ಬಜೆಟ್ ಆರಂಭದಲ್ಲೇ ಗದ್ದಲ : ಬಜೆಟ್ ಪುಸ್ತಕಕ್ಕಾಗಿ ಕಾಂಗ್ರೆಸ್ ಪಟ್ಟು…!
ರಾಜ್ಯದ ಸಿಎಂ ಯಡಿಯೂರಪ್ಪ 7 ನೇ ಬಾರಿ ಬಜೆಟ್ ಮಂಡನೆ ಮಾಡಲು ಆರಂಭಿಸಿದ್ದು, ಆರಂಭದಲ್ಲೇ ಗದ್ದಲ ಶುರುವಾಯಿತು.
ಹೌದು… ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬಜೆಟ್ ಪ್ರತಿ ನೀಡುವಂತೆ ಪಟ್ಟು ಹಿಡಿದರು. ಕಳೆದ ಬಾರಿ ಬಜೆಟ್ ಮಂಡನೆ ವೇಳೆ ಇದೇ ರೀತಿ ಪ್ರತಿ ನೀಡದೇ ಬಜೆಟ್ ಮಂಡನೆ ಮಾಡಲಾಗಿದೆ ಎನ್ನುವ ಆರೋಪವನ್ನ ಮಾಡಿದರು.
ಈ ವೇಳೆ ಮದ್ಯ ಪ್ರವೇಶಿಸಿದ ಸ್ವೀಕರ್ ” ಇದೇ ವಿಚಾರವನ್ನು ದೊಡ್ಡದು ಮಾಡುವುದು ಬೇಡ. ಪ್ರತಿಗಳನ್ನು ನೀಡುತ್ತಾರೆಂದು ಸಮಾಧಾನ ಮಾಡಿದರು”
ಪತ್ರಿ ನೀಡಲು ಉಡಿಯೂರಪ್ಪನವರು ಕೂಡ ಸೂಚಿಸಿದರು. ಈ ವೇಳೆ ಗದ್ದಲ ಕಡಿಮೆಯಾಗಿ. ಸಿಎಂ ತಮ್ಮ ಬಜೆಟ್ ಮುಂದುವರೆಸಿದರು.

