ಫ್ಯಾಕ್ಟ್‌ಚೆಕ್ : ‘ರಘುಪತಿ ರಾಘವ ರಾಜಾ ರಾಮ್’ ಹಾಡಿನಲ್ಲಿ ಬರುವ ‘ಅಲ್ಲಾ’ ಎಂಬ ಪದವನ್ನು ತೆಗೆಯಲಾಗಿದೆ ಎಂಬುದು ಸುಳ್ಳು

ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ವಿಶ್ವ ನಾಯಕರು ಮಹಾತ್ಮ ಗಾಂಧಿ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ “ರಘುಪತಿ ರಾಘವ ರಾಜಾ ರಾಮ್” ಎಂಬ ನುಡಿಸಲಾದ ಹಿನ್ನಲೆ ಸಂಗೀತ  ಕೇಳಬಹುದು. ಈ ಹಾಡಿನಿಂದ ‘ಅಲ್ಲಾ’ ಪದವನ್ನು ತೆಗೆದುಹಾಕಲಾಗಿದೆ ಎಂದು ಪ್ರತಿಪಾದಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

G20 ಸಮ್ಮೇಳನಕ್ಕೆ ಬಂದ ಗಣ್ಯರನ್ನು ರಾಜಘಾಟಗೆ ಕರೆದೊಯ್ದಾಗ, ಹಿನ್ನೆಲೆಯಲ್ಲಿ ನುಡಿಸುತ್ತಿರುವ ಭಜನೆ “ರಘುಪತಿ ರಾಘವ ರಾಜಾರಾಂ.” ಆಲಿಸಿರಿ. ಈಶ್ವರ ಅಲ್ಲಾಹ ತೇರೊ ನಾಮ ಮಾಯವಾಗಿ. ಧನುಷಧಾರಿ ಸೀತಾರಾಮ ಎಂದು ಹೇಳಿರುವದನ್ನು ಗಮನಿಸಿ. ಸಮ್ಮೇಳನದಲ್ಲಿ ಎಲ್ಲಿಯೂ ತಾಜಮಹಲ / ಕುತುಬ ಮಿನಾರ ಇತ್ಯಾದಿ ಬಿತ್ತಿ ಚಿತ್ರಗಳು ಕಾಣಿಸಲೇ ಇಲ್ಲ. ಇಂಡಿಯಾ ಬದಲಾಗುತ್ತಿದೆ. ಭಾರತ ಮಾತಾ ಕೀ ಜಯ. ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆಯಂತೆ “ರಘುಪತಿ ರಾಘವ ರಾಜಾರಾಂ” ಗೀತೆಯಲ್ಲಿ ಬರುವ ‘ಅಲ್ಲಾ’ ಎಂಬ ಪದವನ್ನು ತೆಗೆದು “ಧನುಷಧಾರಿ ಸೀತಾರಾಮ” ಎಂದು ಸೇರಿಸಲಾಗಿತ್ತೆ ಎಂಬದನ್ನು ಪರಿಶೀಲಿಸಿದಾಗ ವಿಡಿಯೋವನ್ನು ಎಡಿಟ್ ಮಾಡಿ ಮೂಲ ಹಾಡನ್ನು ತಿರುಚಲಾಗಿದೆ ಎಂದು ತಿಳಿದು ಬಂದಿದೆ.

ಮೂಲ ವಿಡಿಯೋವನ್ನು ಸರ್ಚ್ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನಲ್‌ಅನ್ನು ಪರಿಶೀಲಿಸಿದಾಗ, ಸೆಪ್ಟೆಂಬರ್ 9 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ.

ಎನ್‌ಡಿಟಿವಿಯ ಯೂಟ್ಯೂಬ್ ಚಾನೆಲ್ ಜಿ20 ಶೃಂಗಸಭೆಗೆ ಆಗಮಿಸಿದ್ದ ಅತಿಥಿಗಳು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಗೌರವ ಸಲ್ಲಿಸುವ ಸಂಪೂರ್ಣ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ. ಈ ತುಣುಕಿನಲ್ಲೂ, 1:39:15 ಮಾರ್ಕ್‌ನಲ್ಲಿ, “ಈಶ್ವರ ಅಲ್ಲಾ ತೇರೋ ನಾಮ್, ಸಬ್ಕೋ ಸನ್ಮತಿ ದೇ ಭಗವಾನ್” ಎಂಬ ವಾಕ್ಯವನ್ನು ಹೊಂದಿರುವ ಅದೇ ಭಾವಗೀತೆಯನ್ನು ಪ್ಲೇ ಮಾಡುವುದನ್ನು ಕೇಳಬಹುದು.

ಮಹಾತ್ಮಾ ಗಾಂಧಿಯವರಿಗೆ ನಮನ ಸಲ್ಲಿಸಿ ನಿರ್ಗಮಿಸಲು ಪ್ರಾರಂಭಿಸಿದ ನಂತರ, “ರಘುಪತಿ ರಾಘವ್ ರಾಜ ರಾಮ್, ಪತಿತ್ ಪವನ್ ಸೀತಾರಾಮ್” ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ. ಗಮನಿಸಬೇಕಾದ ಅಂಶವೆಂದರೆ 7:39 ನಿಮಿಷಗಳಲ್ಲಿ, “ಈಶ್ವರ ಅಲ್ಲಾ ತೇರೋ ನಾಮ್, ಸಬ್ಕೋ ಸಮಂತಿ ದೇ ಭಗವಾನ್” ಎಂಬ ಸಾಲು ಕೇಳಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಜ್‌ಘಾಟ್‌ನಲ್ಲಿ ವಿದೇಶಿ ಅತಿಥಿಗಳ ಮುಂದೆ ನರೇಂದ್ರ ಮೋದಿ ಅವರು ಹಾಡಿನಿಂದ ‘ಅಲ್ಲಾ’ ಎಂಬ ಪದವನ್ನು ತೆಗೆದುಹಾಕಿದ್ದಾರೆ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ಸಂಕ್ಷಿಪ್ತವಾಗಿ ಹೇಳುವುದಾದರೆ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ರಾಜ್‌ಘಾಟ್‌ನಲ್ಲಿ ವಿದೇಶಿ ಪ್ರತಿನಿಧಿಗಳ ಸಮ್ಮುಖದಲ್ಲಿ ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಿದಾಗ ನುಡಿಸಲಾಗುತ್ತಿರುವ ಸ್ತೋತ್ರದಿಂದ ‘ಅಲ್ಲಾ’ ಪದವನ್ನು ತೆಗೆದುಹಾಕಲಾಗಿದೆ ಎಂದು ತಪ್ಪಾಗಿ ಪ್ರತಿಪಾದಿಸಿದ್ದಾರೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿಯ ಚಿನ್ನದ ಪ್ರತಿಮೆಯನ್ನು ಸೌದಿ ಅರೇಬಿಯಾದಲ್ಲಿ ನಿರ್ಮಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights