‘ರೈ’ ಶೀರ್ಷಿಕೆಯೊಂದಿಗೆ ಬೆಳ್ಳಿತೆರೆ ಮೇಲೆ ಬರಲಿದೆಯಾ ‘ಮಾಜಿ ಡಾನ್’ ಜೀವನ ಕಥೆ…?

2016ರಲ್ಲಿ ‘ರೈ’ ಎಂಬ ಶೀರ್ಷಿಕೆಯೊಂದಿಗೆ ಮುತ್ತಪ್ಪ ರೈ ಜೀವನ ಕುರಿತ ‘ದ ಗ್ರೇಟರ್ ಗ್ಯಾಂಗ್ ಸ್ಟರ್ ಎವರ್’ ಎಂಬ ಟ್ಯಾಗ್ ಲೈನ್ ನೊಂದಿಗೆ ನಿರ್ಮಾಪಕ ಸಿ ಆರ್ ಮನೋಹರ್ ಚಿತ್ರ ಮಾಡಲು ಬಯಸಿದ್ದರು. ಸದ್ಯ ಮತ್ತದೇ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಹೌದು… ಮಾಜಿ ಡಾನ್ ಮುತ್ತಪ್ಪ ರೈ ಜೀವನ ಕಥೆಯಾಧಾರಿತ ಚಿತ್ರ ಮಾಡುವ ವಿಚಾರ ಹೊಸದೇನಲ್ಲ. ಈ ಹಿಂದೆ ಈ ಬಗ್ಗೆ ಪ್ರಸ್ತಾಪವಾಗಿತ್ತು. ಆದರೆ ಸದ್ಯ ಮಯತ್ತಪ್ಪ ರೈ ಸಾವಿನ ಬಳಿಕೆ ಈ ವಿಚಾರ ಮತ್ತೆ ಸುದ್ದಿಯಾಗಿದೆ. ಹಾಗಾದ್ರೆ ಹೀಗೊಂದು ಸಿನಿಮಾ ರೈ ಬಗ್ಗೆ ಬರಲಿದಿಯಾ..?

ನಾಲ್ಕು ವರ್ಷಗಳ ಹಿಂದೆ  ‘ರೈ’ ಎಂಬ ಶೀರ್ಷಿಕೆಯೊಂದಿಗೆ ವಿವೇಕ್ ಒಬೆರಾಯ್ ಲುಕ್  ಪೋಸ್ಟರ್ ವೊಂದು ಬಿಡುಗಡೆಯಾಗಿತ್ತು. ಕೇವಲ ಪೋಸ್ಟರ್ ಮಾತ್ರವಲ್ಲ, ಅಭಿಮಾನಿಗಳು, ಹಿತೈಷಿಗಳ ಸಮ್ಮುಖದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿತ್ತು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದರ ನಿರ್ದೇಶನದ ಹೊಣೆ ಹೊತ್ತಂತೆ, ಚಿತ್ರವನ್ನು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಿಸುವುದೆಂದು ಮಂಗಳೂರು, ಬೆಂಗಳೂರು, ಮುಂಬೈ, ಲಂಡನ್ ಮತ್ತು ದುಬೈಗಳಲ್ಲಿ ಚಿತ್ರೀಕರಣ ಮಾಡುವುದೆಂದು ತೀರ್ಮಾನವಾಗಿತ್ತು. ಈ ಚಿತ್ರದಲ್ಲಿ ಮುತ್ತಪ್ಪ ರೈ ಪಾತ್ರ ಮಾಡುತ್ತಾರೆಂದು ಕೇಲಿ ಬಂದರೂ ನಂತರದಲ್ಲಿ ಇವರ ಬದಲಿಗೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ನಂತರ ಅರ್ಧಕ್ಕೆ ನಿಂತುಹೋಯಿತು.

ಮುತ್ತಪ್ಪ ರೈ ತೀರಿಕೊಂಡಿದ್ದಾರೆ. ಅವರ ಕುರಿತ ಚಿತ್ರ ಬರಲಿದೆಯೇ ಎಂದು ನಿರ್ಮಾಪಕ ಮನೋಹರ್ ಅವರನ್ನು ಕೇಳಿದರೆ ಬೆಳ್ಳಿತೆರೆ ಮೇಲೆ ಮುತ್ತಪ್ಪ ರೈ ಕುರಿತು ಹೇಳುವ ಹಲವು ಆಸಕ್ತಿಕರ ವಿಷಯಗಳಿವೆ. ಚಿತ್ರ ತಯಾರಿಸುತ್ತೇನೆ ಎಂದು ಮುತ್ತಪ್ಪ ರೈ ಬದುಕಿದ್ದಾಗಲೇ ಹೇಳಿದ್ದೆ. ಇದನ್ನು ಮುಂದುವರಿಸಲು ನೋಡುತ್ತಿದ್ದೇನೆ. ಚಿತ್ರಕ್ಕೆ ನ್ಯಾಯ ಒದಗಿಸುವ ನಿರ್ದೇಶಕರು, ಕಥೆ, ಕಲಾವಿದರು ಸಿಕ್ಕಿ ಚಿತ್ರವನ್ನು ತಯಾರಿಸುತ್ತೇನೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಇದರೊಂದಿಗೆ ದರ್ಶನ್ ನಟನೆಯ ಚಕ್ರವರ್ತಿ ಸಿನಿಮಾಕ್ಕೂ ಮುತ್ತಪ್ಪ ರೈ ಜೀವನಕ್ಕೂ ಹೋಲಿಕೆಯಿದೆ ಎಂದು ಹೇಳಲಾಗುತ್ತಿದೆ. ಚಿಂತನ್ ನಿರ್ದೇಶನದ ಸಿಎಸ್ ಡಿ ವೀರ ಫಿಲ್ಮ್ಸ್ ನಡಿ ತಯಾರಾದ ಚಿತ್ರ 2017ರಲ್ಲಿ ಬಿಡುಗಡೆಯಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights