ಪ್ರಧಾನಿ ಮೋದಿ ಜೊತೆ ಚಂದ್ರಯಾನ-2 ನೌಕೆ ವೀಕ್ಷಿಸಲು ರಾಯಚೂರಿನ ವಿದ್ಯಾರ್ಥಿನಿ ಆಯ್ಕೆ

ಚಂದ್ರಯಾನ-2 ನೌಕೆ ಚಂದ್ರನ ಅಂಗಳದಲ್ಲಿ ಇಳಿಯುವುದನ್ನ ಪ್ರಧಾನಿ ಮೋದಿ ಜೊತೆ ವೀಕ್ಷಿಸಲು ರಾಯಚೂರಿನ ಸಿಂಧನೂರಿನ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ.

ಹೌದು… ಸೆಪ್ಟೆಂಬರ್ 7 ರಂದು ಬೆಂಗಳೂರಿನ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಕಚೇರಿಯಲ್ಲಿ ವೀಕ್ಷಿಸಲು ಸಿಂಧನೂರಿನ ಡಾಫಡಿಲ್ಸ್ ಕಾನ್ಸೆಪ್ಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ.ವೈಷ್ಣವಿ ಆಯ್ಕೆಯಾಗಿದ್ದಾಳೆ. ಆನ್ ಲೈನ್ ಮುಖಾಂತರ ಆಗಸ್ಟ್ 25 ರಂದು ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈಷ್ಣವಿ 20 ಪ್ರಶ್ನೆಗಳಿಗೆ 5 ನಿಮಿಷದಲ್ಲಿ ಉತ್ತರಿಸಿ ಪ್ರಧಾನಿ ಜೊತೆ ಚಂದ್ರಯಾನ 2 ಇಳಿಯುವುದನ್ನ ವೀಕ್ಷಿಸಲು ಆಯ್ಕೆಯಾಗಿದ್ದಾಳೆ.

20 ಪ್ರಶ್ನೆಗಳಿಗೆ 10 ನಿಮಿಷಗಳಲ್ಲಿ ಉತ್ತರಿಸಲು ಅವಕಾಶ ನೀಡಲಾಗಿತ್ತು ಆದ್ರೆ ವೈಷ್ಣವಿ 5 ನಿಮಿಷದಲ್ಲಿ ಉತ್ತರಿಸಿದ್ದಳು. ಪ್ರತೀ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳನ್ನ ಆಯ್ಕೆ ಮಾಡಲಾಗಿದ್ದು. ರಾಜ್ಯದ ಇಬ್ಬರು ವಿದ್ಯಾರ್ಥಿಗಳಲ್ಲಿ ಸಿಂಧನೂರಿನ ವೈಷ್ಣವಿ ಆಯ್ಕೆಯಾಗಿದ್ದಾಳೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights