ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿಯ ಚಿನ್ನದ ಪ್ರತಿಮೆಯನ್ನು ಸೌದಿ ಅರೇಬಿಯಾದಲ್ಲಿ ನಿರ್ಮಿಸಲಾಗಿದೆಯೇ?

ಮುಸ್ಲಿಂ ದೇಶವಾದ ಸೌದಿ ಅರೇಬಿಯಾದಲ್ಲಿ ಮೋದಿ ಅವರ ಚಿನ್ನದ ಪುತ್ಥಳಿಯನ್ನು ಮಾಡಿ, ಪ್ರತಿಷ್ಠಾಪಿಸಲಾಗಿದೆ. ಎಷ್ಟು ಶೇರ್‌ ಮಾಡಬೇಕು ಎಂದರೆ, ಕೆಲವರಿಗೆ ಉರಿ ಆಗುತ್ತಿರುವ ಅನುಭವವಾಗಬೇಕು’ ಎಂಬ ಬರಹವನ್ನೂ ಫೋಟೊದೊಂದಿಗೆ ಹಂಚಿಕೊಳ್ಳಲಾಗಿದೆ.

156 ಗ್ರಾಂ ಎಂದು ಬರೆದಿರುವ ಚಿಕ್ಕ ಬೋರ್ಡ್‌ ಇರುವ ಗಾಜಿನ ಪೆಟ್ಟಿಗೆ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪುತ್ಥಳಿ ಇರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಳ್ಳಲಾಗುತ್ತಿದೆ. ‘ಜನರು ಮೇಣದಿಂದ ಪುತ್ಥಳಿಗಳನ್ನು ಮಾಡುತ್ತಾರೆ. ಆದರೆ ಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆಯನ್ನು ಸೌದಿ ಅರೇಬಿಯಾದಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿತಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಪುತ್ಥಳಿಯನ್ನು ತಯಾರಿಸಿದವರು ಬಸಂತ್‌ ಬೋರಾ ಎನ್ನುವ ಚಿನ್ನದ ವ್ಯಾಪಾರಿ. ಇವರ ಮೂಲ ಊರು ರಾಜಸ್ಥಾನ ಎಂದು ‘ಭಾರತ್‌ 24’, ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಹಾಗೂ ‘ಎನ್‌ಡಿಟಿವಿ’ 2023ರ ಜನವರಿಯಲ್ಲಿ ವರದಿ, ಸಂದರ್ಶನಗಳನ್ನು ಪ್ರಕಟಿಸಿವೆ.

ಮೋದಿ ಅವರ ದೊಡ್ಡ ಅಭಿಮಾನಿಯಾದ ಇವರು, ಗುಜರಾತ್‌ ವಿಧಾನಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿಯು 156 ಸ್ಥಾನಗಳನ್ನು ಗೆದ್ದಿರುವ ಖುಷಿಯನ್ನು ಚಿನ್ನದ ಪುತ್ಥಳಿ ತಯಾರಿಸುವ ಮೂಲಕ ಹಂಚಿಕೊಂಡಿದ್ದಾರೆ. ಹಾಗಾಗಿ ಇದು ಗುಜಾರಾತ್ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೂರತ್‌ನ ಬಸಂತ್ ಬೋಹ್ರಾ ಎಂಬ ಆಭರಣ ವ್ಯಾಪಾರಿ 2023 ರ ಜನವರಿಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ವಿಜಯದ ಸ್ಮರಣಾರ್ಥ 18-ಕ್ಯಾರೆಟ್ ಚಿನ್ನದಲ್ಲಿ 156 ಗ್ರಾಂ ತೂಕದ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಜಿ20 ಶೃಂಗಸಭೆ ಮೋದಿ-ಬಿಡೇನ್ ಮಾತುಕತೆ ನಡೆದ ಸಭಾಂಗಣದಲ್ಲಿ ಮಹಾಭಾರತ ಚಿತ್ರವನ್ನು ಇರಿಸಲಾಗಿತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights