ಫ್ಯಾಕ್ಟ್‌ಚೆಕ್ : ಗ್ಯಾಸ್ ಸಿಲಿಂಡರ್‌ಗೆ ವಿಧಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಪಾಲು ಸಿಗುತ್ತದೆಯೇ?

ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗೆ ಸಂಬಂಧಿಸಿದಂತೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು, ಸಿಲಿಂಡರ್‌ಗೆ ಪಾವತಿಸುವ ಹಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಎಷ್ಟು ಮತ್ತು ಯಾವುದಕ್ಕೆ ಎಷ್ಟು ಹೋಗುತ್ತದೆ ಎಂಬ ವಿವರಣೆ ಇರುವ ಸಂದೇಶವೊಂದು ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.

ರಾಜ್ಯ ಸರ್ಕಾರ ಹೆಚ್ಚು ಪಾಲನ್ನು ಅನುಭವಿಸುತ್ತಿದೆ ಆದರೆ ಕೇಂದ್ರ ಸರ್ಕಾರ ಜನರಿಂದ ಟೀಕೆಗೆ ಒಳಗಾಗುತ್ತಿದೆ. ಗ್ಯಾಸ್‌ ಬೆಲೆ ಜಾಸ್ತಿ ಎಂದು ಮೋದಿ ಸರ್ಕಾರವನ್ನು ದೂಷಿಸುವ ಅತಿ ಬುದ್ದಿವಂತರು ಒಮ್ಮೆ ಪರಾಮರ್ಶಿಸಿ ಎಂಬ ಹೇಳಿಕೆಯೊಂದಿಗೆ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.

‘ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡುತ್ತಿದೆ ಎಂದು ಆರೋಪಿಸುತ್ತಿರುವವರು ಈ ಸಂಗತಿಯನ್ನು ಮರೆತಿದ್ದಾರೆ. ಎಲ್‌ಪಿಜಿ ಸಿಲಿಂಡರ್‌ ಮೇಲೆ ಕೇಂದ್ರ ಸರ್ಕಾರವು ಶೇ 5ರಷ್ಟು ತೆರಿಗೆಯನ್ನಷ್ಟೇ ವಿಧಿಸುತ್ತದೆ. ಆದರೆ, ರಾಜ್ಯ ಸರ್ಕಾರಗಳು ಶೇ 55ರಷ್ಟು ತೆರಿಗೆ ವಿಧಿಸುತ್ತಿದೆ. ಇದರಿಂದಲೇ ಎಲ್‌ಪಿಜಿ ಬೆಲೆ ವಿಪರೀತ ಏರಿಕೆಯಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಾಗಿ ನಾವು ಪಾವತಿಸುವ ಹಣದಲ್ಲಿ ಬಹುಪಾಲು ತೆರಿಗೆರೂಪದಲ್ಲಿ ರಾಜ್ಯ ಸರ್ಕಾರಕ್ಕೇ ಹೋಗುತ್ತದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಸಂದೇಶವನ್ನು ಪರಿಶೀಲಿಸಲು ಅಡುಗೆ ಅನಿಲ ಸಿಲಿಂಡರ್‌ಗೆ ವಿಧಿಸುವ ತೆರಿಗೆಯ ವಿವರಣೆಗಳನ್ನು ಸರ್ಚ್ ಮಾಡಿದಾಗ, ಎಲ್‌ಪಿಜಿ ಸಿಲಿಂಡರ್‌ ಮೇಲೆ ಕೇಂದ್ರ ಸರ್ಕಾರವು ಶೇ 5ರಷ್ಟು ಜಿಎಸ್‌ಟಿ ವಿಧಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದರಲ್ಲಿ ಕೇಂದ್ರ ಸರ್ಕಾರಕ್ಕೆ ಶೇ 2.50ರಷ್ಟು ಮತ್ತು ರಾಜ್ಯ ಸರ್ಕಾರಕ್ಕೆ ಶೇ 2.50ರಷ್ಟು ಹಂಚಿಕೆಯಾಗುತ್ತದೆ. ರಾಜ್ಯ ಸರ್ಕಾರವು ಯಾವದೇ ಹೆಚ್ಚಿನ ತೆರಿಗೆ ವಿಧಿಸುವುದಿಲ್ಲ. ಬದಲಿಗೆ ಕೇಂದ್ರ ಸರ್ಕಾರವೇ ಎಲ್‌ಪಿಜಿ ತಯಾರಿಕೆಯ ಕಚ್ಚಾವಸ್ತುವಾದ ನೈಸರ್ಗಿಕ ಅನಿಲದ (ಸಾಂದ್ರೀಕೃತ) ಮೇಲೆ ಶೇ 5ರಷ್ಟು ಆಮದು ಸುಂಕ, ಶೇ 14ರಷ್ಟು ಹೆಚ್ಚುವರಿ ಆಮದು ಸುಂಕ ಮತ್ತು ಶೇ 14ರಷ್ಟು ಎಕ್ಸೈಸ್‌ ಸುಂಕ ವಿಧಿಸುತ್ತದೆ.

ನೈಸರ್ಗಿಕ ಅನಿಲದ ಮೇಲೆ ಶೇ 5ರಷ್ಟು ಆಮದು ಸುಂಕ ವಿಧಿಸುತ್ತದೆ. ಕಚ್ಚಾತೈಲ ಸಂಸ್ಕರಣೆ ಮೂಲಕವೂ ಎಲ್‌ಪಿಜಿ ತಯಾರಿಸಲಾಗುತ್ತದೆ. ಕಚ್ಚಾತೈಲದ ಮೇಲೆ ಕೇಂದ್ರ ಸರ್ಕಾರವು ₹51ರಷ್ಟು ಆಮದು ಸುಂಕ, ₹51ರಷ್ಟು ಎಕ್ಸೈಸ್‌ ಸುಂಕ ಮತ್ತು ಪ್ರತಿ ಟನ್‌ಗೆ ₹6,700ರಷ್ಟು ಹೆಚ್ಚುವರಿ ಎಕ್ಸೈಸ್‌ ಸುಂಕ ವಿಧಿಸುತ್ತದೆ.

ಈ ಪ್ರಕಾರ ಎಲ್‌ಪಿಜಿ ಸಿಲಿಂಡರ್‌ ಮೇಲೆ ಕೇಂದ್ರ ಸರ್ಕಾರವು ಹೆಚ್ಚಿನ ತೆರಿಗೆ ವಿಧಿಸದೇ ಇದ್ದರೂ, ಎಲ್‌ಪಿಜಿ ತಯಾರಿಕೆಯಲ್ಲಿ ಬಳಸುವ ಕಚ್ಚಾತೈಲದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸುತ್ತದೆ. ಸಿಲಿಂಡರ್‌ವೊಂದಕ್ಕೆ ಇದ್ದ ರೂ 1250 ಬೆಲೆಯಲ್ಲಿ 200ರೂ ಕಡಿತ ಮಾಡಿತ್ತು. ಒಂದೆಡೆ ಸತತ 9 ವರ್ಷಗಳಿಂದ ಅಡುಗೆ ಅನಿಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಮತ್ತೊಂದು ಕಡೆ ಸಿಲಿಂಡರ್‌ಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗೆ ವಿಧಿಸುವ ತೆರಿಗೆಯಲ್ಲಿ ಕೇಂದ್ರ ಸರ್ಕಾರಕ್ಕೆ ರೂ 24 ರಾಜ್ಯ ಸರ್ಕಾರಕ್ಕೆ 291 ರೂ ಹೋಗುತ್ತದೆ ಎಂಬುದು ಸುಳ್ಳು.

ಕೃಪೆ : ಬೂಮ್ ಲೈವ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಭಾರತದ ವಿರುದ್ದ ಹೀನಾಯ ಸೋಲು ಕಂಡ ಪಾಕ್ ತಂಡದ ಆಟಗಾರರ ಮೇಲೆ ಹಲ್ಲೆ ನಡೆದಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್ : ಗ್ಯಾಸ್ ಸಿಲಿಂಡರ್‌ಗೆ ವಿಧಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಪಾಲು ಸಿಗುತ್ತದೆಯೇ?”

Leave a Reply

Your email address will not be published.

Verified by MonsterInsights