ನಿಗೂಢ ಕಾಯಿಲೆ : ಅಧಿಕಾರಿಗಳ ನಿರ್ಲಕ್ಷ್ಯವೇ ಆಂಧ್ರದ ಎಲೂರಿನ ಜನರ ಪಾಲಿಗೆ ಮುಳುವಾಯ್ತಾ..?

ಆರೋಗ್ಯವೇ ಭಾಗ್ಯ ಅನ್ನೋ ಮಾತು ಅಕ್ಷರಶ: ಆಂಧ್ರದ ಎಲೂರಿನ ಜನರ ಪಾಲಿಗೆ ಸುಳ್ಳಾಗಿ ಹೋಗಿದೆ. ರಾತ್ರೋ ರಾತ್ರೋ ಜನ ಏನಾಗುತ್ತಿದೆ ಎನ್ನುವುದರ ಪರಿವಿಲ್ಲದೇ ಆಸ್ಪತ್ರೆ ಸೇರಿದ್ದಾರೆ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ ಎಂದು ದೂರಲಾಗುತ್ತಿದೆ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯ ಜಿಲ್ಲಾ ಕೇಂದ್ರವಾದ ಎಲೂರಿನಲ್ಲಿ ಸಂಭವಿಸಿರುವ ನಿಗೂಢ ಕಾಯಿಲೆಯಿಂದ ಒಂದು ಸಾವು ಮತ್ತು 476 ಮಂದಿ ಅಸ್ವಸ್ಥತೆಗೆ ಕಾರ್ಪೋರೇಷನ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಕಸದ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗದೇ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಜಿಲ್ಲೆಯಲ್ಲಿನ ತೆರೆದ ಚರಂಡಿ, ಮೋರಿ ಮತ್ತು ಹಂದಿಗಳ ಕಾಟದಿಂದಾಗಿ ಇಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಸೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಸೊಳ್ಳೆಗಳ ಹೆಚ್ಚಳದಿಂದ ಡೆಂಗ್ಯೂ, ಮಲೇರಿಯಾದಂತಹ ಡಜನ್ ಪ್ರಕರಣಗಳು ವರದಿಯಾಗಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲೂರಿನ ದಕ್ಷಿಣ ವೀಧಿ, ಪದಮಾತಾ ವೀಧಿ, ಕೊಬ್ಬಾರಿ ಥೋಟಾ, ಮಹೇಶ್ವರಿ ಕಾಲೋನಿ, ಗಾಂಧಿ ಕಾಲೋನಿ, ತಂಗೇಲ್ಲಮುಡಿ ಮತ್ತು ಕೊಠಪೇಟೆ ಮುಂತಾದ ಸ್ಥಳಗಳಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರು ತೆರಳಿ ಮಾಹಿತಿ  ಸಂಗ್ರಹಿಸಿದ್ದಾರೆ. ಈ ವೇಳೆ ಹಲವು ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದು ಜಿಲ್ಲೆಯಲ್ಲಿನ ನೈರ್ಮಲ್ಯ ನಿರ್ವಹಣೆಯಲ್ಲಿನ ದೋಷವೇ ನಿಗೂಢ ಅಸ್ವಸ್ಥತೆಗೆ ಕಾರಣ ಎಂದು ಆರೋಪಿಸಿದ್ದಾರೆ.

ಹಂದಿ ಸಾಕುವವರು ಹೋಟೆಲ್‌ಗಳು, ರಸ್ತೆಬದಿಯ ತಿನಿಸುಗಳು ಮತ್ತು ಮಾಂಸದ  ಅಂಗಡಿಗಳಿಂದ ಬರುವ ತ್ಯಾಜ್ಯವನ್ನು ಎಸೆಯುತ್ತಿದ್ದು ಈ ಆಹಾರವನ್ನು ತಿನ್ನಲು ಹಂದಿಗಳು ಬಿಡುತ್ತಿದ್ದಾರೆ. ಕಸ, ಸೊಳ್ಳೆ ಹಾಗೂ ಹಂದಿಗಳ ಸಾಕಾಣಿಕೆಯಿಂದ ಸ್ವಚ್ಚತೆ ಇಲ್ಲದಂತಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಸ್ವಸ್ಥರು ದೂರಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights