ಬಣ್ಣದ ದಿಂಬುಗಳಿಗೆ ಅದ್ಬುತ ಕಳೆ ತುಂಬಿದ ಹುಡುಗಿಯರು : ಡಿಫ್ರೆಂಟ್ ಸ್ಟೈಲ್ ಗೆ ನೆಟ್ಟಿಗರು ಫಿದಾ

ಮನೆಯಲ್ಲೇ ಲಾಕ್ ಡೌನ್ ಆದ ಕೆಲ ಮಂದಿಗೆ ಸೋಷಿಯಲ್ ಮೀಡಿಯದಲ್ಲಿ ಕೆಲ ಸವಾಲುಗಳನ್ನು ಸ್ವೀಕರಿಸುವುದೇ ಟೈಮ್ ಪಾಸ್. ಹೀಗಾಗಿ ಪ್ರತಿನಿತ್ಯ ಹೊಸದಾದ ಚಾಲೆಂಜ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹುಟ್ಟಿಕೊಳ್ಳುತ್ತವೆ. ಸದ್ಯ ಟ್ರೆಂಡ್ ಆಗಿರೋದು ಪಿಲ್ಲೋ ಚಾಲೆಂಜ್.

ಏನಪ್ಪ ಇದು ಪಿಲ್ಲೋ ಚಾಲೆಂಜ್ ಅನ್ಕೊಂಡ್ರಾ..? ಇದು ಕೇಳೋಕು ನೋಡೋಕು ಸಖತ್ತ ಥ್ರಿಲ್ ಕೋಡೋ ಚಾಲೆಂಜ್. ಇಲ್ಲಿವರೆಗೆ ‘ಬಿ ದ ರಿಯಲ್ ಮ್ಯಾನ್ ಚಾಲೆಂಜ್’, ‘ಡಾಲ್ಗೊನಾ ಕಾಫಿ ಚಾಲೆಂಜ್’, ‘ಹೋಂ ಗಾರ್ಡನ್ ಚ್ಯಾಲೆಂಜ್’ ಹೀಗೆ ಅನೇಕ ಚಾಲೆಂಜ್‍ಗಳಲ್ಲೇ ಇದು ವಿಭಿನ್ನವಾಗಿದ್ದು ಹಲವಾರು ಹುಡುಗಿಯರು ಈ ಚಾಲೆಂಜ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಮಾತ್ರವಲ್ಲ ಹುಡುಗರ ಕಣ್ಣೂ ಕೂಡ ತಂಪು ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದ ಸವಾಲುಗಳನ್ನು ಚಾಚು ತಪ್ಪದೆ ಪಾಲಿಸುವ ಹುಡುಗಿಯರು ಪಿಲ್ಲೂ ಚಾಲೆಂಜ್ ಕೂಡ ಡುಫ್ರೆಂಟಾಗಿ ಪಾಲಿಸಿದ್ದಾರೆ. ಅದೆ ಹೇಗೆ ಅನ್ನೋ ದೃಶ್ಯಗಳನ್ನು ನೋಡುವ ಮುನ್ನ ಪಿಲ್ಲೋ ಚಾಲೆಂಜ್ ಬಗ್ಗೆ ಕೊಂಚ ತಿಳಿದುಕೊಂಡುಬಿಡಿ.

ಕಲರ್ ಫುಲ್ ದಿಂಬುಗಳನ್ನೇ ಬಟ್ಟೆಯಂತೆ ಬರೀ ಮೈಗೆ ಅಡ್ಡವಿಟ್ಟುಕೊಂಡು, ಸೊಂಟಕ್ಕೆ ದಿಂಬಿಗೆ ಸೇರಿಸಿ ಒಂದು ಬೆಲ್ಟ್ ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹಂಚಿಕೊಳ್ಳುವುದಕ್ಕೇ ಪಿಲ್ಲೋ ಚಾಲೆಂಜ್ ಎನ್ನುತ್ತಾರೆ. ಮೊದ ಮೊದಲು ಈ ಚಾಲೆಂಜ್ ಅನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದರು, ಆದರೆ ಲಾಕ್‍ಡೌನ್ ಎಫೆಕ್ಟ್ ನಿಂದ ಮನೆಯಲ್ಲೇ ಕೂತು ಬೋರ್ ಆಗಿರುವ ಪುರುಷರೂ ಕೂಡ ಚಾಲೆಂಜ್ ಸ್ವೀಕರಿಸಿ ನಾವೂ ಯಾರಿಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ.

https://www.instagram.com/nehakakkar/?utm_source=ig_embed

ಈ ಪಿಲ್ಲೋ ಚಾಲೆಂಜ್ ಫೋಟೋವನ್ನು ಇನ್‍ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.ಬರೀ ಮೈಗೆ ಅಡ್ಡ ದಿಂಬು ಕಟ್ಟಿಕೊಂಡು ಅದಕ್ಕೆ ಸನ್ ಗ್ಲಾಸ್, ಪರ್ಸ್, ಹೈ ಹೀಲ್ಸ್ ಧರಿಸಿ, ನಾಯಿ ಮರಿ, ಬೆಕ್ಕು, ಗಿಡಗಳ ಜೊತೆ ಫೋಟೋ ತೆಗೆದು ಶೇರ್ ಮಾಡುತ್ತಿದ್ದಾರೆ. ಕೆಲವು ಪುರುಷರು ಕೂಡ ಮಹಿಳೆಯರಂತೆ ಪಿಲ್ಲೋ ಜೊತೆಗೆ ಸನ್ ಗ್ಲಾಸ್, ಪರ್ಸ್, ಹೈ ಹೀಲ್ಸ್ ಧರಿಸಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಫೋಟೋಗಳಿಗೆ ನೆಟ್ಟುಗರು ಲೈಕ್ಸ್, ಕಮೆಂಟ್‍ಗಳ ಸುರಿಮಳೆಯೇ ಸುರಿಸುತ್ತಿದ್ದಾರೆ.

ಒಟ್ಟಿನಲ್ಲಿ ಹೊಸ ಹೊಸ ಚಾಲೆಂಜ್ ಗಳು ನೆಟ್ಟಿಗರಿಗೆ ಸಖತ್ ಥ್ರಿಲ್ ಕೊಡ್ತಾಯಿರೋದು ಮಾತ್ರ ಸುಳ್ಳಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights