ಪಂಜಾಬ್‌ನಲ್ಲಿ ರೈತರಿಗೆ ಜಿಲ್ಲಾವಾರು ಲಾಕ್‌ಡೌನ್‌ನಿಂದ ರಿಲೀಫ್‌

ರೈತರು ಬೆಳೆದ ಬೆಳೆಗಳನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ಒದಗಿಸುವ ಉದ್ದೇಶದಿಂದ ಕೊರೊನಾ ವೈರಸ್ ಲಾಕ್‌ಡೌನ್ ನಿರ್ಬಂಧಗಳಿಂದ ರೈತರಿಗೆ ತಾತ್ಕಾಲಿಕ ಪರಿಹಾರ ನೀಡಲು ಪಂಜಾಬ್ ಅವಕಾಶ ನೀಡುತ್ತದೆ ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ. ಪಂಜಾಬ್ ಸುಮಾರು 185 ಲಕ್ಷ ಟನ್‌ಗಳಷ್ಟು ಗೋಧಿ ಬೆಳೆ ಪೂರೈಕೆಯಾಗುವ ಬಗ್ಗೆ ನೀರಿಕ್ಷೆಯಿದೆ ಎಂದು ಅವರು ಹೇಳಿದರು.

“ನಾವು ಈಗ ಬೆಳೆ ಕಟಾವು ಮಾಡುವ ಕಾಲದಲ್ಲಿದ್ದೇವೆ. ಏಪ್ರಿಲ್ 14 ರವರೆಗೆ ಲಾಕ್ ಡೌನ್ ಇದೆ. ಹಾಗಾಗಿ ಏಪ್ರಿಲ್ 15 ರಿಂದ ಗೋಧಿ ಕೊಯ್ಲು ಪ್ರಾರಂಭವಾಗುತ್ತದೆ. ನಾವು ಬಂಪರ್ ಸುಗ್ಗಿಯನ್ನು ಪಡೆಯುತ್ತಿದ್ದೇವೆ.” ಹಾಗಾಗಿ ಬೆಳೆಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡಲು ಜಿಲ್ಲಾವಾರು ರೈತರಿಗೆ ಲಾಕ್‌ಡೌನ್‌ನಿಂದ ರಿಲೀಫ್‌ ನೀಡಲಾಗುವುದು ಎಂದು ಅಮರಿಂದರ್ ಸಿಂಗ್ ಹೇಳಿದರು.

ಕೇರಳದ ನಂತರ, ಹೆಚ್ಚು ಸಾಂಕ್ರಾಮಿಕ ವೈರಸ್ ಹರಡುವುದನ್ನು ತಡೆಗಟ್ಟಲು ಸಂಪೂರ್ಣ ಲಾಕ್‌ಡೌನ್‌ಗೆ ಹೋದ ಎರಡನೇ ರಾಜ್ಯ ಪಂಜಾಬ್. ಕೊರೊನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಣದಲ್ಲಿಡಲು ರಾಜ್ಯವು ಹೋರಾಡುತ್ತಿರುವುದರಿಂದ ಈ ಸಮಯದಲ್ಲಿ ಸಾಮಾಜಿಕ ಅಂತರವನ್ನು ಅನುಸರಿಸುವುದು ಅಷ್ಟೇ ಮುಖ್ಯ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

“ರಾಜ್ಯದಲ್ಲಿ 132 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ, 11 ಸಾವುಗಳು ಸಂಭವಿಸಿವೆ. ಇಲ್ಲಿಯವರೆಗೆ 2877 ಮಾದರಿಗಳನ್ನು ಸಂಗ್ರಹಿಸಿದ್ದೇವೆ”ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights