ಫ್ಯಾಕ್ಟ್‌ಚೆಕ್ : ಜಿ20 ಶೃಂಗಸಭೆ ಮೋದಿ-ಬಿಡೇನ್ ಮಾತುಕತೆ ನಡೆದ ಸಭಾಂಗಣದಲ್ಲಿ ಮಹಾಭಾರತ ಚಿತ್ರವನ್ನು ಇರಿಸಲಾಗಿತ್ತೇ?

ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಜಿ-20 ಶೃಂಗಸಭೆ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

4 ಜನರು, ಓವಲ್ ಕಚೇರಿ ಮತ್ತು ಪಠ್ಯ 'THE THEWALL WALL THE PAINTING' ಹೇಳುತ್ತಿದೆ ನ ವಿವರಣೆಯಾಗಿರಬಹುದು

ಈ ಫೋಟೋದಲ್ಲಿ, ಇಬ್ಬರು ನಾಯಕರ ಹಿಂದಿನ ಸ್ಕ್ರೀನ್‌ನಲ್ಲಿ ಮಹಾಭಾರತ ರಥದ ವರ್ಣಚಿತ್ರವಿರುವ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪ್ರಧಾನಿ ಮೋದಿ ಮತ್ತು ಜೋ ಬಿಡೇನ್ ಅವರು ಜಿ20 ಶೃಂಗಸಭೆ ಸಂದರ್ಭದಲ್ಲಿ ಎರಡು ದೇಶದ ಉಭಯ ನಾಯಕರು ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲಿ ಮಹಾಭಾರತದ ಚಿತ್ರವನ್ನು ಹಿಂದಿನ ಸ್ಕ್ರೀನ್ ಮೇಲೆ ಮೂಡಿಸಲಾಗಿತ್ತೆ ಎಂದು ಪರಿಶೀಲಿಸಲು X ಅಕೌಂಟ್‌ಅನ್ನು ಪರಿಶೀಲಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡ ಟ್ವೀಟ್ ಲಭ್ಯವಾಗಿದೆ.

ಪ್ರಧಾನಿ ಮೋದಿಯನ್ನು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಭೇಟಿಯಾದ ಸಂದರ್ಭದಲ್ಲಿ ಈ ಫೋಟೋಗಳನ್ನು ಸೆರೆಹಿಡಿಯಲಾಗಿದೆ. ವೈರಲ್ ಫೋಟೋಗೆ ಹೋಲುವ ಫೋಟೋವು ವಿಶಾಲವಾದ ಶಾಟ್ ಆಗಿದ್ದು, ಇದರಲ್ಲಿ ಬಿಡೆನ್, ಮೋದಿ ಮತ್ತು ಇತರ ಇಬ್ಬರು ಮಹಿಳೆಯರನ್ನು ಹೊರತುಪಡಿಸಿ ಇತರ ಅನೇಕ ಪ್ರತಿನಿಧಿಗಳನ್ನು ಕಾಣಬಹುದು. ಈ ಫೋಟೋವನ್ನು ಎಡಿಟ್ ಮಾಡುವ ಮೂಲಕ ವೈರಲ್ ಫೋಟೋವನ್ನು ರಚಿಸಲಾಗಿದ್ದು, ಅದಕ್ಕೆ ಮಹಾಭಾರತದ ರಥದ ವರ್ಣಚಿತ್ರವನ್ನು ಸೇರಿಸಲಾಗಿದೆ.

ಜೋ ಬಿಡೆನ್ ಅವರೊಂದಿಗಿನ ಪ್ರಧಾನಿ ಮೋದಿ ಭೇಟಿಯ ವೀಡಿಯೊವನ್ನು ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಮೂಲ ಫೋಟೊದಲ್ಲಿ ಮಹಾಭಾರತಕ್ಕೆ ಸಂಬಂಧಿಸಿದ ಯಾವುದೇ ಚಿತ್ರವೂ ಈ ಸಭೆಯಲ್ಲಿ ಪ್ರೆಸೆಂಟ್ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜೋ ಬಿಡೆನ್ ಮತ್ತು ನರೇಂದ್ರ ಮೋದಿಯವರು ಮಾತುಕತೆ ನಡೆದ ಸ್ಥಳದಲ್ಲಿ ಖಾಲಿ ಇರುವ ಹಿಂಬದಿ ಗೋಡೆಯ ಚಿತ್ರಕ್ಕೆ ಮಹಾಭಾರತದ ಚಿತ್ರವನ್ನು ಎಡಿಟ್ ಮಾಡಿ ಸೇರಿಸಿ ನೈಜ ಚಿತ್ರವೆಂಬಂತೆ ರಚಿಸಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಜಿ 20 ಔತಣ ಕೂಟಕ್ಕೆ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿಗೆ ಆಹ್ವಾನ ನೀಡಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights