“ನ್ಯೂಸ್ ಚಾನೆಲ್ಸ್ ನಮ್ಮ ಭಯವನ್ನು TRP ಆಗಿ ಕನ್ವರ್ಟ್ ಮಾಡಿಕೊಳ್ಳುತ್ತಿವೆ”

ಎಲ್ಲೆಡೆ ಕೊರೊನಾ ಭೀತಿ ಹೆಚ್ಚಾಗುತ್ತಿದ್ದರೆ ಇಲ್ಲೊಬ್ಬ ಮೆಡಿಕಲ್ ವಿದ್ಯಾರ್ಥಿ ಕೊರೊನಾ ಬಗ್ಗೆ ಕೆಲವು ಸಂಗತಿಗಳನ್ನು ಹೇಳಿ ವಾಟ್ಸಪ್ ಮೂಲಕ ವಿಡಿಯೋ ಹರಿಬಿಟ್ಟಿದ್ದಾನೆ. ಇದು ಸದ್ಯ ಭಾರೀ ವೈರಲ್ ಆಗಿದ್ದು, ಜನ ಯಾವುದು ಸತ್ಯ..? ಯಾವುದು ಸುಳ್ಳು? ಎನ್ನುವ ಗೊಂದಲಕ್ಕೆ ಬಿದ್ದಿದ್ದಾರೆ.

ಎಲ್ಲರಿಗೂ ನಮಸ್ಕಾರ,

ಈ ನ್ಯೂಸ್ ಚಾನೆಲ್ಸ್ ನಮ್ಮ ಭಯವನ್ನು ಟಿ. ಆರ್.ಪಿ. ಆಗಿ ಕನ್ವರ್ಟ್ ಮಾಡಿಕೊಳ್ಳುತ್ತಿವೆ. ಕೆರೊನಾ ಎಷ್ಟು ಜನರನ್ನು ಬಲಿಪಡೆದುಕೊಳ್ಳುತ್ತದೆ. ಕೊರೊನಾ ಬಂದವರೆಲ್ಲಾ ಸಾಯುವುದಿಲ್ಲ. ಯಾರೂ ಕೂಡ ಭಯ ಪಡುವ ಅಗತ್ಯತೆ ಇಲ್ಲ. ಎಲ್ಲರೂ ಕೂಡ ಮಾಸ್ಕ್ ಹಾಕುವ ಅವಶ್ಯಕತೆಯೂ ಇಲ್ಲ. ಎಲ್ಲಾ ಜನರಿಗೂ ಅಪಾಯ ಇಲ್ಲ. ಇಂತಿಲ್ಲಾ ವಿಚಾರಗಳನ್ನು ಅಂಕಿ-ಅಂಶಗಳ ಮೂಲಕ ಮೆಡಿಕಲ್ ವಿದ್ಯಾರ್ಥಿ ಹೇಳಿದ್ದಾನೆ.

ಇಲ್ಲಿ, ಶಿವಪ್ರಸಾದ್ ಎನ್ನುವ ಒಬ್ಬ ವೈದ್ಯಕೀಯ ವಿದ್ಯಾರ್ಥಿ, ಕೊರೋನ ಬಗ್ಗೆಯ ಭಯವನ್ನು ಹೋಗಲಾಡಿಸಲು ಪ್ರಯತ್ನ ಪಟ್ಟಿದ್ದಾನೆ. ನ್ಯೂಸ್ ಚಾನೆಲ್ ಹೇಳದ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ೫ ನಿಮಿಷ ಸಮಯ ಕೊಟ್ಟು, ದಯವಿಟ್ಟು ಈ ವಿಡಿಯೋ ನೋಡಿ ಎಂದು ವಿನಂತಿ ಮಾಡಿಕೊಂಡಿದ್ದಾನೆ.

ಈ ವಿದ್ಯಾರ್ಥಿ ಹೇಳಿದ ಮಾತುಗಳು ಸತ್ಯವೋ ಅಥವ ಸುಳ್ಳೋ..? ಆದರೆ ಸದ್ಯದ ಪರಿಸ್ಥಿತಿಗೆ ಈ ವಿದ್ಯಾರ್ಥಿಯ ಮಾತುಗಳನ್ನ ನಾವೆಲ್ಲರೂ ಅವಲೋಕಿಸಿ ನೋಡಬೇಕಿದೆ. ಇಡೀ ದೇಶದಲ್ಲಿ ಈ ಹಿಂದೆ ಇಂಥಹ ವೈರಸ್ ಗಳು ಪತ್ತೆಯಾಗಿಲ್ಲವೇ..? ಪತ್ತೆಯಾಗಿದ್ದರೆ ಆ ವೈರಸ್ ಎಷ್ಟು ಜನರಿಗೆ ಹರಡಿತ್ತು..? ಎಷ್ಟು ಜನರ ಪ್ರಾಣ ತೆಗೆದುಕೊಂಡಿದೆ..? ಯಾವ ವಯಸ್ಸಿನವರು ವೈರಸ್ ಗೆ ಬಲಿಯಾಗಿದ್ದಾರೆ..? ಸರಾಸರಿ ಎಷ್ಟು? ಇದೆಲ್ಲವನ್ನ ವಿದ್ಯಾವಂತರಾದ ನಾವು ಪರಿಣಗನೆಗೆ ತೆಗೆದುಕೊಂಡರೆ ಯಾವ ವೈರಸ್ ಬಗ್ಗೆ ನಮಗೆಷ್ಟು ಭೀತಿ ಇರಬೇಕು ಎನ್ನುವುದು ಅರ್ಥವಾಗುತ್ತದೆ. ಆಗ ಯಾವ ಮಾಧ್ಯಮಗಳ ಅವಶ್ಯಕತೆಯೋ ನಮಗೆ ಇರುವುದಿಲ್ಲ.

ಎಲ್ಲವನ್ನೂ ನಾವು ಮಾದ್ಯಮದಿಂದಲೇ ತಿಳಿದುಕೊಳ್ಳಬೇಕು ಅಂತೇನು ಇಲ್ಲ. ಕೆಲವು ಬಾರಿ ಮಾದ್ಯಮಗಳು ಹೇಳುವುದು ಕೂಡ ಸುಳ್ಳಾಗಿರಬಹುದು. ಟಿ ಆರ್ ಪಿ ಗೋಸ್ಕರ್ ಕೊರೊನಾ ಬಗ್ಗೆ ಭಯ ಹುಟ್ಟಿಸುತ್ತಲೂ ಇರಬಹುದು. ಇದರ ಬಗ್ಗೆ ವಿದ್ಯಾವಂತರಾದ ನಾವುಗಳು ತಿಳಿದುಕೊಳ್ಳಬೇಕಾದರೆ ಎಲ್ಲಾ ಆಯಾಮಗಳಿಂದ ಪರಿಶೀಲನೆ ಮಾಡಬೇಕಿದೆ. ಈ ವಿದ್ಯಾರ್ಥಿ ಹೇಳಿದ್ದು ಕೂಡ ಅದನ್ನೇ.

24/7 ಮಾದ್ಯಮಗಳು ಹೇಳುವ ಮಾತನ್ನ ಕೇಳುವ ಬದಲಿಗೆ ಈ ವಿಡಿಯೋದಲ್ಲಿ ವಿದ್ಯಾರ್ಥಿ ಹೇಳಿದ ವಿಷಯಗಳ ಬಗ್ಗೆಯೂ ಕೊಂಚ ಪರಿಶೀಲನೆ ಮಾಡಿ ತಿಳಿದುಕೊಂಡರೆ ಭಯ ಪಡುವ ಅಗತ್ಯತೆ ಇರುವುದಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights