ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಬಿಬಿಎಂಪಿ ಮಾರ್ಷಲ್‌ಗಳಿಗೆ ಅಧಿಕಾರ ನೀಡಿದ ಸರ್ಕಾರ…!

ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸುವ ಮತ್ತು ಉಲ್ಲಂಘಿಸುವವರಿಗೆ 200 ರೂ.ಗಳ ದಂಡವನ್ನು ವಿಧಿಸುವ ನಿಯಮಗಳನ್ನು ಜಾರಿಗೆ ತರಲು ಬಿಬಿಎಂಪಿ ಮಾರ್ಷಲ್‌ಗಳ ಅಧಿಕಾರವನ್ನು ರಾಜ್ಯ ಸರ್ಕಾರ ಪುನಃಸ್ಥಾಪಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಸ್ಕ್ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ 1000 ರೂ. ದಂಡವನ್ನು ನಿಗದಿಪಡಿಸಿದ ಮಾಡಿದ ನಿಯಮವನ್ನು ಜಾರಿಗೆ ತರಲು ಮಾರ್ಷಲ್‌ಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಆದಾಗ್ಯೂ, ಕೆಲ ದಿನಗಳ ನಂತರ ಬಂದ ರಾಜ್ಯ ಸರ್ಕಾರದ ಅಧಿಸೂಚನೆಯು ದಂಡವನ್ನು 200 ರೂ.ಗೆ ಇಳಿಸುವುದಲ್ಲದೆ, ಹೆಲಾತ್ ಇನ್ಸ್‌ಪೆಕ್ಟರ್‌ಗಳಿಗೆ ದಂಡ ವಿಧಿಸುವ ಅಧಿಕಾರ ನೀಡಿದೆ.

ಜೂನ್ 5 ರಂದು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಮರೆ ಮಾಚುತ್ತಿರುವ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿತ್ತು. ಜನರ ಚಲನೆಯನ್ನು ನಿರ್ಬಂಧಿಸಿದಾಗ  ಬಿಬಿಎಂಪಿ ಮಾರ್ಷಲ್‌ಗಳು ದಿನಕ್ಕೆ 197 ಜನರಿಗೆ 1,000 ರೂ. ದಂಡ ವಿಧಿಸಿದ್ದರು. ನಂತರದ ದಿನಗಳಲ್ಲಿ ಲಾಕ್‌ಡೌನ್ ಕ್ರಮಗಳನ್ನು ಸಡಿಲಗೊಳಿಸಲಾಯಿತು. ಹೆಚ್ಚಿನ ಜನರು ಹೊರಬರಲು ಅವಕಾಶ ಮಾಡಿಕೊಟ್ಟ ಬಳಿಕ ದಂಡ ವಿಧಿಸುವುದು ಜೊತೆಗೆ ಜನ ಮಾಸ್ಕ್ ಧರಿಸುವ ನಿಯಮ ಪಾಲನೆಯಾಗಲಿಲ್ಲ.

ಲಾಕ್ ಡೌನ್ ಸಡಿಲಗೊಂಡ ನಂತರ ದಿನಕ್ಕೆ 18 ಜನರಿಗೆ ಮಾತ್ರ ದಂಡ ವಿಧಿಸಲಾಯಿತು. ಹಿರಿಯ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ಜನರು ಮುಖವಾಡ ಧರಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿಬಿಎಂಪಿ ಆಯುಕ್ತರಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಜೊತೆಗೆ ಈ ವಿಷಯವನ್ನು ಕಳೆದ ವಾರ ರಾಜ್ಯ ಸರ್ಕಾರಕ್ಕೆ ತಿಳಿಸಲಾಯಿತು. ಸದ್ಯ ಈ ಮಾರ್ಷಲ್ಗಳು ಮತ್ತೆ ಕರ್ತವ್ಯಕ್ಕೆ ಬಂದಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಸೋಮವಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. “ಸರ್ಕಾರವು ಈ ಮೂಲಕ ಬಿಬಿಎಂಪಿಯ ಮಾರ್ಹಲ್ಗಳಿಗೆ ನಿಬಂಧನೆಗಳನ್ನು ಜಾರಿಗೊಳಿಸಲು ಅಧಿಕಾರ ನೀಡುತ್ತದೆ” ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights