ಬೆಂಗಳೂರಿನಲ್ಲಿ ಮಳೆಯ ಅರ್ಭಟ : ನೀರಿಗೂ ಬಂತು ಕೊರೊನಾ ಕಂಟಕ
ಸಿಲಿಕಾನ್ ಸಿಟಿಯಲ್ಲಿ ಮಳೆ ಅವಾಂತರವೇ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಮಳೆಯ ಅರ್ಭಟ ಹೆಚ್ಚಾಗಿದೆ. ರಸ್ತೆಗಳಲ್ಲಿ, ಮನೆಗಳಿಗೆ ನೀರು ಹೊಕ್ಕಿವೆ. ಹಾಗಂತ ಮಳೆನೀರಿಗೆ ಇಳಿಬೇಡಿ. ಯಾಕೆಂದ್ರೆ ನೀರಿನಿಂದಲೂ ಕೊರೊನಾ ಹರಡುತ್ತದೆ ಎನ್ನುವ ಆತಂಕಕಾರಿ ಅಂಶವನ್ನು ನೂತನ ಸಂಶೋಧನೆಯೊಂದು ಹೇಳಿದೆ.
ಹೌದು… ನೆದರ್ ಲ್ಯಾಂಡ್ ನಲ್ಲಿ , ಬೇರೆ ಬೇರೆ ದೇಶದಲ್ಲಿ ನೀರಿನಲ್ಲಿ ಕೊರೊನಾ ಕಂಡುಬಂದಿದೆ. ಪರಿಸರವಾದಿ ಡಾ.ಎಲ್ಲಪ್ಪಾರೆಡ್ಡಿ ನೇತೃತ್ವದಲ್ಲಿ ಈ ಬಗ್ಗೆ ಅಧ್ಯಯನ ನಡೆದಿದ್ದು, ಮಲ, ಮೂತ್ರ ಮಿಶ್ರಿತ ತ್ಯಾಜ್ಯ ನೀರಿನಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ. ಮಳೆ ಬಂದಾಗ ಈ ಸಾಧ್ಯತೆ ಹೆಚ್ಚಾಗಿದೆ. ತ್ಯಾಜ್ಯ ನೀರು ಮಳೆ ನೀರಿನೊಂದಿಗೆ ಮಿಶ್ರಿತವಾಗುವುದರಿಂದ, ಮಳೆ ಅಧಿಕವಾದರೆ ತಗ್ಗು ಪ್ರದೇಶದಲ್ಲಿ-ರಸ್ತೆಗಳಲ್ಲಿ ನೀರು ಹರಿಯುವುದರಿಂದ ಅತೀ ಹೆಚ್ಚು ಜನರಿಗೆ ಸೋಂಕು ಹರಡುತ್ತದೆ ಎನ್ನಲಾಗುತ್ತಿದೆ. ಪಾದರಾಯನಪುರು, ಬಾಪೂಜಿ ನಗರದ ತ್ಯಾಜ್ಯದಲ್ಲಿ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ.
ಮಾತ್ರವಲ್ಲ ಇಂತಹ ತ್ಯಾಜ್ಯ ನೀರು ಮಳೆ ನೀರು ಸೇರಿ ನದಿಗೆ ಸೇರುತ್ತದೆ. ಈ ನೀರು ಎಲ್ಲಲ್ಲಿ ಹರಿಯುತ್ತದೆಯೋ ಅಲ್ಲೆಲ್ಲಾ ಸೋಂಕು ಹರಡುವ ಸಾಧ್ಯತೆ ಇದೆ. ಪ್ರಾಣಿ ಪಕ್ಷಿಗಳಿಗೂ ಸೋಂಕು ಹರಡಬಹುದು. ಹೀಗಾಗಿ ಸರ್ಕಾರ ಆಸ್ಪತ್ರೆಗಳಿಗೆ ಅಷ್ಟು ಆಧ್ಯತೆ ಕೊಡುತ್ತಾರೋ ಅಷ್ಟೇ ಪ್ರಾಣಿ, ಜಲಚರಗಳು, ನೀರು ಹಾಗೂ ಗಾಳಿಗೂ ಆಧ್ಯತೆ ಕೊಡಬೇಕಾಗುತ್ತದೆ ಎಂದು ಪರಿಸರವಾದಿ ಡಾ.ಎಲ್ಲಪ್ಪಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲವೆಡೆ ಸಂಸ್ಕರಣೆ ಮಾಡದೇ ನೀರು ಬಿಡುವುದರಿಂದ ಆಂತಕ ಹೆಚ್ಚಿದೆ. ಹೀಗಾಗಿ ನೀರು ಶುದ್ಧೀಕರಣ ಮಾಡಬೇಕು. 2ನಿಮಿಷ ವಾದರೂ ಕುದಿಸಿ ಕುಡಿಯುವುದರಿಂದ 80% ಸಮಸ್ಯೆಮುಕ್ತರಾಗಬಹುದು ಎಂದಿದ್ದಾರೆ.

