ಮಳೆಯಿಂದ ಕಂಗೆಟ್ಟ ರೈತ ವರ್ಗಕ್ಕೆ ಮತ್ತೊಂದು ಶಾಕ್ : ಸಹಕಾರಿ ಬ್ಯಾಂಕ್ ನಿಂದ ನೋಟಿಸ್

ನೆರೆಯಿಂದ ಇಡೀ ಉತ್ತರ ಕರ್ನಾಟಕವೇ ಪ್ರವಾಹದಲ್ಲಿ ಮುಳುಗಿಹೋಗಿತ್ತು. ಮಳೆಯಿಂದ ಕಂಗೆಟ್ಟ ಜನರು ಸಾಕಪ್ಪ ಸಾಕು ಜೀವನಾ ಅಂದಿದ್ರು. ಸಧ್ಯ ಮಳೆ ನಿಂತು ಪ್ರವಾಹವು ಕಡಿಮೆ ಆಗಿದೆ. ಆದ್ರೆ ನೆರೆಯಿಂದ ಸಾವಿರಾರು ಕೋಟಿ ಆಸ್ತಿಪಾಸ್ತಿ
ಹಾನಿಯಾಗಿದೆ. ಆದ್ರೆ ಕಷ್ಟಪಟ್ಟು ಬೆಳೆದ ಬೆಳೆಗಳೆಲ್ಲ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಬೆಳೆ ಇಲ್ಲದೇ ಕಂಗೆಟ್ಟ ರೈತ ವರ್ಗಕ್ಕೆ ಈಗ ಮತ್ತೊಂದು ಶಾಕ್ ನೀಡಿದ್ದಾರೆ ಸಹಕಾರಿ ಬ್ಯಾಂಕ್ ನವರು. ಅರೇ ನೆರೆಗೂ ಬ್ಯಾಂಕ್ಗೂ ಏನು ಸಂಬಂಧ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

 

ಹೀಗೆ ಕೈಯಲ್ಲಿ ನೋಟಿಸ್ ಹಿಡಿ ನಿಂತಿರೊ ರೈತರು.. ಸಾಲ ತುಂಬ ಬೇಕು ಎಂದು ಸಹಕಾರಿ ಬ್ಯಾಂಕ್ ನಿಂದ ಬಂದ ನೋಟಿಸ್ ಗಳು… ನೆರೆಯಿಂದ ಹೊರ ಬರದ ರೈತರಿಗೆ ನೋಟಿಸ್ ನೀಡಿದ ಶಾಕ್… ಹೌದು ಇದು ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಗ್ರಾಮದಲ್ಲಿನ 80 ಕ್ಕೂ ಹೆಚ್ಚು ರೈತರಿಗೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನೋಟಿಸ್ ನೋಡಿದೆ. ಸದ್ಯ ರೈತ ವರ್ಗಕ್ಕೆ ಮಳೆರಾಯನ ಅವಾಂತರದಿಂದ ಆಗಿರೊ ನಷ್ಟ ಅಷ್ಟಿಷ್ಟಲ್ಲ. ಕೆಲವು ಸಲ ಮಳೆ ಬಾರದೇ ಬರದ ಛಾಯೇ ಆವರಿಸಿ ನಷ್ಟ ಅನುಭವಿಸುವ ರೈತರಿಗೆ ಈ ಬಾರಿ ಅತೀವೃಷ್ಟಿ ಅತೀ ಹೆಚ್ಚು ನಷ್ಟ ಮಾಡಿದೆ.

ಉತ್ತಮವಾದ ಫಸಲು ಬಂದ್ರೆ ಹೇಗೊ ಜೀವನ ಸಾಗಿಸಬೇಕೆಂದುಕೊಂಡ ರೈತಾಪಿ ವರ್ಗಕ್ಕೆ ಈ ವರ್ಷದ ಮಳೆರಾಯನ ರಭಸಕ್ಕೆ ಬಿತ್ತನೆ ಮಾಡಿರೊ ಬೆಳೆಗಳೆಲ್ಲ ಕೊಚ್ಚಿಹೋಗಿವೆ. ಪ್ರತಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ ರೈತರತಿಗೆ ಒಂದು ಹಿಡಿಯಷ್ಟು ಬೆಳೆದ ಬೆಳೆ ಕೈಸೇರಿಲ್ಲ. ಇದರ ಮಧ್ಯೆ ಈಗ ಸಹಕಾರಿ ಬ್ಯಾಂಕ್ ನಿಂದ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಒಂದು ವೇಳೆ ಸಾಲ ಮರುಪಾವತಿಮಾಡದೇ ಹೊದರೆ ಶೇ. 14.50 ರಷ್ಟು ಬಡ್ಡಿ ಕಟ್ಟ ಬೇಕಾಗುತ್ತದೆ. ನೆರೆಯಿಂದ ಬದುಕು ಬಿದಿಗೆ ಬಿದ್ದಿದೆ, ಇಂತ ಪರಿಸ್ಥಿತಿಯಲ್ಲಿ ಸಾಲದ ನೋಟಿಸ್ ನೀಡದ್ರೆ ಹೇಗೆ ಸಾಲ ತೀರಿಸಲು ಸಾದ್ಯ, ಪ್ರವಾಹದಿಂದ ನಮ್ಮ  ಬೆಳೆ ನಷ್ಟವಾಗಿದೆ. ನಮ್ಮ ಸಾಲ ಮನ್ನಾ ಮಾಡಿ ಎಂದು ರೈತರು ಮನವಿ ಮಾಡುತ್ತಿದ್ದಾರೆ.

ನೆರೆಯಿಂದ ಒಂದೆಡೆ ಮಳೆ ಸುರಿತಿದ್ರೆ ಮತ್ತೊಂದೆಡೆ ಮನೆಗಳು ಸೋರುತ್ತ ಗೋಡೆಗಳು ಬೀಳುತ್ತಿದ್ದವು. ಇನ್ನೊಂದೆಡೆ ನೋಡ ನೋಡುತ್ತಲೇ ಅದೇಷ್ಟೋ ಗ್ರಾಮಗಳಲ್ಲಿ ಪ್ರವಾಹದ ನೀರು ಉಕ್ಕಿ ಹರಿಯುತ್ತಿತ್ತು. ಇದರ ಮಧ್ಯೆ ಹಾಗೊ ಹಿಗೋ ಜೀವ ಉಳಿಸಿಕೊಂಡ ಜನರು ಬದುಕುಳಿದಿದ್ದಾರೆ. ಇಂತದ್ರಲ್ಲಿ ಸಾಲ ಸೋಲ ಮಾಡಿ ಬೆಳೆದ ಬೆಳೆಯು ಇಲ್ಲ ಬದುಕು ಸಾಗಿಸೊದು ಹೇಗೆ ಎಂಬ ಚಿಂತೆಯಲ್ಲಿದ್ದ ರೈತರಿಗೆ ಸಹಕಾರಿ ಬ್ಯಾಂಕ್ ನಿಂದ ಬಂದ ನೋಟಿಸ್ ಸಿಡಿಲು ಬಡಿದಂತಾಗಿದೆ. ಸರ್ಕಾರದ ಆದೇಶದ ಪ್ರಕಾರ ಒಂದು ವರ್ಷ ಸೂನ್ಯ ಬಡ್ಡಿ ದರದಲ್ಲಿ ಸಾಲ ನೀಡೊದು, ಒಂದು ವರ್ಷದಲ್ಲಿ ಸಾಲ ತೀರಿಸದೇ ಹೊದ್ರೆ ಶೇ 14.50 ರಷ್ಟು ಬಡ್ಡಿ ಕಟ್ಟಬೇಕು ಎಂಬ ಆದೇಶ ಇದೆ. ಆದ್ರೆ ನೆರೆಯಿಂದ ಬಿತ್ತನೆ ಮಾಡಿರೊ ಬೆಳೆಯಲ್ಲಿ ನಾಶವಾಗಿದ್ದು ಖರ್ಚು ಮಾಡಿರೊವಷ್ಟು ಸಹ ಫಸಲು ಬರದಂತಾಗಿದೆ. ನರೆಯಿಂದ ಮನೆ ಮಠ ಕಳೆದುಕೊಂಡ ನಮಗೆ ಸಾಲದ ನೋಟಿಸ್ ನೀಡಿದ್ರೆ ಹೇಗೆ…. ನಮ್ಮ ಸಾಲ ಮನ್ನಾ ಮಾಡಿ ಇಲ್ಲ ನಾವು ಆತ್ಮಹತ್ಯೆ ಒಂದೆ ದಾರಿ ಎಂದು ರೈತರು ತಮ್ಮ ನೋವನ್ನು ಹಂಚಿಕೊಂಡರು.

ಈ ವರ್ಷದ ಮುಂಗಾರಿನಲ್ಲಿ ವರುಣ ಮುನಿಸಿಕೊಂಡು ಭರದ ಛಾಯೇ ಆವರನಿತ್ತು, ತದನಂತರ ಏಕಾಏಕಿ ಮಳೆ ಆರಂಭವಾಗಿ ಇಡೀ ಉತ್ತರ ಕರ್ನಾಟಕವೇ ಪ್ರವಾಹದಲ್ಲಿ ಮುಳಗಿತ್ತು. ಪ್ರವಾಹ ದಿಂದ ಕಂಗೆಟ್ಟ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಏನೇ ಆಗಲಿ ಸರ್ಕಾರ ನೆರೆ ಪೀಡಿತ ಪ್ರದೇಶದ ರೈತರಿಗೆ ಸಹಕಾರಿ ಬ್ಯಾಂಕನಲ್ಲಿ ಪಡೆದ ಸಾಲದ ಮರುಪಾವತಿಗೆ ಕಾಲವಕಾಶ ಅಥವಾ ಸಾಲ ಮನ್ನಾ ಮಾಡಲು ಸರ್ಕಾರ ಚಿಂತನೆ ಮಾಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights