ಪ್ರಾಣ ಬೆದರಿಕೆ ಇರುವುದಾಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ ಯುವ ಜೋಡಿ..

ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಯುವ ಜೋಡಿಯೊಂದು ತಮಗೆ ಪ್ರಾಣ ಬೆದರಿಕೆ ಇರುವುದಾಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಘಟನೆ ಹಾಸನಹಾಸನದಲ್ಲಿ ನಡೆದಿದೆ.

ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿ ವೈರಲ್‌ ವಿಡಿಯೋದಲ್ಲಿ ಮಾತನಾಡಿರುವ ಯುವತಿ, ತಾನು ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲ್ಲೂಕಿನ, ಕಲ್ಕೆರೆ ಗ್ರಾಮದವಳು ಎಂದು ತಿಳಿಸಿದ್ರೆ, ಯುವತಿಯನ್ನು ಮದುವೆಯಾಗಿರುವ ಹುಡುಗ ತನ್ನದು ಹೊಳೇನರಸೀಪುರ ತಾಲ್ಲೂಕಿನ, ಸಬ್ಬನಹಳ್ಳಿ ಗ್ರಾಮದವನು ಎಂದು ಹೇಳಿಕೊಂಡಿದ್ದಾನೆ.

ವಿಡಿಯೋದಲ್ಲಿ ಮಾತನಾಡಿರುವ ಯುವತಿ ನಮಗೆ ನಮ್ಮ ತಂದೆಯ ಮನೆಯಿಂದ ಜೀವ ಬೆದರಿಕೆ ಇದೆ. ನಾನು ಸ್ವಯಿಚ್ಚೆಯಿಂದಲೇ ಮದುವೆಯಾಗಿದ್ದು ಪ್ರೀತಿಸಿದ ಹುಡುಗನ ಜೊತೆ ಇರಲು ಇಷ್ಟ ಪಟ್ಟಿದ್ದೇನೆ. ಹೀಗಾಗಿ ಎಸ್‌ಪಿಯವರು ತಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights