ಫ್ಯಾಕ್ಟ್‌ಚೆಕ್ : ಜಿ 20 ಔತಣ ಕೂಟಕ್ಕೆ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿಗೆ ಆಹ್ವಾನ ನೀಡಲಾಗಿದೆಯೇ?

ಜಿ20 ಶೃಂಗಸಭೆ ಹಿನ್ನೆಲೆ ರಾಷ್ಟ್ರಪತಿಗಳು ಆಯೋಜಿಸಿರುವ ಔತಣ ಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನನ್ನು ನೀಡಿಲ್ಲ  ಆದರೆ ಉದ್ಯಮಿಗಳಾದ ಅಂಬಾನಿ ಅದಾನಿ ಸೇರಿದಂತೆ ಭಾರತದ 500 ಉದ್ಯಮಿಗಳನ್ನು ಜಿ 20 ಔತಣ ಕೂಟಕ್ಕೆ ಆಹ್ವಾನಿಸಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

‘ಸೆಪ್ಟೆಂಬರ್ 9ರಂದು ಭಾರತ್ ಮಂಡಪಂನಲ್ಲಿ ಆಯೋಜಿಸಲಾಗುವ ಜಿ20 ಇಂಡಿಯಾ ಸ್ಪೆಷಲ್ ಡಿನ್ನರ್ ಕಾರ್ಯಕ್ರಮದಲ್ಲಿ ಪ್ರಮುಖ ಬಿಸಿನೆಸ್ ಲೀಡರ್​ಗಳನ್ನು ಆಹ್ವಾನಿಸಲಾಗಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆಯ ಲೇಖನವನ್ನಾಧರಿಸಿ ಮಾಧ್ಯಮಗಳಲ್ಲಿ ವರದಿಗಳಾಗಿದ್ದವು.

ಸುಳ್ಳು ಸುದ್ದಿ

ರಾಯ್ಟರ್ಸ್ ವರದಿಯನ್ನಾಧರಿಸಿ ಪ್ರಕಟವಾದ ಸುದ್ದಿಗಳ ಪ್ರಕಾರ, ಜಿ20 ನಿಮಿತ್ತ ನಡೆಸಲಾಗುವ ರಾತ್ರಿ ಔತಣಕೂಟ ಕಾರ್ಯಕ್ರಮಕ್ಕೆ 500 ಮಂದಿ ಪ್ರಮುಖ ಉದ್ಯಮಿಗಳಿಗೆ ಆಹ್ವಾನ ಹೋಗಿದೆ. ಇವರಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಕುಮಾರ ಮಂಗಲಂ ಬಿರ್ಲಾ, ಸುನಿಲ್ ಮಿಟ್ಟಲ್, ಎನ್ ಚಂದ್ರಶೇಖರನ್ (ಟಾಟಾ ಸನ್ಸ್ ಛೇರ್ಮನ್) ಮೊದಲಾದವರೂ ಇದ್ದಾರೆ. ಈ ಔತಣಕೂಟದಲ್ಲಿ ಜಿ20 ದೇಶಗಳ ಮುಖ್ಯಸ್ಥರೂ ಇರಲಿದ್ದು, ಭಾರತದ ಪ್ರಮುಖ 500 ಉದ್ಯಮಿಗಳೊಂದಿಗೆ ನೇರವಾಗಿ ಸಂವಾದ ನಡೆಸಲು ಅನುಕೂಲವಾಗುತ್ತದೆ ಎಂದು ರಾಯ್ಟರ್ಸ್ ವರದಿಯಲ್ಲಿ ತಿಳಿಸಲಾಗಿತ್ತು. ಆದರೆ ಇದನ್ನು ತಳ್ಳಿಹಾಕಿರುವ (PIB) ಸೆಪ್ಟೆಂಬರ್ 9ರಂದು ನಡೆಯುವ ವಿಶೇಷ ಔತಣ ಕೂಟ ಕಾರ್ಯಕ್ರಮದಲ್ಲಿ ಯಾವ ಉದ್ಯಮಿಗಳನ್ನೂ ಆಹ್ವಾನಿಸಲಾಗಿಲ್ಲ ಎಂದು ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (PIB) ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ನವದೆಹಲಿಯಲ್ಲಿ ನಡೆಯುತ್ತಿರುವ ಜಿ 20ಶೃಂಗ ಸಭೆಗೆ ಭಾರತ ಆತಿಥ್ಯವಹಿಸಿದೆ. ಆದರೆ ಈ ಔತಣ ಕೂಟಕ್ಕೆ ಅಂಬಾನಿ ಅದಾನಿ ಸೇರಿದಂತೆ ಭಾರತದ ಪ್ರಮುಖ 500 ಉದ್ಯಮಿಗಳನ್ನು ಆಹ್ವಾನಿಸಲಾಗಿದೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : 5 ಸಾವಿರ ಸಾಧುಗಳನ್ನು ಹತ್ಯೆ ಮಾಡುವಂತೆ ಇಂದಿರಾ ಆದೇಶಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights