ಭಾರತೀಯ ಚಿತ್ರರಂಗದಲ್ಲೇ ಇತಿಹಾಸ ಸೃಷ್ಟಿ : ನಾಯಿ ಪಾತ್ರಕ್ಕೆ ನಾಯಿಯಿಂದಲೇ ಡಬ್ಬಿಂಗ್..!

ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ನಾಯಿಯೊಂದು ಸಾಹಸ ಮೆರೆದು ಇತಿಹಾಸ ಸೃಷ್ಟಿಸಿದ ಚಿತ್ರ ‘ನಾನು ಮತ್ತು ಗುಂಡಾ’

ನಾನು ಮತ್ತು ಗುಂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರೋ ಸಿಂಬಾ ( ನಾಯಿ) ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಿ, ಇತಿಹಾಸ ಸೃಷ್ಟಿಸಿದೆ.

ಸಿಂಬಾ ಡಬ್ಬಿಂಗ್ ಮಾಡಿರೋ ದೃಶ್ಯಾವಳಿಯೊಂದನ್ನ ಚಿತ್ರತಂಡ ರಿಲೀಸ್ ಮಾಡಿದೆ. ಈ ವಿಡಿಯೋ ,ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇದೊಂದು ವಿಡಿಯೋ ನಾನು ಮತ್ತು ಗುಂಡ ಚಿತ್ರದ ಮೇಲಿನ ಕುತೂಹಲವನ್ನ ಹೆಚ್ಚಿಸ್ತಿದೆ. ಈ ಹಿಂದೆ ಸಿಂಬಾ ಡಬ್ಬಿಂಗ್ ಮಾಡೋ ಸಂದರ್ಭದಲ್ಲಿ ಸುದ್ದಿಯಾಗಿತ್ತು. ಇದೀಗ ನಾನು ಮತ್ತು ಗುಂಡ ಚಿತ್ರ ಇದೇ ತಿಂಗಳ 24ರಂದು ರಾಜ್ಯಾದಾದ್ಯಂತ ರಿಲೀಸ್ ಆಗ್ತಿದ್ದು, ಚಿತ್ರತಂಡ ಚಿತ್ರದ ಬಗೆಗಿನ ವಿಶೇಷ ವಿಚಾರಗಳನ್ನ ರಿವೀಲ್ ಮಾಡ್ತಿದೆ.

ಅಂದ್ಹಾಗೆ ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ರಘು ಹಾಸನ್ ನಿರ್ಮಾಣದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ. ಸಂಯುಕ್ತ ಹೊರನಾಡು , ಜಿಜಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರೋ ಈ ಚಿತ್ರವನ್ನ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶಿಸಿದ್ದಾರೆ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

ಈಗಾಗ್ಲೇ ಟೀಸರ್ಸ್ ಮತ್ತು ಲಿರಿಕಲ್ ವಿಡಿಯೋಗಳು ಸದ್ದು ಮಾಡಿದ್ದು, ಈ ವಾರ ಟ್ರೈಲರ್ ಲಾಂಚ್ ಮಾಡ್ತಿದೆ. ಅಂದ್ಹಾಗೇ ಸ್ಯಾಂಡಲ್ ವುಡ್ ಅಂಗಳದಲ್ಲಿ ವಿಶೇಷ ವಿಚಾರಗಳಿಂದ ಸುದ್ದಿಯಾಗ್ತಿರೋ ಈ ಸಿನಿಮಾ. ಪ್ರಾಣಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧವನ್ನ ಸಾರುವಂತಹ ಸಿನಿಮಾ ಇದಾಗಿದ್ದು, ಕನ್ನಡ ಸಿನಿಪ್ರಿಯರಲ್ಲಿ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights