ಫ್ಯಾಕ್ಟ್‌ಚೆಕ್ : 5 ಸಾವಿರ ಸಾಧುಗಳನ್ನು ಹತ್ಯೆ ಮಾಡುವಂತೆ ಇಂದಿರಾ ಆದೇಶಿಸಿದ್ದು ನಿಜವೇ?
‘1966, ಗೋಪಾಷ್ಟಮಿ (ಗೋವುಗಳನ್ನು ಪೂಜಿಸುವ ಹಬ್ಬ) ತಿಥಿಯಂದು, 3–7 ಲಕ್ಷ ಸಾಧುಗಳು ಗೋಹತ್ಯೆ ನಿಲ್ಲಿಸುವ ಕಾಯಿದೆ ಜಾರಿ ಮಾಡಬೇಕೆಂದು ದೆಹಲಿಯಲ್ಲಿ ಹಸುಗಳೊಂದಿಗೆ ಪ್ರತಿಭಟಿಸುತ್ತಾರೆ. ಪ್ರಧಾನಿ ಇಂದಿರಾಗಾಂಧಿ ಗೋಲೀಬಾರ್‌ಗೆ ಆದೇಶಿಸುತ್ತಾಳೆ. ಸುಮಾರು 5,000 ಸಾಧು ಸಂತರನ್ನು ಮತ್ತು ಹಸುಗಳನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ’ .
ಇದನ್ನು ಕಂಡ ಸಂತ ಕರಪತ್ರಿ ಸ್ವಾಮೀಜಿ ಹಸುಗಳ ಮೇಲೆ ಕಗ್ಗೊಲೆ ಮಾಡಿದ ನಿನ್ನ ನಾಶ ಗೋಪಾಷ್ಟಮಿಯಂದೇ ಕ್ರೂರವಾಗಿ ಆಗಲಿ ಎಂದು ಶಾಪ ಹಾಕುತ್ತಾರೆ. ಇಂದಿರಾ ಗಾಂಧಿ ಸಿಕ್ಕರಿಂದ ಕೊಲೆಯಾಗಿದ್ದು 31 ಅಕ್ಟೋಬರ್ 1984 ಅಂದು ಗೋಪಾಷ್ಟಮಿ ತಿಥಿ! ಇದು ಇತಿಹಾಸದಲ್ಲಿ ದಾಖಲಾಗಿದೆ. ಎಂಬ ಪೋಸ್ಟ್‌ವೊಂದು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಜನರನ್ನು ದಾರಿ ತಪ್ಪಿಸುವಂತ ಸುಳ್ಳು ಮಾಹಿತಿ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ವರದಿಯ ಪ್ರಕಾರ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಹಲವು ಮಾಹಿತಿಗಳು ತಪ್ಪಾಗಿವೆ ಎಂದು ಉಲ್ಲೇಖಿಸಿದೆ.
1966ರ ನವೆಂಬರ್ 7ರಂದು ಗೋಹತ್ಯೆ ನಿಲ್ಲಿಸುವ ಕಾಯ್ದೆಯನ್ನು ಜಾರಿ ಮಾಡಬೇಕು ಎಂದು ಪ್ರತಿಭಟನೆ ನಡೆದಿತ್ತು. ಸರ್ವದಳೀಯ ಗೋರಕ್ಷಾ ಮಹಾಭಿಯಾನ ಸಮಿತಿಯು ಸತ್ಯಾಗ್ರಹವನ್ನು ಹಮ್ಮಿಕೊಂಡಿತ್ತು. ಇದಕ್ಕೆ ಜನಸಂಘದ ಬೆಂಬಲವೂ ದೊರೆತಿತ್ತು.
ಈ ಸತ್ಯಾಗ್ರಹದಲ್ಲಿ ಸುಮಾರು ಒಂದು ಲಕ್ಷ ಸಾಧುಗಳು ಸೇರಿದ್ದರು. ಅಂದು ಕೆಲವು ಧಾರ್ಮಿಕ ಮುಖಂಡರು ಹಾಗೂ ಸಂಸದ ಸ್ವಾಮಿ ರಾಮೇಶ್ವರಾನಂದ ಅವರ ಭಾಷಣದಿಂದ ಉತ್ಸಾಹಿತರಾದ ಸತ್ಯಾಗ್ರಹಿಗಳು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಆ ವೇಳೆ ಪೊಲೀಸರು ಹಾಗೂ ಗುಂಪಿನ ನಡುವೆ ಸಂಘರ್ಷ ಏರ್ಪಟಿತ್ತು. ಈ ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಂದಿನ ಹಲವು ಪತ್ರಿಕೆಗಳು ವರದಿ ಮಾಡಿದ್ದವು. ಇದೇ ಸಂಖ್ಯೆಯನ್ನು ಸರ್ಕಾರವು ಸಂಸತ್ತಿಗೂ ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸತ್ಯಾಗ್ರಹಕ್ಕೆ 3–7 ಲಕ್ಷ ಜನರು ಸೇರಿದ್ದರು ಮತ್ತು 5 ಸಾವಿರ ಸಾಧುಗಳ ಹತ್ಯೆ ನಡೆದಿತ್ತು ಎಂಬುದು ಸುಳ್ಳು ಎಂದು ‘ಇಂಡಿಯಾ ಟುಡೆ’ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಸಾಧುವೊಬ್ಬರ ಮೇಲೆ ಹಲ್ಲೆ ನಡೆಸಿ ಕೂದಲು ಬೋಳಿಸಿದ ವ್ಯಕ್ತಿ ಮುಸ್ಲಿಂ ಅಲ್ಲ