ಭಾರತಕ್ಕೆ ಬೇಕು ಬೃಹತ್ ಪ್ಯಾಕೇಜ್: ರಾಹುಲ್‌ಗಾಂಧಿ ವಿಡಿಯೋ ಸಂವಾದದಲ್ಲಿ ಅಭಿಜಿತ್ ಬ್ಯಾನರ್ಜಿ

ಭಾರತಕ್ಕೆ ದೊಡ್ಡ ಉದ್ದೀಪನ ಪ್ಯಾಕೇಜ್ ಅಗತ್ಯವಿದೆ ಮತ್ತು ಜನರ ಅಗತ್ಯಗಳನ್ನು ಪೂರೈಸುವುದುರ ಜೊತೆಗೆ ಬೇಡಿಕೆಯನ್ನು ಮರು ಹೆಚ್ಚಿಸಲು ಜನರಿಗೆ ಹಣವನ್ನು ನೀಡಬೇಕು ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರು ತಿಳಿಸಿದ್ದಾರೆ.

ಇಂದು, ಕರೋನವೈರಸ್ ಬಿಕ್ಕಟ್ಟಿನಂದಾದ ಆರ್ಥಿಕ ಕುಸಿತದ ಬಗ್ಗೆ ರಾಹುಲ್ ಗಾಂಧಿಯವರು ಅಭೀಜಿತ್ ಬ್ಯಾನರ್ಜಿಯವರೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಕಳೆದ ವಾರ ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಅವರೊಂದಿಗೆ ಪ್ರಾರಂಭವಾದ ರಾಹುಲ್‌ಗಾಂಧಿಯವರ ಚರ್ಚಾ ಸರಣಿಯ ಎರಡನೇ ಕಂತು ಇದು.

COVID-19 ಲಾಕ್‌ಡೌನ್‌ನಿಂದ ಹೊಡೆತ ತಿಂದಿರುವ ಅನೇಕ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಆಘಾತಕ್ಕೊಳಗಾಗಿ “ದಿವಾಳಿಯಾಗಬಹುದು.” ಇಲ್ಲವಾದರೆ, ಉದ್ಯೋಗ ನಷ್ಟವಾಗಿ ನಿರುದ್ಯೋಗದ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

“ನಮಗೆ ಉತ್ತೇಜನ ಪ್ಯಾಕೇಜ್ ಬೇಕು ಎಂದು ನಮ್ಮಲ್ಲಿ ಬಹಳಷ್ಟು ಜನರು ಹೇಳುತ್ತಿದ್ದಾರೆ.” ನಗದು ವರ್ಗಾವಣೆಯು ಬಡವರಲ್ಲಿಯೂ ಬಡವರಾಗಿರುವವರನ್ನು ಮೀರಿ ಹೋಗಬೇಕು ಎಂದು ಅಭಿಜಿತ್ ಬ್ಯಾನರ್ಜಿ ಸಂವಾದದಲ್ಲಿ ಹೇಳಿದ್ದಾರೆ.

“ಯುಎಸ್ ಏನು ಮಾಡುತ್ತಿದೆ, ಜಪಾನ್ ಮಾಡುತ್ತಿದೆ, ಯುರೋಪ್ ಮಾಡುತ್ತಿದೆ. ನಾವು ಸಾಕಷ್ಟು ದೊಡ್ಡ ಉದ್ದೀಪನ ಪ್ಯಾಕೇಜ್ ಅನ್ನು ನಿಜವಾಗಿಯೂ ನಿರ್ಧರಿಸಿಲ್ಲ. ನಾವು ಇನ್ನೂ ಜಿಡಿಪಿಯ 1% ಬಗ್ಗೆ ಮಾತನಾಡುತ್ತಿದ್ದೇವೆ. ಯುನೈಟೆಡ್ ಸ್ಟೇಟ್ಸ್ ಜಿಡಿಪಿಯ 10% ಗೆ ಹೋಗಿದೆ.”

ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಭಾರತವು ಜನರ ಕೈಯಲ್ಲಿ ಹೆಚ್ಚಿನ ಹಣವನ್ನು ಪಂಪ್ ಮಾಡಬೇಕು. ಇದಕ್ಕಾಗಿ ಯುಎಸ್‌ನಿಂದ ಸಲಹೆ, ಸೂಚನೆಗಳನ್ನು ತೆಗೆದುಕೊಳ್ಳಬೇಕು ಎಂದು ಡಾ. ಬ್ಯಾನರ್ಜಿ ಹೇಳಿದರು. ಆದರೆ ಲಾಕ್‌ಡೌನ್ ನಂತರದ ಭಾರತದ ಒಟ್ಟಾರೆ ಆರ್ಥಿಕ ಪುನರುಜ್ಜೀವನದ ಬಗ್ಗೆ ಆಶಾವಾದಿಯಾಗಿರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

“ಪ್ರತಿಯೊಬ್ಬರ ಕೈಯಲ್ಲಿ ಹಣವನ್ನು ಕೊಡಬೇಕು, ಇದರಿಂದ ಅವರು ಅಂಗಡಿಗಳಲ್ಲಿ ಖರೀದಿಸಬಹುದು ಅಥವಾ ಗ್ರಾಹಕ ಬೇಡಿಕೆಯ ಸರಕುಗಳನ್ನು ಖರೀದಿಸುತ್ತಾರೆ.” ಈ ಪ್ರಕ್ರಿಯೆಲ್ಲಿ ಫಲಾನುಭವಿಗಳು ಬಡ ಸಮುದಾಯಕ್ಕೆ ಸೇರಿರಬೇಕು. ಇದಕ್ಕೆ ಯಾವ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕೆಂದು ನಿರ್ಧರಿಸುವುದು ಮುಖ್ಯ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

“ಜನಸಂಖ್ಯೆಯ 60% ನಷ್ಟು ಭಾಗದ ಬಗೆಗೆ ನಾನು ಮಾತನಾಡುತ್ತಿದ್ದೇನೆ. ನಾವು ಅವರಿಗೆ ಸ್ವಲ್ಪ ಹಣವನ್ನು ನೀಡುತ್ತೇವೆ. ನನ್ನ ದೃಷ್ಟಿಯಲ್ಲಿ ಇದರಿಂದ ಕೆಟ್ಟದ್ದೇನೂ ಆಗುವುದಿಲ್ಲ” ಎಂದು ಅರ್ಥಶಾಸ್ತ್ರಜ್ಞ ಹೇಳಿದರು.

ಲಾಕ್‌ಡೌನ್‌ನಿಂದ ಹೊರಬರುವುದು ಮುಖ್ಯವಾದರೂ, ರೋಗದ ಹಾದಿಯ ಬಗ್ಗೆ ಜಾಗೃತರಾಗಿರಬೇಕು. ಬೇಗನೆ ಲಾಕ್‌ಡೌನ್‌ನಿಂದ ಹೊರಬರುವುದು ರೋಗದ ಮೇಲೆ ಅವಲಂಬಿತವಾಗಿರುತ್ತದೆ. ಬಹಳಷ್ಟು ಜನರು ಅನಾರೋಗ್ಯಕ್ಕೆ ಒಳಗಾದಾಗ ಲಾಕ್‌ಡೌನ್ ಅನ್ನು ಸಡಿಲಗೊಳಿಸಲು ಬಯಸುವುದಿಲ್ಲ. ರೋಗದ ಸಮಯದ ಹಾದಿಯ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಡಾ. ಬ್ಯಾನರ್ಜಿ ಹೇಳಿದರು.

ರಘುರಾಮ್ ರಾಜನ್ ಮತ್ತು ಅಮರ್ತ್ಯ ಸೇನ್ ಅವರ ಹೇಳಿಕೆಯ ತುಣುಕನ್ನು ಉಲ್ಲೇಖಿಸಿ ಮಾತನಾಡಿದ ಡಾ. ಬ್ಯಾನರ್ಜಿಯವರು “ದೇಶದಲ್ಲಿರುವ ಜನರು ತಾತ್ಕಾಲಿಕ ಪಡಿತರ ಚೀಟಿಗಳನ್ನು ಯಾರಾದರೂ ಬಯಸಿದಲ್ಲಿ ಅವರಿಗೆ ಪಡಿತರ ಚೀಟಿಯನ್ನು ನೀಡಬೇಕು. ಈಗ ನೀಡಿರುವ ತಾತ್ಕಾಲಿಕ ಪಡಿತರ ಚೀಟಿ ಮೂರು ತಿಂಗಳವರೆಗೆ ಇರುತ್ತದೆ. ಅಗತ್ಯವಿದ್ದರೆ ಇನ್ನೂ 3 ತಿಂಗಳವರೆಗೆ ವಿಸ್ತರಿಸಬಹುದು. ನಮ್ಮಲ್ಲಿ ಸಾಕಷ್ಟು ಸ್ಟಾಕ್‌ಗಳಿವೆ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು.

ಲಾಕ್‌ಡೌನ್‌ನಿಂದ ಆಶ್ರಯ ಮತ್ತು ಆಹಾರವಿಲ್ಲದೆ ಸಿಲುಕಿರುವ ಮತ್ತು ಮನೆಗೆ ತಲುಪಲು ಹತಾಶರಾಗಿರುವ ವಲಸಿಗರು ಹಾಗೂ ಉದ್ಯೋಗಗಳ ಬಿಕ್ಕಟ್ಟು ಮತ್ತು ವಿಕೇಂದ್ರೀಕೃತ ವ್ಯವಸ್ಥೆಯ ಅಗತ್ಯವನ್ನು ಚರ್ಚಿಸಿದರು. ವಲಸೆ ಕಾರ್ಮಿಕರ ಪ್ರಯಾಣವನ್ನು ಕೇಂದ್ರವು ನಿರ್ವಹಿಸಬೇಕಾಗಿತ್ತು ಎಂದು ತಿಳಿಸಿದರು.

ಮಾಜಿ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗವರ್ನರ್ ರಘುರಾಮ್ ರಾಜನ್ ಅವರೊಂದಿಗೆ ರಾಹುಲ್‌ ಗಾಂಧಿಯವರು ಮೊದಲ ವಿಡಿಯೋ ಸಂವಾದ ನಡೆಸಿದ್ದರು. ಕೊರೊನಾ ವೈರಸ್‌ನಿಂದಾಗಿರುವ ಲಾಕ್‌ಡೌನ್‌ನಿಂದ ಬಳಲುತ್ತಿರುವ ಬಡವರಿಗೆ ಸಹಾಯ ಮಾಡಲು 65,000 ಕೋಟಿ ರೂ. ಅಗತ್ಯವಿದೆ ಎಂದು ರಾಜನ್‌ ತಿಳಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights