂದ್‌ಗೆ ಬೆಂಬಲ ಸೂಚಿಸಿ ಕಾರ್ಮಿಕ ಸಂಘಟನೆ. ಆಟೋ, ಟ್ಯಾಕ್ಸಿ ,ಲಾರಿ ಮಾಲೀಕರ ಸಂಘದಿಂದ ಬೆಂಬಲದ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ರಾಜ್ಯ ಸಂಘಗಳ ನಿರ್ಧಾರದ ನಂತರ ತೀರ್ಮಾನ ಮಾಡಲಾಗುತ್ತದೆ. ಸರ್ಕಾರಿ ಸಾರಿಗೆ ವ್ಯವಸ್ಥೆ, ಶಾಲಾ ಕಾಲೇಜುಗಳಿಗೆ ಪರಿಸ್ಥಿತಿ ನೋಡಿಕೊಂಡಿ ನಾಳೆ ಬೆಳಗ್ಗೆ ನಿರ್ಧಾರವಾಗಲಿದೆ.ಬ್ಯಾಂಕ್ ನೌಕರರ ಸಂಘಟನೆಗಳಿಂದಲೂ ಬೆಂಬಲ ಸಾಧ್ಯತೆ ಇದೆ. ಹೋಟೆಲ್ ಮಾಲೀಕರ ಸಂಘದಿಂದ ಬಾಹ್ಯಬೆಂಬಲ ಮಾತ್ರ ಯಾವುದೇ ಹೋಟೆಲ್ ಮುಚ್ಚುವುದಿಲ್ಲ.
ಬಾಗಲಕೋಟೆ:
ನಾಳೆ ಭಾರತ ಬಂದ್ ಕರೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲೂ ಭಾರತ್ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತವಾಗಿದೆ. ಭಾರತ ಬಂದ್ ಗೆ ಸಿಐಟಿಯುಸಿ, ಎಐಟಿಯುಸಿ,ಕೆಎಸ್ ಆರ್ ಟಿಸಿ ಸ್ಟಾಪ್ ,ವರ್ಕರ್ ಯುನಿಯನ್, ದಲಿತ, ಅಲ್ಪಸಂಖ್ಯಾತರ ಸಹೋದರತ್ವ ಸಮಿತಿ,ಗ್ರಾಮ ಪಂಚಾಯಿತಿ ನೌಕರರ ಸಂಘ ಬೆಂಬಲವಿದೆ.ಎಂದಿನಂತೆ ಕೆಎಸ್ ಆರ್ ಟಿಸಿ ಬಸ್ ,ಅಟೋ,ಟ್ಯಾಕ್ಸಿ, ಹೊಟೇಲ್ ಸೇವೆ ಇದೆ.
ಶಾಲಾ ಕಾಲೇಜು ರಜೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜು ರಜೆ ಬಗ್ಗೆ ನಿರ್ಧಾರ ಮಾಡಲಾಗುವುದು. ಬಂದ್ ಹಿನ್ನೆಲೆ ಸೂಕ್ತ ಪೊಲೀಸ್ ಬಂದೋಬಸ್ತ್ ಗೆ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಪ್ರತಿಭಟನೆ,ಧರಣಿ ನಡೆಸಿ,ಮನವಿ ಸಲ್ಲಿಸಲಿರುವ ಸಂಘಟನೆಗಳು.
ವಿಜಯಪುರ :
ನಾಳೆ ಭಾರತ ಬಂದ್ ವಿಚಾರಕ್ಕೆ ನಾಳೆ ಕಾರ್ಮಿಕ ಸಂಘಟನೆಗಳಿಂದ ವಿಜಯಪುರದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು.ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಬೆ. 11 ಕ್ಕೆ ಪ್ರತಿಭಟನಾ ಮೆರವಣಿಗೆ ಆರಂಭ ಮಾಡಲಾಗುತ್ತದೆ.
ವಿಜಯಪುರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಎಐಟಿಯುಸಿ,ಸಿಐಟಿಯು, ಯುಟಿಯುಸಿ, ಬ್ಯಾಂಕ್ ನೌಕರರು, ಎಲ್ಐಸಿ ನೌಕರರು, ಎಸ್ಐಎಫ್ಟಿ, ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ ವರ್ಕರ್ಸ್, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ನೌಕರರು, ಹಮಾಲಿ ಮತ್ತು ಕಟ್ಟಡ ಹಾಗೂ ಮನೆಗೆಲಸ ಕಾರ್ಮಿಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.
ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಬಸ್ಸು ಸಂಚಾರ ಸ್ಥಗೀತದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಬ್ಯಾಂಕುಗಳು ಬಂದ್ ಸಾಧ್ಯತೆ ಹೆಚ್ಚಿದೆ.

