ಪಂಚಭೂತಗಳಲ್ಲಿ ಲೀನವಾದ ರಿಷಿ ಕಪೂರ್ : ಕಂಬನಿ ಮಿಡಿದ ಬಾಲಿವುಡ್!

ಬಾಲಿವುಡ್​ನ ರೊಮ್ಯಾಂಟಿಕ್​ ಹೀರೋ ರಿಷಿ ಕಪೂರ್ ಇಂದು ಬೆಳಿಗ್ಗೆ ಮುಂಬೈನಲ್ಲಿ 8-45ಕ್ಕೆ ಇಹಲೋಕ ತ್ಯಜಿಸಿದರು. 67 ವರ್ಷದ ನಟ ಪತ್ನಿ ನೀತು, ಮಗ ರಣಬೀರ್​ ಸಿಂಗ್​ ಹಾಗೂ ಮಗಳು ರಿಧಿಮಾರನ್ನು ಅಗಲಿದ್ದಾರೆ. ರಿಷಿ ಕಪೂರ್ ಅವರ ಅಂತ್ಯ ಸಂಸ್ಕಾರ ಮುಂಬೈನ ಚಂದನ್​ವಾಡಿಯಲ್ಲಿ ನಡೆಯಿತು.

ಮಗಳು ರಿಧಿಮಾ ಲಾಕ್​ಡೌನ್​ನಿಂದಾಗಿ ದೆಹಲಿಯಲ್ಲಿದ್ದರು. ಆದರೆ ವಿಷಯ ತಿಳಿಯುತ್ತಿದ್ದಂತೆಯೇ ಅವರಿಗೆ ಮುಂಬೈಗೆ ತೆರೆಳಲು ಪಾಸ್​ ನೀಡಲಾಯಿತು. ಪಾಸ್​ ಸಿಕ್ಕ ಕೂಡಲೇ ತಂದೆಯ ಅಂತಿಮ ದರ್ಶನಕ್ಕಾಗಿ ರಿಧಿಮಾ ಖಾಸಗಿ ಜೆಟ್​ನಲ್ಲಿ ಮುಂಬೈಗೆ ಬಂದರು. ಅದಕ್ಕೂ ಮುನ್ನ ತಂದೆಯ ಕುರಿತು ಈ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

https://www.instagram.com/riddhimakapoorsahniofficial/?utm_source=ig_embed

ಅಂತ್ಯ ಸಂಸ್ಕಾರದಲ್ಲಿ ಬಾಲಿವುಡ್ ನ ಖ್ಯಾತ ನಟ ನಟಿಯರು ಪಾಲ್ಗೊಂಡಿದ್ದರು. ಲಾಕ್​ಡೌನ್​ನಿಂದಾಗಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಕೇವಲ 20 ಮಂದಿಗೆ ಅನುಮತಿ ನೀಡಲಾಗಿತ್ತು. ಅಂತ್ಯ ಸಂಸ್ಕಾರದಲ್ಲಿ ನೀತು ,ಕರೀನಾ ತಾಯಿ , ತಂದೆ, ಅಲಿಯಾ ಭಟ್​ , ಅರ್ಹಾನ್​ ಜೈನ್​  ಸೇರಿದಂತೆ ಇತರರು ಭಾಗಿಯಾಗಿದ್ದರು.ಅರ್ಹಾನ್​ ಜೈನ್​ ಹಾಗೂ ಅಭಿಷೇಕ್​ ಬಚ್ಚನ್​ ಸಹ ರಿಷಿ ಕಪೂರ್​ ಅವರ ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ್ದರು.

 ಅರ್ಹಾನ್​ ಜೈನ್​ ಹಾಗೂ ಅಭಿಷೇಕ್​ ಬಚ್ಚನ್​ ಸಹ ರಿಷಿ ಕಪೂರ್​ ಅವರ ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ್ದರು.

 ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ರಣಬೀರ್​ ಕಪೂರ್​

 ಲಾಕ್​ಡೌನ್​ನಿಂದಾಗಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಕೇವಲ 20 ಮಂದಿಗೆ ಅನುಮತಿ ನೀಡಲಾಗಿತ್ತು. ಅಂತ್ಯ ಸಂಸ್ಕಾರದಲ್ಲಿ ನೀತು ,ಕರೀನಾ ತಾಯಿ , ತಂದೆ, ಅಲಿಯಾ ಭಟ್​ , ಅರ್ಹಾನ್​ ಜೈನ್​  ಸೇರಿದಂತೆ ಇತರರು ಭಾಗಿಯಾಗಿದ್ದರು.

ನಟನ ಅಗಲಿಕೆಯಿಂದ ಇಡೀ ಬಾಲಿವುಡ್ ಶೋಕದಲ್ಲಿ ಮುಳುಗಿದ್ದು, ಗಣ್ಯರು ಹಾಗೂ ಸೆಲೆಬ್ರಿಟಿಗಳು ನಟನ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights