ಪ್ರವಾಹ ಪೀಡಿತ ಗ್ರಾಮಕ್ಕೆ ಆ್ಯಂಬುಲೆನ್ಸ್ ಬಾರದೇ ಹೃದಯಾಘಾತದಿಂದ ವೃದ್ಧೆ ಸಾವು…!

ಪ್ರವಾಹ ಪೀಡಿತ ಗ್ರಾಮಕ್ಕೆ ಆ್ಯಂಬುಲೆನ್ಸ್ ಬಾರದೇ ಹೃದಯಾಘಾತದಿಂದ ವೃದ್ಧೆ ಸಾವನ್ನಪ್ಪಿರೋ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶೆಟ್ಟವ್ವ ಮಾದಾರ್ (೬೫) ಮೃತ ವೃದ್ಧೆಯಾಗಿದ್ದಾಳೆ. ಶೆಟ್ಟವ್ವಳಿಗೆ ಹೃದಯಾಘಾತವಾದಾಗ ಗ್ರಾಮಸ್ಥರು ೧೦೮ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದ್ರೆ ಸರಿಯಾದ ರಸ್ತೆ ಸಂಪರ್ಕವಿರದ ಕಾರಣ ಗ್ರಾಮಕ್ಕೆ ಆಂಬ್ಯುಲೆನ್ಸ್ ಬರಲಾಗಿಲ್ಲ. ಹೀಗಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊಕರದ ಕಾರಣ ಶೆಟ್ಟವ್ವ ಮೃತಪಟ್ಟಿದ್ದಾಳೆಂದು ಗ್ರಾಮಸ್ಥರು ಆರೋಪಿಸ್ತಿದ್ದಾರೆ.

ಇನ್ನು ಮೆಣಸಗಿ ಗ್ರಾಮವು ಗಣಿ ಮತ್ತು ಭೂವಿಜ್ಞಾನ ಇಲಾಖೆ‌ಸಚಿವ ಸಿ ಸಿ ಪಾಟೀಲ್ ಅವರ ಕ್ಷೇತ್ರ ನರಗುಂದ ವ್ಯಾಪ್ತಿಗೆ ಬರುತ್ತದೆ. ಈಗಾಗ್ಲೇ ಸಚಿವರೂ ಸಹ ಗ್ರಾಮದ ಪರಿಸ್ಥಿತಿ ವೀಕ್ಷಣೆ ಮಾಡಿ ಸಮಸ್ಯೆ ಸರಿಪಡಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ರೂ ಸಹ ಸಮಸ್ಯೆ ಸರಿ ಹೋಗಿಲ್ಲ. ಹೀಗಾಗಿ ಜಿಲ್ಲಾಡಳಿತದ ಮೇಲೆ ಸಚಿವರ ಹಿಡಿತ ಎಷ್ಟಿದೆ ಎಂದು ಗ್ರಾಮಸ್ಥರು ಪ್ರಶ್ನೆ ಮಾಡ್ತಿದ್ದಾರೆ.

ಗ್ರಾಮದ ಪರಿಸ್ಥಿತಿಯನ್ನು ಶೆಟ್ಟವ್ವಳ ಸುಡುತ್ತಿರೋ ಶವದ ಮುಂದೆಯೇ ನಿಂತು ಗ್ರಾಮಸ್ಥನೊಬ್ಬ ಅಳಲು ತೋಡಿಕೊಂಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ರೋಣ ಕೊಣ್ಣೂರು ರಸ್ತೆಯನ್ನೂ ಸಹ ತಡೆದು ಪ್ರತಿಭಟನೆ ಮಾಡಿದ್ದಾರ. ಅಲ್ದೆ ಸೂಕ್ತ ವ್ಯವಸ್ಥೆ ಕಲ್ಪಿಸದ ರಾಜಕೀಯ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights