ಫ್ಯಾಕ್ಟ್ಚೆಕ್ : ಅಯೋಧ್ಯ ರಾಮ ಮಂದಿರದ ಒಳಭಾಗದ ದೃಶ್ಯಗಳು ಎಂದು ಸಂಬಂಧವಿಲ್ಲ ವಿಡಿಯೋ ಹಂಚಿಕೆ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಒಳಾಂಗಣ ದೃಶ್ಯಗಳು ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಫೋಟೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅಲಂಕಾರಿಕ ಒಳಾಂಗಣವನ್ನು ಹೊಂದಿರುವ ಸಾಂಪ್ರದಾಯಿಕ ಕಟ್ಟಡದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೊ ಅಯೋಧ್ಯೆ ರಾಮ ಮಂದಿರದ ಒಳ ನೋಟ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್ :
ಅಯೋಧ್ಯೆಯ ರಾಮಮಂದಿರದ ಒಳ ಭಾಗದ ದೃಶ್ಯಗಳು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಅನ್ನು ಪರಿಶೀಲಿಸಿದಾಗ, ವೈರಲ್ ವಿಡಿಯೋದಲ್ಲಿ “Nagpur Experience” ಎಂಬ ವಾಟರ್ ಮಾರ್ಕ ಇರುವುದನ್ನು ಗಮನಿಸಬಹುದು.
“Nagpur Experience” ಎಂಬ ಕ್ಲೂನ ಆಧಾರದಲ್ಲಿ ಸರ್ಚ್ ಮಾಡಿದಾಗ “Nagpur Experience” ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ ಅದೇ ರೀತಿಯ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೊವನ್ನು 8 ಜುಲೈ 2023 ರಂದು ಅಪ್ಲೋಡ್ ಮಾಡಲಾಗಿದೆ ಮತ್ತು ವಿಡಿಯೊದ ಶೀರ್ಷಿಕೆಯ ಪ್ರಕಾರ, “ಶ್ರೀ ರಾಮಧಾಮ, ಕೊರಾಡಿ ಮಂದಿರ” ಎಂದು ಉಲ್ಲೇಖಿಸಲಾಗಿದೆ.
ಅಯೋಧ್ಯ ರಾಮಮಂದಿರದ ದೃಶ್ಯಗಳಲ್ಲ:
ಈ ಸ್ಥಳ ನಿಜವಾಗಿಯೂ ಅಯೋಧ್ಯೆಯ ರಾಮಮಂದಿರದ್ದೆ ಎಂದು ಪರಿಶೀಲಿಸಲು ಮತ್ತಷ್ಟು ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿರುವ ದೃಶ್ಯವು ನಾಗಪುರದ ಕೊರಾಡಿಯಲ್ಲಿರುವ ರಾಮಾಯಣ ಸಾಂಸ್ಕೃತಿಕ ಕೇಂದ್ರದ ದೃಶ್ಯಗಳು ಎಂದು ತಿಳಿದುಬಂದಿದೆ.

ಭಾರತೀಯ ವಿದ್ಯಾ ಭವನದ ಸಾಂಸ್ಕೃತಿಕ ಕೇಂದ್ರದ ಮಹಾಲಕ್ಷ್ಮಿ ಜಗದಂಬಾ ದೇವಿ ದೇವಸ್ಥಾನದ ದೃಶ್ಯಗಳು ಎಂದು ವರದಿ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕೇಂದ್ರವನ್ನು (ಭಾರತೀಯ ವಿದ್ಯಾ ಭವನದ ಸಾಂಸ್ಕೃತಿಕ ಕೇಂದ್ರ) ಜುಲೈ 2023 ರಲ್ಲಿ (ಇಲ್ಲಿ ಮತ್ತು ಇಲ್ಲಿ) ಉದ್ಘಾಟಿಸಿದರು. ಆದರೆ ಅಯೋಧ್ಯ ರಾಮಮಂದಿರವನ್ನು 2024ಕ್ಕೆ ಉದ್ಘಾಟಿಸಲಾಗುವುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಗಳು ವಾಸ್ತವವಾಗಿ ನಾಗಪುರದ ಕೊರಾಡಿಯಲ್ಲಿರುವ ರಾಮಾಯಣ ಸಾಂಸ್ಕೃತಿಕ ಕೇಂದ್ರದ ಒಳಭಾಗದ ದೃಶ್ಯಗಳು ಎಂಬುದು ಸ್ಪಷ್ಟವಾಗಿದೆ. ಆದರೆ ಇದನ್ನೆ ಅಯೋಧ್ಯ ರಾಮ ಮಂದಿರದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಪ್ರಧಾನಿ ಮೋದಿಯ ಚಿನ್ನದ ಪ್ರತಿಮೆಯನ್ನು ಸೌದಿ ಅರೇಬಿಯಾದಲ್ಲಿ ನಿರ್ಮಿಸಲಾಗಿದೆಯೇ?

