ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು

ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಹೊಸ ಜೀವನಕ್ಕೆ ಪ್ರೇಮಿಗಳು ಕಾಲಿಟ್ಟ ಘಟನೆ ಕೋಲಾರ ಜಿಲ್ಲೆಯ ಕೆಜಿಎಪ್ ತಾಲೂಕಿನ ಬೇತಮಂಗಲ ಹೋಬಳಿಯಲ್ಲಿ ನಡೆದಿದೆ.

ಪ್ರೇಮ ವಿವಾಹಕ್ಕೆ ಪೋಷಕರ ವಿರೋದ ಹಿನ್ನಲೆ ಸಾಂತ್ವಾನ ಕೇಂದ್ರದಲ್ಲೆ ಮದುವೆ ನೆರವೇರಿದೆ. ಮದುವೆ ಮಂಟಪವಾದ ಬೇತಮಂಗಲ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ  ಪ್ರವೀಣ್ ಕುಮಾರ್ 23, ಕವಿಯರಸಿ 20, ಹೊಸ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು.

ಯುವತಿ ಕ್ರಿಶ್ಚಿಯನ್ ಹಾಗು ಯುವಕ ಹಿಂದೂ ಹಿನ್ನಲೆ ಮದುವೆಗೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿರೋಧ ಹಿನ್ನಲೆ ಮದುವೆ ಮಾಡಿಸುವಂತೆ ಪ್ರೇಮಿಗಳು ಮಹಿಳಾ ಸಾಂತ್ವಾನ ಕೇಂದ್ರದ ಮೊರೆ ಹೋಗಿದ್ದರು. ಸಾಂತ್ವಾನ ಕೇಂದ್ರದ ಸಿಬ್ಬಂದಿಗಳು ಎರಡು ಕಡೆಯ ಪೋಷಕರನ್ನ ಮನವೊಲಿಸಿ ಮದುವೆ ಮಾಡಿಸಿದ್ದಾರೆ.  ಹಿಂದೂ ಸಂಪ್ರದಾಯದಂತೆ ಸಾಂತ್ವಾನ ಕೇಂದ್ರದಲ್ಲಿ ಎರಡು ಕಡೆ ಪೋಷಕರ ಸಮ್ಮುಖದಲ್ಲಿ ಸಿಬ್ಬಂದಿಗಳು ಮದುವೆ ಮಾಡಿಸಿ ಆಶೀರ್ವಾದ ಮಾಡಿ ಕಳಿಸಿದ್ದಾರೆ.

ಸಾಂತ್ವಾನ ಕೇಂದ್ರದ ಕಾರ್ಯದರ್ಶಿ ಗೋಪಾಲ್, ಹಾಗು ಸಮಾಲೋಚಕಿ ಪವಿತ್ರ ನೇತೃತ್ವದಲ್ಲಿ ಮದುವೆ ನಡೆದಿದೆ. ಮದುವೆ ನಂತರ ಎರಡು ಕಡೆಯವ್ರಿಗೂ ಊಟದ ವ್ಯವಸ್ಥೆ ಮಾಡಿಸ್ದ ಸಾಂತ್ವಾನ ಕೇಂದ್ರದ ಸಿಬ್ಬಂದಿಗಳು ಕಳೆದ ೨ ವರ್ಷದಿಂದ ಪರಸ್ವರ ಪ್ರೀತಿಸುತ್ತಿದ್ದ ಬೇತಮಂಗಲ ನಿವಾಸಿ ಪ್ರವೀಣ್ ಕುಮಾರ್, ಹಾಗು ಕೆಜಿಎಪ್ ನಗರ ನಿವಾಸಿ ಕವಿಯರಸಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights