ಭಾರತದ ಪ್ರಖ್ಯಾತ ಹಾಕಿ ಒಲಂಪಿಕ್ ಪಟು ಬಲ್ಬೀರ್ ಸಿಂಗ್ ಸೀನಿಯರ್ ನಿಧನ
ಭಾರತಕ್ಕೆ ಮೂರು ಬಾರಿ ಒಲಂಪಿಕ್ ಚಿನ್ನದ ಪದಕ ತಂದುಕೊಟ್ಟ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಪ್ರಖ್ಯಾತ ಆಟಗಾರ ಬಲ್ಬೀರ್ ಸಿಂಗ್ ಸೀನಿಯರ್ ನಿಧನರಾಗಿದ್ದಾರೆ. ಕಳೆದ ಎರಡು ವಾರಗಳಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬಲ್ಬೀರ್ ಸೋಮವಾರ ಕೊನೆಯುಸಿರೆಳೆದಿದ್ದಾರೆ.
95 ವರ್ಷದವರಾಗಿದ್ದ ಬಲ್ಬೀರ್ ಮಗಳು ಸುಸ್ಬೀರ್ ಮತ್ತು ಮೂವರು ಪುತ್ರರಾದ ಕನ್ವಲ್ ಬೀರ್, ಕರಣ್ ಬೀರ್ ಮತ್ತು ಗುರ್ಬೀರ್ ಅವರನ್ನು ಅಗಲಿದ್ದಾರೆ.
“ಇಂದು ಬೆಳಗ್ಗೆ ಸುಮಾರು 6:30ಕ್ಕೆ ಅವರು ನಿಧನರಾದರು” ಎಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಅಭಿಜಿತ್ ಸಿಂಗ್ ತಿಳಿಸಿದ್ದಾರೆ.
ಒಲಂಪಿಕ್ ಪುರುಷರ ಹಾಕಿ ಫೈನಲ್ ಪಂದ್ಯಯಲ್ಲಿ ಅತಿ ಹೆಚ್ಚಿ ಗೋಲುಗಳನ್ನು ಹೊಡೆದ ಬಲ್ಬೀರ್ ಅವರ ದಾಖಲೆಯನ್ನು ಇನ್ನೂ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.
ಬಲ್ಬೀರ್ ಅವರ ಸಾವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜ್ಜು ಮುಂತಾದವರು ಸಂತಾಪ ಸೂಚಿಸಿದ್ದಾರೆ.
Anguished by the demise of one of India’s greatest Olympians, Balbir Singh ji Senior.
His skill sets as a Hockey player were legendary and he was instrumental in scripting a success story for India in the history of the game.
My heartfelt condolences to his bereaved family.
— Rajnath Singh (@rajnathsingh) May 25, 2020
https://twitter.com/KirenRijiju/status/1264801191373889536?s=20

