ವಲಸಿಗರ ಮೇಲೆ ದೊಡ್ಡಣನ ಕಣ್ಣು : ನಿರುದ್ಯೋಗ ಸಮಸ್ಯೆ ಉದ್ಭವಿಸದಿರಲು ಬಿಗ್ ಪ್ಲಾನ್!

ವಿನಾಶಕಾರಿ ಕೊರೊನಾ ಇಡೀ ಲೋಕಕ್ಕೆ ಕಂಟಕವಾಗಿಯೇ ಮುಂದುವರಿದಿದ್ದು, ಈ ದುಷ್ಟಶಕ್ತಿಯ ಅಟ್ಟಹಾಸಕ್ಕೆ ಯಾವ ದೇಶವು ಲೆಕ್ಕಕ್ಕಿಲ್ಲದಂತಾಗಿದೆ. ಈ ಹೆಮ್ಮಾರಿಯ ದಾಳಿಗೆ 220ಕ್ಕೂ ಹೆಚ್ಚು ದೇಶಗಳು ಕಂಗೆಟ್ಟಿವೆ. ಜಗತ್ತಿನಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ದಿನನಿತ್ಯದ ಸುದ್ದಿಯಾಗುತ್ತಿದೆ. ಈವರೆಗೆ ಸುಮಾರು 1,70 ಲಕ್ಷ ಜನರನ್ನು ವೈರಸ್ ನುಂಗಿದೆ. ಅಲ್ಲದೆ, ಸೋಂಕಿರ ಸಂಖ್ಯೆ 25 ಲಕ್ಷ ದಾಟುತ್ತಿದೆ.

ಇನ್ನೂ ಕೊರೊನಾದಿಂದ ತತ್ತರಿಸಿ ಹೋದ ಅಮೆರಿಕಾದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದು ಖಚಿತವಾಗಿ ಇದರ ನಿಯಂತ್ರಣಕ್ಕೆ ಮುಂದಾಲೋಚಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂಲ ನಿವಾಸಿಗಳಿಗೆ ಹೆಚ್ಚು ಹೊತ್ತು ಕೊಟ್ಟು ವಲಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಬೆಂಬಿಡದೆ ಕಾಡುತ್ತಿರುವ ಕೊರೊನಾಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ನಲುಗಿ ಹೋಗಿದೆ. ಭವಿಷ್ಯದಲ್ಲಿ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಾತ್ಕಾಲಿಕವಾಗಿ ವಲಸೆಯನ್ನು ಸ್ಥಗಿತಗೊಳಿಸಿ ಆದೇಶಿಸಿದ್ದಾರೆ. ಈ ವೈರಸ್​ ಕಾಣಿಸಿಕೊಂಡಾಗ ನಿರ್ಲಕ್ಷ್ಯ ತೋರಿದ ಪರಿಣಾಮ ಅಮೆರಿಕದಲ್ಲಿ ಕೊರೋನಾ ಮಿತಿಮೀರಿ ಬೆಳೆಯುತ್ತಿದೆ. ಈಗಾಗಲೇ 42 ಸಾವಿರ ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.  ಸೋಂಕಿತರ ಸಂಖ್ಯೆ 7.92 ಲಕ್ಷ ದಾಟಿದೆ.

ಭಾರತದಲ್ಲಿ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ 18 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 1,336 ಹೊಸ ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 18,601ಕ್ಕೆ ಏರಿದೆ. ಅಲ್ಲದೆ 47 ಸೋಂಕಿತರು ಸಾವನ್ನಪ್ಪಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಸದ್ಯ 14,759 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 3,252 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ದೇಶಾದ್ಯಂತ ಒಟ್ಟಾರೆ 590 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ 415 ಕ್ಕೆ ಏರಿದೆ ಸೋಂಕಿತರ ಸಂಖ್ಯೆ. ಇಂದು 7 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದರಲ್ಲಿ ಕಲಬುರಗಿಯಲ್ಲಿ 3 ಜನರಿಗೆ ಸೋಂಕು ಕಂಡುಬಂದಿದೆ. ವಿಜಯಪುರದಲ್ಲಿ 3 , ದಕ್ಷಿಣ ಕನ್ನಡದಲ್ಲಿ ಒಬ್ಬರಿಗೆ ಸೋಂಕು ಹರಡಿದೆ. ಉತ್ತರ ಕರ್ನಾಟಕ ಭಾಗದಲ್ಲೇ 6 ಹೊಸ ಪ್ರಕರಣಗಳು ಕಂಡು ಬಂದಿದೆ. ಕೋಟಿ ಕೋಟಿ ಜನರಿರುವ ಭಾಗದಲ್ಲಿ ಸೋಂಕು ಹರಡುವಿಕೆಯಲ್ಲಿ ಇಳಿಕೆ ಕಂಡಿದ್ದು, ಉತ್ತರ ಕರ್ನಾಟಕದಲ್ಲಿ ಆತಂಕ ಹೆಚ್ಚಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights