ಕಾಬೂಲ್ ಏರ್ ಪೋರ್ಟ್ ತೊರೆದ ಅಮೇರಿಕ ಸೇನೆ : ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನ್ ಸಂಭ್ರಮ!
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಂದೋಬಸ್ತ್ ಮಾಡುತ್ತಿದ್ದ ಅಮೇರಿಕ ಸೇನೆ ನಿನ್ನೆ ತಡ ರಾತ್ರಿ ಕಾಲ್ಕಿತ್ತಿದೆ.
ಕಳೆದ ರಾತ್ರಿ ಯುಎಸ್ ಸೈನ್ಯ ಕಾಬೂಲ್ ವಿಮಾನ ನಿಲ್ದಾಣ ತೊರೆದಿದ್ದು ಮಂಗಳವಾರ ಮುಂಜಾನೆ ತಾಲಿಬಾನಿಗಳು ವಿಮಾನ ನಿಲ್ದಾಣದ ಮೇಲೆ ಹಿಡಿತ ಸಾಧಿಸಿದ್ದಾರೆ. ತಡ ರಾತ್ರಿ ಯುಎಸ್ ಸೇನೆ ಕಾಬೂಲ್ ನಿಲ್ದಾಣ ತೊರೆಯುತ್ತಿದ್ದಂತೆ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.
The last U.S. military plane left Kabul airport last night, and the Taliban fired guns outside the airport to celebrate and humiliate U.S. troops. pic.twitter.com/Bv7a3thtzQ
— Aube⭐︎⭐︎⭐︎⭐︎⭐︎ (@slhajbt) August 31, 2021
ಯುಎಸ್ ಕಾಬೂಲ್ ನಿಂದ ಹೊರ ನಡೆದ ಹಿನ್ನೆಲೆಯಲ್ಲಿ ತಾಲಿಬಾನ್ ಉಗ್ರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಯುೆಸ್ ವಿಮಾನಗಳು ರಾತ್ರಿ ಆಕಾಶದಲ್ಲಿ ಕಾಬೂಲ್ ನನ್ನು ತೊರೆಯುತ್ತಿರುವುದನ್ನು ನೋಡೋ ಉಗ್ರ ಪಡೆ ಹರ್ಷ ವ್ಯಕ್ತ ಪಡೆಸಿದ್ದಲ್ಲದೇ, ಬಂದೂಕುಗಳನ್ನು ಗಾಳಿಯಲ್ಲಿ ಗುಂಡು ಹಾರಿಸಿ, ಆಫಾನಿಸ್ತಾನದಲ್ಲಿ 20 ವರ್ಷಗಳ ಯುದ್ಧದ ನಂತರ ವಿಜಯವನ್ನು ಆಚರಿಸಿದ್ದಾರೆಂದು ಅಂತಾರಾಷ್ಟರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇನ್ನು, ಈ ಬಗ್ಗೆ ತಾಲಿಬಾನ್ ವಕ್ತಾರ ಖಾರಿ ಯೂಸುಫ್ ಪ್ರತಿಕ್ರಿಯಿಸಿದ್ದು, ಯುಎಸ್ ನ ಸೇನಾ ಪಡೆಗಳು ಕಾಬೂಲ್ ವಿಮಾನ ನಿಲ್ದಾಣವನ್ನು ತೊರೆದಿದೆ. ನಮ್ಮ ದೇಶವು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ” ಎಂದು ಹೇಳಿದ್ದಾರೆ.
ಆದಾಗ್ಯೂ, ಆಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರ ಪಡೆಗಳ ನೆರಳಿನಿಂದ ತಪ್ಪಿಸಿಕೊಳ್ಳಲು ಬಯಸಿದ ಸುಮಾರು ಅಂದಾಜು 100 ಜನರು ಅಮೆರಿಕನ್ನರು ಇನ್ನೂ ಆಫ್ಘಾನ್ ನಲ್ಲಿ ಸಿಲುಕಿಕೊಂಡಿದ್ದಾರೆಂದು ವರದಿಯಾಗಿವೆ.
ಯುನೈಟೆಡ್ ಸ್ಟೇಟ್ಸ್ ಸೋಮವಾರ ತಡರಾತ್ರಿ ಆಫ್ಘಾನಿಸ್ತಾನದಿಂದ ತನ್ನ ಸೇನಾ ಪಡೆಗಳನ್ನು ವಾಪಸ್ ಪಡೆದುಕೊಮಡಿತು, ಅಮೆರಿಕದ ಸುದೀರ್ಘ ಯುದ್ಧವನ್ನು ಕೊನೆಗೊಳಿಸಿತು ಮತ್ತು ಮಿಲಿಟರಿ ಇತಿಹಾಸದಲ್ಲಿ ಒಂದು ಅಧ್ಯಾಯಕ್ಕೆ ಪೂರ್ಣ ವಿರಾಮವಿಟ್ಟಿದೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿದ ಯುಎಸ್ ಸೆಂಟ್ರಲ್ ಕಮಾಂಡ್ ನ ಮುಖ್ಯಸ್ಥ ಜನರಲ್ ಫ್ರಾಂಕ್ ಮೆಕೆಂಜಿ, ಸೇನೆಯ ಕೊನೆಯ ವಿಮಾನಗಳು ಕಾಬೂಲ್ ವಿಮಾನ ನಿಲ್ದಾಣದಿಂದ ವಾಷಿಂಗ್ಟನ್ ಸಮಯ ಮಧ್ಯಾಹ್ನ 3:29ಕ್ಕೆ ಮೊದಲು ಹೊರಟಿತು ಎಂದು ಹೇಳಿದ್ದಾರೆ.

