ರಾಜಕೀಯ ಚಿಂತೆ ಮರೆತು ಅಪ್ಪಟ್ಟ ಕ್ರೀಡಾಪಟುವಾಗಿ ಕಬಡ್ಡಿ ಆಟವಾಡಿದ ಬಿಜೆಪಿ ಶಾಸಕ…!
ರಾಜಕೀಯ ಚಿಂತೆ ಮರೆತು ಸುರಪುರದ ಬಿಜೆಪಿ ಶಾಸಕ ರಾಜುಗೌಡ ಅವರು ಅಪ್ಪಟ್ಟ ಕಬಡ್ಡಿ ಕ್ರೀಡಾಪಟುವಾಗಿ ಕಬಡ್ಡಿ ಆಟವಾಡಿದರು.ಸಚಿವ ಸಂಪುಟ ವಿಸ್ತರಣೆ ನಂತರ ಕೆಲ ದಿನಗಳ ಕಾಲ ಅಸಮಾಧಾನಗೊಂಡಿದ್ದ ಸುರಪುರ ಶಾಸಕ ರಾಜುಗೌಡ ಅವರು ಫುಲ್ ರಿಲ್ಯಾಕ್ಸ್ ಆಗಿದ್ದಾರೆ.
ಯುವಕರ ಜೊತೆ ಬೆರೆತು ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿದರು.ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ವ್ಯಾಪ್ತಿಗೆ ಬರುವ ಕುಂಬಾರಪೇಟೆ ಯಲ್ಲಿನ ಈಶ್ವರಲಿಂಗ,ಬೇಡರ ಕಣ್ಣಪ್ಪ ಹಾಗೂ ಖಾನಪ್ಪ ಶರಣರ ಜಾತ್ರಾ ಮಹೋತ್ಸವ ನಿಮಿತ್ಯ, ದೇವಸ್ಥಾನ ಆಡಳಿತ ಮಂಡಳಿಯು ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಂಡಿತ್ತು,ಈ ವೇಳೆ ಶಾಸಕ ರಾಜುಗೌಡ ಅವರು ಕಬಡ್ಡಿ ಪಂದ್ಯಕ್ಕೆ ಚಾಲನೆ ನೀಡಿ ಯುವಕರ ಜೊತೆ ಕಬಡ್ಡಿ ಆಡಿದರು.
ಗ್ರಾಮೀಣ ಕ್ರೀಡೆಗಳನ್ನು ಪ್ರೊತ್ಸಾಹಿಸಬೇಕೆನ್ನುವ ಕಾರ್ಯ ಕೇವಲ ಭಾಷಣಕ್ಕೆ ಸಿಮಿತಗೊಳಿಸುವ ರಾಜಕೀಯ ನಾಯಕರಿಗೆ ಶಾಸಕ ರಾಜುಗೌಡ ಅವರು ಕಬಡ್ಡಿ ಪಂದ್ಯದಲ್ಲಿ ಕ್ರೀಡಾಪಟುವಿನಂತೆ ಡೈಹೊಡೆದು ಕಬಡ್ಡಿ ಆಡಿದ್ದು ಕ್ರೀಡಾಭಿಮಾನಿಗಳಿಗೆ ಖುಷಿ ಕೊಟ್ಟಿತ್ತು.

