‘ಮೋದಿ, ಶಾ ಜೋಡಿ ವಿರೋಧ ಪಕ್ಷಗಳನ್ನು ಸೆದೆ ಬಡಿದು ಅಧಿಕಾರ ಮಾಡುತ್ತಿದೆ’ ಧ್ರುವನಾರಾಯಣ್ ಆಕ್ರೋಶ
ಡಿ.ಕೆ. ಶಿವಕುಮಾರ್ ವಿಚಾರಣೆ ಬಗ್ಗೆ ಡಿಸಿಎಂ ಗೋವಿಂದ ಕಾರಜೋಳ, ಅಶ್ವಥ ನಾರಾಯಣ್ ಹೇಳಿಕೆ ಖಂಡನೀಯ ಎಂದು ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಧ್ರುವನಾರಾಯಣ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಬಗ್ಗೆ ಮಾತಾಡಲು ಅಶ್ವಥ ನಾರಾಯಣ್ ಗೆ ಯಾವ ನೈತಿಕತೆ ಇದೆ? 17 ಶಾಸಕರನ್ನು ಸೆಳೆಯುವಲ್ಲಿ ಪಾತ್ರವಹಿಸಿದವರು ಅಶ್ವಥ ನಾರಾಯಣ್ ಹೀಗಾಗಿ ಅವರಿಗೆ ಡಿಸಿಎಂ ಸ್ಥಾನ ಸಿಕ್ಕಿದೆ. ಅಶ್ವಥ ನಾರಾಯಣ್ ಏನೂ ರಾಜ್ಯ ನಾಯಕರಲ್ಲ ಅವರಿಗೆ ಡಿಸಿಎಂ ಸ್ಥಾನ ಸಿಕ್ಕಿದು ಹೇಗೆ ಎಂಬುದು ಜನರಿಗೆ ಗೊತ್ತಿದೆ. ಅಶ್ವಥ ನಾರಾಯಣ್ ಹೇಳಿಕೆ ಬೇಜಾವಾಬ್ದಾರಿಯಿಂದ ಕೂಡಿದೆ.
ಕಾಂಗ್ರೆಸ್ ಅನ್ನು ರಕ್ಷಣೆ ಮಾಡುವ ನಾಯಕರನ್ನು ಸದೆ ಬಡಿಯುವ ಕೆಲಸವನ್ನು ಕೇಂದ್ರ ಸರಕಾರ ಮಾಡ್ತಿದೆ. ಗಣಿಗಾರಿಕೆ ಮಾಡಿ ಆ ಹಣವನ್ನು ರಿಯಲ್ ಎಸ್ಟೇಟ್ ಗೆ ಹಾಕಿ ಅಲ್ಲಿ ಲಾಭ ಮಾಡ್ತಿದ್ದಾರೆ. ಸಾ.ರಾ. ಮಹೇಶ್, ಎಸ್.ಎ. ರಾಮದಾಸ್ ಕೂಡ ಇದೇ ರೀತಿ ಮಾಡಿದ್ದು. ಈ ರೀತಿ ಹಲವರು ಹಣ ಸಂಪಾದನೆ ಮಾಡಿದ್ದಾರೆಂದು ಮೈಸೂರಿನಲ್ಲಿ ಮಾಜಿ ಸಂಸದ ಧೃವನಾರಾಯಣ್ ಹೇಳಿಕೆ ನೀಡಿದ್ದಾರೆ.
ಇನ್ನೂ ಮೋದಿ ಅಮಿತ್ ಶಾ ಜೋಡಿ ವಿರೋಧ ಪಕ್ಷಗಳನ್ನು ಸೆದೆ ಬಡಿದು ಅಧಿಕಾರ ಮಾಡುತ್ತಿದೆ. ಅಶ್ವಥ್ ನಾರಾಯಣ್ ಡಿಸಿಎಂ ಮಾಡಲು ಏನು ಅರ್ಹತೆ ಇದೆ?
ರಾಜ್ಯ ಬಿಜೆಪಿಯ ಎಲ್ಲಾ ನಾಯಕರನ್ನು ಹೈ ಕಮಾಂಡ್ ಹೆದರಿಸಿದೆ. ಯಾರಾದರೂ ಧ್ವನಿ ಎತ್ತಿದರೆ ರಾಜೀನಾಮೆ ಪಡೆಯುತ್ತಾರೆ. ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಸಿದ್ದರಾಮಯ್ಯ ದಿನೇಶ್ ಗುಂಡುರಾವ್ ಸಹಾ ಖಂಡಿಸಿದ್ದಾರೆ ಎಂದರು.
ಸರ್ಕಾರ ಬಂದಿರುವುದು ವಾಮ ಮಾರ್ಗದಿಂದ. ಕಾನೂನಾತ್ಮಕ ವಾಗಿ ಬಂದಿಲ್ಲ. ಹೀಗಾಗಿ ಯಾವ ಕ್ಷಣದಲ್ಲಿ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದು. ಮುಂದೆ ಯಾವ ಸಂದರ್ಭದಲ್ಲೂ ಮೈತ್ರಿ ಮಾಡಿಕೊಳ್ಳಬಾರದೆಂದು ನಿರ್ಧರಿಸಲಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತದ ಬಗ್ಗೆ ನಾವು ಮೌನವಾಗಿಲ್ಲ. ಲೋಕಸಭಾ ಚುನಾವಣೆಯ ಸೋಲಿನಿಂದ ನಮ್ಮ ನಾಯಕರು ಮೌನವಾಗಿದ್ದಾರೆ. ಮನ್‌ಮೋಹನ್ ಸಿಂಗ್ ಅವರನ್ನ ಸಾಮಾಜಿಕ ಜಾಲತಾಣದಲ್ಲಿ ಹೊಗಳುತ್ತಿದ್ದಾರೆ. ಅದೇಲ್ಲವನ್ನು ಬಳಸಿಕೊಂಡು ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

