ರಾಜ್ಯದಲ್ಲಿ ಒಂದೇ ದಿನಕ್ಕೆ 216 ಕೊರೊನಾ ಕೇಸ್ : 2000 ಗಡಿಯಂಚಿನಲ್ಲಿ ಸೋಂಕಿತರ ಸಂಖ್ಯೆ!

ರಾಜ್ಯದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದವರಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಕಂಡುಬರುತ್ತಿದ್ದು, ದಿನದಿಂದ ದಿನಕ್ಕೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿಂದು ಹೊಸದಾಗಿ 216 ಕೊರೊನಾ ಕೇಸ್ ದಾಖಲಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,959 ಕ್ಕೇರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ನೀಡಿದೆ.

ಹೌದು…. ದಿನ ಕಳೆದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದ ವರದಿಯಲ್ಲಿ 196 ಜನ ಸೋಂಕಿತರು ದಾಖಲಾಗಿದ್ದಾರೆ.  ಸಂಜೆ ವೇಳೆಗೆ ಈ ಸಂಖ್ಯೆ 216ಕ್ಕೇರಿಕೆಯಾಗಿದೆ.

ಇಂದು ದಾವಣಗೆರೆ 3, ರಾಯಚೂರು 40, ಮಂಡ್ಯ 28, ಕೋಲಾರ 2, ದಕ್ಷಿಣ ಕನ್ನಡ 3, ಚಿಕ್ಕಬಳ್ಳಾಪುರ 26, ಗದಗ 15, ಯಾದಗಿರಿ 72, ಬೆಂಗಳೂರು 4, ಧಾರವಾಡ, ಕಲಬುರಗಿ, ಬೆಳಗಾವಿ, ಉಡುಪಿ ತಲಾ ಒಂದು, ಉತ್ತರ ಕನ್ನಡ 2, ಹಾಸನ 4 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನಷ್ಟು ಸೋಂಕಿತರ ಜಿಲ್ಲವಾರು ಮಾಹಿತಿ ಲಭ್ಯವಾಗಬೇಕಿದೆ. ಸೋಂಕಿತರ ಸಂಖ್ಯೆಯಲ್ಲಿ ಇಂದು ಯಾದಗಿರಿ ಹಾಗೂ ರಾಯಚೂರು ಮುಂಚುಣಿಯಲ್ಲಿದ್ದು ಮಹಾರಾಷ್ಟ್ರ ಕಂಟಕ ಶುರುವಾಗಿದೆ. ಇಂದು ರಾಜ್ಯದಲ್ಲಿ 30 ಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಹೊಸದಾಗಿ 216 ಮಂದಿಗೆ ಸೋಂಕು ದೃಢಪಟ್ಟಿದ್ದು, ಇವರಲ್ಲಿ 173 ಜನರಿಗೆ ಮಹಾರಾಷ್ಟ್ರ ಲಿಂಕ್ ಇದೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,959 ಕ್ಕೆ ಏರಿಕೆಯಾಗಿದೆ. ಇವರಲ್ಲಿ 42 ಜನ ಬಲಿಯಾಗಿದ್ದರೆ, 608 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ 13 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ವಾರದಿಂದ ರಾಜ್ಯದಲ್ಲಿ ಮುಂಬೈ, ಮಹಾರಾಷ್ಟ್ರ, ತಮಿಳುನಾಡು, ರಾಯಘಡ, ತೆಲಂಗಾಣ, ರಾಯಘಡ, ಥಾಣೆ, ಜಾರ್ಖಂಡ್, ಅಜ್ಮೀರ್ ನಿಂದ ಆಗಮಿಸಿದ್ದವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights